Decorating Christmas Tree – ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್ ಟ್ರೀಯನ್ನೇಕೆ ಅಲಂಕರಿಸಬೇಕು?

Read this-Christmas Special: Walnut Cake Recipe ವಾಲ್‌ನಟ್ ಕೇಕ್
ಯೇಸುಕ್ರಿಸ್ತನ ಜನ್ಮದಿನವನ್ನು ಪ್ರತೀ ವರ್ಷ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಕ್ರಿಸ್‌ಮಸ್ ಎಂದು ಕರೆಯಲಾಗುತ್ತದೆ. ಕ್ರೈಸ್ತ ಧರ್ಮದ ಆರಂಭದ ದಿನಗಳಲ್ಲಿ ಈ ಹಬ್ಬವನ್ನು ಚರ್ಚ್‌ನಲ್ಲಿ ಸರಳವಾಗಿ ಆಚರಿಸಲಾಗುತ್ತಿತ್ತು, ಆದರೆ ಕ್ರಮೇಣ ಈ ಹಬ್ಬಕ್ಕೆ ಜಿಂಗಲ್ ಬೆಲ್ಸ್, ಸಾಂಟಾ ಕ್ಲಾಸ್ ಮತ್ತು ಕ್ರಿಸ್‌ಮಸ್ ಟ್ರೀ ಸೇರಿಸಿ ಇನ್ನಷ್ಟು ಮೋಜು, ಮನರಂಜನೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈಗ ನಾವು ಕ್ರಿಸ್‌ಮಸ್‌ನ ಅದ್ದೂರಿಯಾದ ಆಚರಣೆಯನ್ನು ನೋಡುತ್ತಿದ್ದೇವೆ. ಕ್ರಿಸ್‌ಮಸ್ ಹಬ್ಬದಲ್ಲಿ ಕ್ರಿಸ್‌ಮಸ್ ಟ್ರೀ ಅಥವಾ ಕ್ರಿಸ್‌ಮಸ್ ಮರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಕ್ರಿಸ್‌ಮಸ್ ಟ್ರೀ ಕುರಿತಿರುವ ಆಸಕ್ತಿದಾಯಕ ವಿಷಯಗಳು ಹೀಗಿವೆ ನೋಡಿ.
ಮನೆಯಲ್ಲೇ ಕ್ರಿಸ್‌ಮಸ್ ಟ್ರೀ ಅಲಂಕರಿಸುವ ವಿಧಾನ:
ಕ್ರಿಸ್‌ಮಸ್ ಮರವನ್ನು ದೀಪಗಳು, ಆಕಾಶಬುಟ್ಟಿಗಳು ಮತ್ತು ಪ್ರಕಾಶಮಾನವಾದ ನಕ್ಷತ್ರಗಳಿಂದ ಅಲಂಕರಿಸಲಾಗಿದೆ. ಮನೆಯಲ್ಲಿ ವಯಸ್ಸಾದವರಿದ್ದರೆ ಇದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಹದಿಹರೆಯದವರು ಕ್ರಿಸ್‌ಮಸ್ ಟ್ರೀ ಅಲಂಕಾರದ ಬಗ್ಗೆ ಸಾಕಷ್ಟು ಯೋಚಿಸುತ್ತಾರೆ. ಮತ್ತು ಅದನ್ನು ಅಲಂಕರಿಸಲು ಮನೆಯಲ್ಲಿ ಹೂವುಗಳು ಮತ್ತು ದೀಪಗಳಿಂದ ಅಲಂಕಾರವನ್ನು ಮಾಡುತ್ತಾರೆ. ಕ್ರಿಸ್‌ಮಸ್ ಟ್ರೀಯ ಅಲಂಕಾರಕ್ಕಾಗಿ ಬೆಲ್‌ಗಳು, ಕ್ರಿಸ್‌ಮಸ್ ತಾತಾನ ಗೊಂಬೆಗಳು,ಗಿಫ್ಟ್ ಬಾಕ್ಸ್‌ನಂತಹ ಆಟಿಕೆಗಳು, ಬಾಲ್‌ಗಳು ಹೀಗೆ ಮುಂತಾದ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಕ್ರಿಸ್‌ಮಸ್ ಟ್ರೀಯನ್ನು ಅಲಂಕರಿಸುತ್ತಾರೆ.
Read this-Best Places to Visit During Christmas Holidays ಕ್ರಿಸ್ ಮಸ್ ರಜೆ
ತಾಳೆ ಮರದ ಗರಿಗಳು:
ಯೇಸು ವಾಸಿಸುತ್ತಿದ್ದ ಸ್ಥಳವು ಮರುಭೂಮಿ ಪ್ರದೇಶವಾಗಿತ್ತು ಮತ್ತು ಜೀಸಸ್ ಜೆರುಸಲೆಮ್ ಅನ್ನು ಪ್ರವೇಶಿಸಿದಾಗ, ಜನರು ತಾಳೆ ಮರದ ಗರಿಗಳೊಂದಿಗೆ ಅವರನ್ನು ಸ್ವಾಗತಿಸಿದರು. ಈ ತಾಳೆ ಗರಿಗಳ ಪ್ರಾಮುಖ್ಯತೆಯನ್ನು ಇಂದಿಗೂ ನಾವು ಕ್ರಿಸ್‌ಮಸ್ ಹಬ್ಬದ ಆಚರಣೆಯಲ್ಲಿ ನೋಡಬಹುದು.
