Derogatory remark against Prime Minister Modi -ಪ್ರಧಾನಿ ಮೋದಿ ವಿರುದ್ಧ ‘ಅವಹೇಳನಕಾರಿ’ ಹೇಳಿಕೆ: ವಿಧಾನ ಪರಿಷತ್‌ನಲ್ಲಿ ಕೋಲಾಹಲ, ಕಾಂಗ್ರೆಸ್ ಎಂಎಲ್‌ಸಿ ವಿರುದ್ಧ ಬಿಜೆಪಿ ಕಿಡಿ
![]()
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ನಜೀರ್ ಅಹ್ಮದ್ ನೀಡಿದ ಅವಹೇಳನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕೆರಳಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ನಜೀರ್ ಅಹ್ಮದ್ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸೋಮವಾರ ಪಟ್ಟು ಹಿಡಿದರು.
ಮಂಗಳವಾರವೂ ಕೂಡ ಇದೇ ಗದ್ದಲ ಮುಂದುವರೆಯಿತು. ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ನಜೀರ್ ಅಹ್ಮದ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಭಾಪತಿ ಬಸವರಾಜ ಹೊರಟ್ಟಿ ಕೂಡ ನಜೀರ್ ಅಹ್ಮದ್ ಬೇಷರತ್ ಕ್ಷಮೆಯಾಚಿಸಬೇಕು ಎಂದರು.
ಮಹಾತ್ಮ ಗಾಂಧಿ ನಿಜವಾದ ‘ವಿಶ್ವ ಗುರು’ ಎಂದು ನಂಬುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಶ್ವ ಗುರು’ ಎಂದು ಕರೆಯುವುದನ್ನು ತಾವು ವಿರೋಧಿಸಿರುವುದಾಗಿ ಕಾಂಗ್ರೆಸ್ ಎಂಎಲ್‌ಸಿ ವಿವರಿಸಿದರು. ತಮ್ಮ ಹೇಳಿಕೆಗಳಿಗಾಗಿ ಶಾಸಕಾಂಗದಿಂದ ಅಮಾನತುಗೊಳ್ಳಲು ಸಿದ್ಧವಾಗಿದ್ದು, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


