ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಚಿತ್ರ: ಎರಡು ಕನಸು
ಹಾಡಿದವರು: ಪಿ ಬಿ ಶ್ರೀನಿವಾಸ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ…ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ…..
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ…..
ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ…..
Read more here
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