ಈ ಮರಗಳು ಬಳಕೆಗೆ ಬಂದವು:
ದಿನಗಳು ಕಳೆದಂತೆ ತಾಳೆ ಮರದ ಗರಿಗಳು ಸಿಗದಿದ್ದಾಗ ಜನರು ಹಿಮಭರಿತ ಪ್ರದೇಶದಲ್ಲಿ ಬೆಳೆಯುವ ನಿತ್ಯಹರಿದ್ವರ್ಣ, ಕ್ರಿಸ್‌ಮಸ್ ಮರ, ದೇವದಾರು ಮರಗಳು ಕ್ರಿಸ್‌ಮಸ್ ಹಬ್ಬದ ಸಂಕೇತವಾಯಿತು. ಯಾಕೆಂದರೆ ತಾಳೆ ಮರದ ಗರಿಗಳು ಅಪರೂಪವಾಗತೊಡಗಿದ ಕಾರಣ ಅವರು ಈ ಮರಗಳನ್ನು ಬಳಸಲು ಪ್ರಾರಂಭಿಸಿದರು.
ಕ್ರಿಸ್‌ಮಸ್ ಮರದ ಅಲಂಕಾರ ಆರಂಭ:
ಕ್ರಿ.ಪೂ ಅವಧಿಯಲ್ಲಿ ರೋಮನ್ನರು ಚಳಿಗಾಲದ ಸಮಯದಲ್ಲಿ ತಮ್ಮ ಸೈಟರ್ನೇಲಿಯಾ ಎಂಬ ಹಬ್ಬದಲ್ಲಿ ಒಂದು ರೀತಿಯ ಮರವನ್ನು ಅಲಂಕರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅವರು ಸೂರ್ಯನ ಗೌರವಾರ್ಥವಾಗಿ ಇದನ್ನು ಮಾಡುತ್ತಿದ್ದರು. ಬಹುಶಃ ಅಂದಿನಿಂದ ಕ್ರಿಸ್‌ಮಸ್ ಮರವನ್ನು ಅಲಂಕರಿಸುವ ಸಂಪ್ರದಾಯವು ಕ್ರಿಸ್‌ಮಸ್ ಹಬ್ಬದ ಭಾಗವಾಗಿರಬಹುದು.
Read this-Story of Jesus Christ: ಇದು ಜೀಸಸ್ ಜನ್ಮದ ಕಥೆ
ಕ್ರಿಸ್‌ಮಸ್ ಮರದ ಚಿಹ್ನೆ:
ಜನಪ್ರಿಯ ನಂಬಿಕೆಯ ಪ್ರಕಾರ, ಒಮ್ಮೆ ಸೇಂಟ್ ಬೋನಿಫೇಸ್ ಜರ್ಮನಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಅವರು ಓಕ್ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು, ಅಲ್ಲಿ ಕ್ರೈಸ್ತರಲ್ಲದವರು ತಮ್ಮ ದೇವರುಗಳ ತೃಪ್ತಿಗಾಗಿ ಜನರನ್ನು ತ್ಯಾಗಮಾಡುತ್ತಿದ್ದರು. ಸಂತ ಬೋನಿಫೇಸ್ ಆ ಮರವನ್ನು ಕಡಿದು ಅದರ ಸ್ಥಳದಲ್ಲಿ ಕ್ರಿಸ್‌ಮಸ್ ಮರವನ್ನು ನೆಟ್ಟರು. ಅಂದಿನಿಂದ ಸೇಂಟ್ ಬೋನಿಫೇಸ್ ತನ್ನ ಧಾರ್ಮಿಕ ಸಂದೇಶಗಳಿಗಾಗಿ ಕ್ರಿಸ್‌ಮಸ್ ಮರದ ಚಿಹ್ನೆಯನ್ನು ಬಳಸಲು ಪ್ರಾರಂಭಿಸಿದನು.
ಕ್ರಿಸ್‌ಮಸ್ ಮರವು ಸಾಂಪ್ರದಾಯಿಕ ಸಂಕೇತ:
ಜೀಸಸ್ ಜನಿಸಿದಾಗ ಅಲ್ಲಿ ಮೇಯುತ್ತಿದ್ದ ಪ್ರಾಣಿಗಳು ಅವನಿಗೆ ನಮಸ್ಕರಿಸಿದವು ಮತ್ತು ಕಾಡಿನಲ್ಲಿರುವ ಎಲ್ಲಾ ಮರಗಳು ಕ್ರಿಸ್‌ಮಸ್ ಮರದ ಎಲೆಗಳಿಂದ ಆವೃತವಾಗಿದ್ದವು ಎಂದು ಜರ್ಮನ್ ದಂತಕಥೆಗಳಲ್ಲಿ ಸಹ ಪ್ರಚಲಿತವಾಗಿದೆ. ಅಂದಿನಿಂದ, ಕ್ರಿಸ್‌ಮಸ್ ವೃಕ್ಷವನ್ನು ಕ್ರಿಶ್ಚಿಯನ್ ಧರ್ಮದ ಸಾಂಪ್ರದಾಯಿಕ ಸಂಕೇತವೆಂದು ಪರಿಗಣಿಸಲಾಗಿದೆ.
Support Us 


