HomeLyricsEndendu Ninnanu ಎಂದೆಂದೂ ನಿನ್ನನು Kannada song with lyrics

Endendu Ninnanu ಎಂದೆಂದೂ ನಿನ್ನನು Kannada song with lyrics

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಚಿತ್ರ: ಎರಡು ಕನಸು
ಹಾಡಿದವರು: ಪಿ ಬಿ ಶ್ರೀನಿವಾಸ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳEndendu Ninnanu/ಎಂದೆಂದೂ ನಿನ್ನನು Kannada song with lyrics.Eradu kanasu  Kannada movie.P.B.Shrinivas. - YouTube
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ…ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ…..
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ…..
ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ…..
Read more here

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments