HomeNewsChairman CJ Roy Death-ಎಸ್‌ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ

Chairman CJ Roy Death-ಎಸ್‌ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ

ಎಸ್‌ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ; ಅಧಿಕಾರಿಳು ಹೇಳಿದ್ದೇನು?

Chairman CJ Roy Death-ಎಸ್‌ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ

ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಹಲವು ದಾಖಲೆಗಳು ಮತ್ತು ಟಿಪ್ಪಣಿಗಳನ್ನು ಪರಿಶೀಲಿಸುತ್ತಿದೆ. ಅದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೆಂಪು ಶಾಯಿಯಲ್ಲಿ ಬರೆದಿದ್ದಾರೆಂದು ಹೇಳಲಾದ ಒಂಬತ್ತು ಪುಟಗಳ ಟಿಪ್ಪಣಿಯೂ ಸೇರಿದೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.

“ನಾವು ಪ್ರಸ್ತುತ ರಾಯ್ ಅವರ ಕುಟುಂಬ ಸದಸ್ಯರು ಮತ್ತು ಅವರ ಆಪ್ತರಿಂದ ಪಡೆದ ಹಲವಾರು ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಇದರಲ್ಲಿ ಅವರು ಕೆಂಪು ಶಾಯಿಯಲ್ಲಿ ಬರೆದಿದ್ದಾರೆಂದು ಹೇಳಲಾದ ಒಂಬತ್ತು ಪುಟಗಳ ಟಿಪ್ಪಣಿ ಸೇರಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ - Kannada News | Confident Group Chairman C.J. Roy Dies by Suicide During IT Raid | TV9 Kannada

ಟಿಪ್ಪಣಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅವುಗಳು ಪರಿಶೀಲನೆಯಲ್ಲಿವೆ. ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಕರಣವನ್ನು ಪ್ರಸ್ತುತ ಅಸ್ವಾಭಾವಿಕ ಮರಣ ಎಂದು ದಾಖಲಿಸಲಾಗಿದೆ. ಆದರೆ ಆತ್ಮಹತ್ಯೆಗೆ ಪ್ರಚೋದನೆ ವಿಚಾರವನ್ನು ಇನ್ನೂ ಕೈಗೆತ್ತಿಕೊಂಡಿಲ್ಲ ಎಂದಿದ್ದಾರೆ.

“ತನಿಖೆ ಮುಂದುವರೆದಂತೆ, ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿ ತಿಳಿಸಿದ್ದಾರೆ.

Read This : ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold

ತನಿಖೆಯ ಭಾಗವಾಗಿ ರಾಯ್ ಅವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ, ಆದರೆ ಈ ಹಂತದಲ್ಲಿ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸಿಜೆ ರಾಯ್ ಅವರು ಜನವರಿ 30 ರಂದು ನಗರದ ರಿಚ್‌ಮಂಡ್ ಸರ್ಕಲ್ ಬಳಿಯ ತಮ್ಮ ಕಚೇರಿಯಲ್ಲಿ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರಂತರ ಶೋಧ ಮತ್ತು ಕಿರುಕುಳನಿಂದ ನೊಂದು ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

Read This:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×