HomeNewsDonald Trump's - ಡೊನಾಲ್ಡ್ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣ|Kannada Folks

Donald Trump’s – ಡೊನಾಲ್ಡ್ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣ|Kannada Folks

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ಯಾರಿಫ್ ಕ್ರಮವನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

Donald Trump’s State of the Union address – ಡೊನಾಲ್ಡ್ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅಲ್ಲಗಳೆಯುವುದನ್ನು ಮುಂದುವರಿಸಿದ್ದಾರೆ. ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಅವರು, ಕೋರ್ಟ್ ತೀರ್ಪು ಬಹಳ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅಮೆರಿಕದ ಜೊತೆ ಮಾಡಿಕೊಂಡಿರುವ ಒಪ್ಪಂದಗಳಿಂದ ಸಂತುಷ್ಟಗೊಂಡಿವೆ ಎಂದು ಟ್ರಂಪ್ ಹಂಗಿಸಿದ್ದಾರೆ.

‘ನಮ್ಮನ್ನು ಹೀನಾಯವಾಗಿ ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅವರು ಖುಷಿಯಾಗಿದ್ದಾರೆ. ನಾವೂ ಖುಷಿಯಾಗಿದ್ದೇವೆ. ಡೆಮಾಕ್ರಾಟ್​ನವರು ಇದಕ್ಕೆ ಒಪ್ಪದಿದ್ದರೂ ಅವರಿಗೆ ಗೊತ್ತಿದೆ. ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ. ಖುಷಿ ಸುದ್ದಿ ಏನೆಂದರೆ, ಅಮೆರಿಕದ ಜೊತೆ ಒಪ್ಪಂದ ಮಾಡಿಕೊಂಡಿರುವ ದೇಶಗಳೆಲ್ಲವೂ ಅದನ್ನು ಮುಂದುವರಿಸಲು ಬಯಸುತ್ತಿವೆ,’ ಎಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.ಡೊನಾಲ್ಡ್ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ವಿಳಾಸ: ಪೂರ್ಣ ಭಾಷಣ - ಇಂಡಿಯಾ ಟುಡೇ

Read this – Narendra Modi Israel Visit ; ನರೇಂದ್ರ ಮೋದಿ ಇಸ್ರೇಲ್ ಭೇಟಿ |Kannada Folks

ಟ್ಯಾರಿಫ್​ಗಳಿಂದ ಇನ್ಕಮ್ ಟ್ಯಾಕ್ಸ್ ಹೊರೆ ಇಳಿಯುತ್ತೆ ಎಂದ ಟ್ರಂಪ್

ಟ್ಯಾರಿಫ್ ವಿಧಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಇದರಿಂದ ಅಮೆರಿಕನ್ ಪ್ರಜೆಗಳಿಗೆ ಆದಾಯ ತೆರಿಗೆ ಹೊರೆ ಕಡಿಮೆ ಆಗುತ್ತೆ ಎಂದಿದ್ದಾರೆ.‘ಕಾಲ ಕಳೆದಂತೆ ವಿದೇಶಗಳಿಂದ ಪಾವತಿಸಲಾಗುವ ಟ್ಯಾರಿಫ್​ಗಳು ಆಧುನಿಕ ಆದಾಯ ತೆರಿಗೆ ಸಿಸ್ಟಂ ಅನ್ನು ಭರಿಸಬಲ್ಲುವು. ನಾನು ಪ್ರೀತಿಸುವ ಜನರಿಗೆ ಹಣದ ಹೊರೆಯನ್ನು ಇಳಿಸಬಲ್ಲುವು’ ಎಂದು ತಿಳಿಸಿದ ಡೊನಾಲ್ಡ್ ಟ್ರಂಪ್, ವಿದೇಶಗಳು ಅಮೆರಿಕನ್ನರ ಆದಾಯ ತೆರಿಗೆ ಪಾವತಿಸುತ್ತವೆ ಎಂದಿದ್ದಾರೆ.

ಡೆಮಾಕ್ರಾಟ್​ಗಳ ವಿರುದ್ಧ ಟ್ರಂಪ್ ಟೀಕೆ

‘ಡೆಮಾಕ್ರಾಟ್​ಗಳು ಕೊಲೆಗಡುಕರನ್ನು ನಮ್ಮ ದೇಶದೊಳಗೆ ಬಿಟ್ಟುಕೊಂಡರು. ಅವರ ನೀತಿಗಳು ಬೆಲೆ ಏರಿಕೆಗೆ ಕಾರಣವಾದರೆ, ನಮ್ಮ ನೀತಿಗಳು ಬೆಲೆ ತಗ್ಗಿಸುತ್ತಿವೆ. ಮೊಟ್ಟೆ ಬೆಲೆ ಶೇ. 60 ಇಳಿಕೆ ಆಗಿದೆ. ಹೋಟೆಲ್, ಬಾಡಿಗೆ, ಆಟೊಮೊಬೈಲ್, ಬೀಫ್ ಬೆಲೆಗಳು ಸಾಕಷ್ಟು ಕಡಿಮೆ ಆಗಿವೆ. ವಿದ್ಯುತ್ ಬೆಲೆ ತಗ್ಗುತ್ತಿದೆ. ಮತ್ತೊಂದು ದೊಡ್ಡ ಟ್ಯಾಕ್ಸ್ ಕಡಿತದಂತಾಗಿದೆ’ ಎಂದು ಟ್ರಂಪ್ ತಿಳಿಸಿದ್ದಾರೆ.‘ನನಗೆ ಮೊದಲು ಅಮೆರಿಕ. ನಾವು ಪ್ರೀತಿಸೋದು ಅಮೆರಿಕವನ್ನು. ಬೈಡನ್ ಹಾಗೂ ಅವರ ಭ್ರಷ್ಟ ಜೊತೆಗಾರರ ಅಡಿಯಲ್ಲಿ ಅಮೆರಿಕ ಮುರಿದುಬೀಳುವ ಹಂತಕ್ಕೆ ಹೋಗಿತ್ತು’ ಎಂದು ಟ್ರಂಪ್ ಸಿಡಿಗುಟ್ಟಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×