HomeLyricsMunjaneddu Kumbaranna Song Lyrics - ಮುಂಜಾನೆದ್ದು ಕುಂಬಾರಣ್ಣ | Folk Song

Munjaneddu Kumbaranna Song Lyrics – ಮುಂಜಾನೆದ್ದು ಕುಂಬಾರಣ್ಣ | Folk Song

Munjaneddu Kumbaranna Song Lyrics - ಮುಂಜಾನೆದ್ದು ಕುಂಬಾರಣ್ಣ

Munjaneddu Kumbaranna Song Lyrics – ಮುಂಜಾನೆದ್ದು ಕುಂಬಾರಣ್ಣ

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ ಮಣ್ಣಾ ತುಳಿದಾನ
ಹಾರಿ, ಹಾರ್ಯಾಡಿ ಮಣ್ಣಾ, ತುಳಿಯು..ತ ಮಾಡ್ಯಾನ
ನಾರ್ಯಾರು ಹೊರುವಂತ ಐರಾಣಿ~~
ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ
ಘಟ್ಟೀಸಿ ಮಣ್ಣಾ ತುಳಿದಾನ….
ಓ…ಘಟ್ಟೀಸಿ ಮಣ್ಣಾ ತುಳಿಯು…ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ~
ಅಕ್ಕಿ ಹಿಟ್ಟು ನಾವು ತಕ್ಕೊಂಡು ಬಂದೀವಿ
ಗಿಂಡೀಲಿ ತಂದೀವಿ ತಿಳಿದುಪ್ಪ~~
ಹೇ..ಗಿಂಡೀಲಿ ತಂದೀವಿ ತಿಳಿದುಪ್ಪ, ಕುಂಬಾರಣ್ಣ
ತಂದೀ…ಡು ನಮ್ಮ ಐರಾಣಿ~
ಒಓ..ಕುಂಬಾರಣ್ಣನಾ ಮಡದಿ, ಕಡಗಾ..ದ ಕೈಯಲ್ಲಿ
ಕೊಡದಾ.. ಮ್ಯಾಲೇ…ನ ಬರೆದಾಳ…
ಕೊಡದಾ~~ ಮ್ಯಾಲೇ..ನ ಬರೆದಾಳ, ಕಲ್ಯಾಣದ
ಶರಣ…ಬಸವನ ನಿಲಿಸ್ಯಾಳ….
ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನಾ
ಹಾರ್ಯಾಡಿ ಮಣ್ಣಾ ತುಳಿದಾನ
ಹಾರಿ, ಹಾರ್ಯಾಡಿ ಮಣ್ಣಾ ತುಳಿಯುತ ಮಾಡ್ಯಾನಾ
ನಾರ್ಯಾರು ಹೊರುವಂತ ಐರಾಣಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments