HomeNewsCM Vijay - ಸಿಎಂ ಆದ ಬಳಿಕ ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ವಿಜಯ್?

CM Vijay – ಸಿಎಂ ಆದ ಬಳಿಕ ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ವಿಜಯ್?

CM Vijay - ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

CM Vijay – ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

 

ನಟ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆಳವಣಿಗೆ ಚಿತ್ರರಂಗದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಹಿಂದೆ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ ಶೋಗಳು ಇರುತ್ತಿದ್ದವು, ಆದರೆ ಘಟನೆಯೊಂದರ ನಂತರ ಅವುಗಳಿಗೆ ನಿರ್ಬಂಧ ಹೇರಲಾಗಿದೆ. ವಿಜಯ್ ಚಿತ್ರರಂಗದ ಹಿನ್ನೆಲೆಯವರು. ಆದ್ದರಿಂದ, ಅವರ ಅಧಿಕಾರಾವಧಿಯಲ್ಲಿ ಈ ಮುಂಜಾನೆಯ ಶೋಗಳನ್ನು ಮತ್ತೆ ಜಾರಿಗೆ ತಂದು, ಚಿತ್ರಮಂದಿರಗಳ ಕಷ್ಟ ನೀಗಿಸುವ ನಿರೀಕ್ಷೆ ಇದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮೇ 10ರಂದು ನಟ ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿದ್ದು, ವಿಶೇಷವಾಗಿ ಚಿತ್ರಮಂದಿರಗಳ ಮಾಲೀಕರಲ್ಲಿ ದೊಡ್ಡ ಆಸೆ ಚಿಗುರೊಡೆದಿದೆ. ವಿಜಯ್ ಕೂಡ ಸಿನಿಮಾ ರಂಗದ ಹಿನ್ನೆಲೆ ಹೊಂದಿರುವುದರಿಂದ, ಒಂದು ದೊಡ್ಡ ಬದಲಾವಣೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ತಮಿಳುನಾಡಿನಲ್ಲಿ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋ ನೀಡುವ ಸಂಪ್ರದಾಯವಿತ್ತು. ಆದರೆ, 2023ರ ಪೊಂಗಲ್ ಸಮಯದಲ್ಲಿ ಅಜಿತ್ ಕುಮಾರ್ ಅವರ ‘ತುನಿವು’ ಚಿತ್ರದ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ಮೃತಪಟ್ಟ ಕಾರಣ, ಸರ್ಕಾರವು ಮುಂಜಾನೆ ಪ್ರದರ್ಶನಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು.

I will be the only power centre in TN, says CM Vijay in his maiden speech after

Read here: Thalapathy Vijay  ತನ್ನ ಎಲ್ಲಾ ವಾಹನಗಳಿಗೆ 0277 ಅನ್ನು ಏಕೆ ಆರಿಸುತ್ತಾರೆ?

ಸದ್ಯ ತಮಿಳುನಾಡಿನಲ್ಲಿ ಮೊದಲ ಶೋ ಆರಂಭ ಆಗೋದು ಬೆಳಿಗ್ಗೆ 9 ಗಂಟೆಯಿಂದ. ಆದರೆ ಕರ್ನಾಟಕದಲ್ಲಿ ಮುಂಜಾನೆ 6.30 ಗಂಟೆಯಿಂದ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ಇದೆ. ಕೆಲವು ರಾಜ್ಯಗಳಲ್ಲಿ ಮಧ್ಯರಾತ್ರಿಯೂ ಶೋ ನೀಡಬಹುದು. ಆದರೆ, ಈ ಅವಕಾಶ ತಮಿಳುನಾಡಿನವರಿಗೆ ಇಲ್ಲ.

ದೊಡ್ಡ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋಗಳನ್ನು ಆಯೋಜನೆ ಮಾಡಿದರೆ ಅವುಗಳು ಹೌಸ್​ಫುಲ್ ಆಗೋದು ಪಕ್ಕಾ. ಹೀಗಾಗಿ, ಇದು ನಿರ್ಮಾಪಕರಿಗೆ ಲಾಭ. ಸಿನಿಮಾ ರಿಲೀಸ್ ದಿನ ಥಿಯೇಟರ್​ನಲ್ಲಿ ಐದು ಶೋಗಳು ಪ್ರದರ್ಶನ ಕಂಡರೆ, ಅದರಲ್ಲೂ ಹೌಸಫುಲ್ ಆದರೆ ಥಿಯೇಟರ್ ಮಾಲೀಕರು ಕೂಡ ಖುಷಿ ಪಡುತ್ತಾರೆ. ಈ ನಿಯಮ ಮತ್ತೆ ಜಾರಿಗೆ ತರಬೇಕು ಎಂಬ ಕೋರಿಕೆ ಅನೇಕರದ್ದು.

ತಮಿಳುನಾಡು ಥಿಯೇಟರ್ ಮಾಲೀಕರು ಈ ಬಗ್ಗೆ ನಿರೀಕ್ಷೆ ಹೊರಹಾಕಿದ್ದಾರೆ. ‘ವಿಜಯ್ ಅವರು ಚಿತ್ರರಂಗದಿಂದ ಬಂದವರಾದ್ದರಿಂದ ಚಿತ್ರಮಂದಿರಗಳ ಕಷ್ಟ ಅವರಿಗೆ ಗೊತ್ತು. ಮುಂಜಾನೆ ಪ್ರದರ್ಶನಗಳು ಕೇವಲ ವ್ಯಾಪಾರವಲ್ಲ, ಅದು ಚಿತ್ರಮಂದಿರದ ಜೀವನಾಡಿ. ಓಟಿಟಿ ಪೈಪೋಟಿಯ ನಡುವೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಇದು ಸಹಕಾರಿ’ ಎಂದು ಚೆನ್ನೈನ ಜಿಕೆ ಸಿನಿಮಾಸ್‌ನ ರುಬನ್ ಮಥಿವಾನನ್ ಹೇಳಿದ್ದಾರೆ.

ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಮೇ 21 ಅಥವಾ 28ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಸಿನಿಮಾ ಸೋರಿಕೆಯಾಗಿದ್ದರೂ, ಅವರ ಅಭಿಮಾನಿಗಳಲ್ಲಿ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಸಿನಿಮಾ ರಿಲೀಸ್ ವೇಳೆ ಚೆನ್ನೈನಲ್ಲಿ ಮುಂಜಾಗೃತ ಕ್ರಮ ಕೈಗೊಂಡು ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

Read here: Thalapathy Vijay ವಿಜಯ್ ಅವರ ಆಸ್ತಿ ಬಹಿರಂಗ ಹೂಡಿಕೆಗಳ ವಿವರ ಹೊರಬಂದಿತು

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments