HomeNewsEntertainmentBigg Boss Kannada 12-ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು?

Bigg Boss Kannada 12-ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು?

Bigg Boss Kannada 12-ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು?

Bigg Boss Kannada 12-ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌-12 ಶುರುವಾಗಿ ಒಂದು ವಾರದ ಸನಿಹದಲ್ಲಿದೆ. ಮೊದಲ ವಾರದ ಎಲಿಮಿನೇಷನ್‌ ಕೂಡ ಹತ್ತಿರದಲ್ಲಿದೆ. ಒಂದೇ ದಿನಕ್ಕೆ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದರು ರಕ್ಷಿತಾ ಶೆಟ್ಟಿ. ಇದೀಗ ಉಳಿದ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಢವಢವ ಶುರುವಾಗಿದೆ. ಮನೆಯಲ್ಲಿ ಈಗಾಗಲೇ ನಾಮಿನೇಷನ್‌ ಪ್ರಕ್ರಿಯೆ ಕೂಡ ಶುರುವಾಗಿದ್ದು, ಆಗಲೇ ಸ್ಪರ್ಧಿಗಳ ನಡುವೆ ಕಾದಾಟ ಜೋರಾಗಿದೆ. ಎಲ್ಲವೂ ಚೆನ್ನಾಗಿತ್ತು ಎಂದು ವಾರ ಕಳೆಯುವಷ್ಟರಲ್ಲಿ ಹಲವರ ಹೆಸರು ನಾಮಿನೇಟ್‌ ಆಗಿದೆ.BBK-12: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು? ಈ ಸ್ಪರ್ಧಿಗಳಿಗೆ ಢವಢವ | Bigg Boss Kannada 12 Who Will Be Eliminated This Week Contestants Tensed - Kannada Oneindia

Read this-Bigg Boss Kannada 12 Full Contestants List – ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಸಂಪೂರ್ಣ ವಿವರ
ಬಿಗ್ ಬಾಸ್ ಮನೆಯೊಳಗೆ ಮೊದಲ ವಾರದ ನಾಮಿನೇಷನ್ ಗದ್ದಲ ಶುರುವಾಗಿದ್ದು, ಮನೆಯಿಂದ ಯಾರು ಹೊರ ಹೋಗಬೇಕು ಎಂದು ಹೆಸರುಗಳನ್ನು ಹೇಳಿದ್ದಾರೆ. ಈ ಪೈಕಿ ಹೆಚ್ಚಿನವರು ಈ ಕೆಲವೇ ಸ್ಪರ್ಧಿಗಳ ಹೆಸರನ್ನ ಸೂಚಿಸಿದ್ದಾರೆ. ಇವರಲ್ಲೇ ಒಬ್ಬರು ಈ ವಾರ ಬಿಗ್‌ ಬಾಸ್‌ ಜರ್ನಿ ಮುಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚಂದ್ರಪ್ರಭ ಅವರು ಧನುಷ್‌ ಗೌಡ ಅವರನ್ನ ನಾಮಿನೇಟ್‌ ಮಾಡಿದ್ದಾರೆ. ಧನುಷ್‌ ಅವರು ತಮಗೆ ತಾವೇ ಹೀರೋ ಎಂದುಕೊಂಡಿದ್ದಾರೆ ಅಂತ ಚಂದ್ರಪ್ರಭ ಗರಂ ಆಗಿದ್ದಾರೆ. ಆದರೆ ಎಲ್ರೂ ಸೇರಿ ತಪ್ಪು ಮಾಡಿ ಒಬ್ಬನ್ನ ಹಳ್ಳಕ್ಕೆ ತಳ್ಳೋಕೆ ರೆಡಿ ಇದ್ದಾರೆ ಎಂದು ಧನುಷ್‌ ಹೇಳಿದ್ದಾರೆ. ಇದೇ ವಿಚಾರವಾಗಿ ಚಂದ್ರಪ್ರಭ ಹಾಗೂ ಧನುಷ್‌ ಗೌಡ ನಡುವೆ ಮಾತಿನ ಸಮರ ನಡೆದು, ಕೈಕೈ ಮಿಲಾಯಿಸುವ ಹಂತ ತಲುಪಿದ್ದಾರೆ.

ಮಲ್ಲಮ್ಮ ಮತ್ತೆ ಎಡವಟ್ಟುಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ಮಲ್ಲಮ್ಮ ಎಡವಟ್ಟು! – ಮನೆಯವರ ಹೊಟ್ಟೆಗೆ ತಣ್ಣೀರು ಬಟ್ಟೆನಾ? - Suddiyaana - ಕನ್ನಡ ಸುದ್ದಿ: ಇತ್ತೀಚಿನ ಕನ್ನಡ ಸುದ್ದಿ, ಬ್ರೇಕಿಂಗ್ ...

Read this-Bigg Boss Kannada 12-ಈ ವಾರ ಹೋಗೋದು ಒಬ್ಬರಲ್ಲ, ಇಬ್ಬರು?

ಆಂಕರ್ ಜಾನ್ವಿ‌ ಅವರು ಕಾಕ್ರೋಚ್‌ ಸುಧಿಯನ್ನ ನಾಮಿನೇಟ್‌ ಮಾಡಿದ್ದಾರೆ. ಕಾಕ್ರೋಚ್‌ ತಮ್ಮ ನಿರ್ಧಾರದ ಮೇಲೆ ನಿಲ್ಲುವ ವ್ಯಕ್ತಿ ಅಲ್ಲ ಎಂದು ಜಾನ್ವಿ ಕಾರಣ ಕೊಟ್ಟಿದ್ದಾರೆ. ಇನ್ನು ಮಲ್ಲಮ್ಮ ಅವರು ಗಿಲ್ಲಿ ಹೆಸರು ನಾಮಿನೇಟ್‌ ಮಾಡಿದ್ದಾರೆ. ಇದನ್ನು ಕೇಳಿ ಎಲ್ಲ ಸ್ಪರ್ಧಿಗಳು ಎದ್ದುಬಿದ್ದು ನಕ್ಕಿದ್ದಾರೆ. ಆದರೆ ನಾಮಿನೇಟ್‌ ಅಂದ್ರೆ ಏನು ಅಂತ ಗೊತ್ತಿಲ್ಲದೆ ಮಲ್ಲಮ್ಮ ಗಿಲ್ಲಿಯ ಹೆಸರು ಹೇಳಿಬಿಟ್ಟಿದ್ದಾರೆ. ಬಳಿಕ ಗಿಲ್ಲಿ ನನ್ನ ಮನೆಗೆ ಕಳಿಸ್ತಾರೆ ಎಂದು ಹೇಳಿಕೊಂಡಿದ್ದು, ಆಗ ಮಲ್ಲಮ್ಮ ಶಾಕ್‌ ಆಗಿದ್ದಾರೆ.

ಧನು-ಕಾಕ್ರೋಚ್‌ ಫೈಟ್‌Bigg Boss Kannada - ಬಿಗ್​ ಬಾಸ್​ ಕನ್ನಡ: BBK 12 Latest Episodes, Photos and Videos in Kannada | TV9 Kannada

Read this-Bigg Boss Kannada12: ಸ್ಪರ್ಧಿಗಳ ಪಟ್ಟಿ R Complete Details

ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ ವೇಳೆ ಧನುಷ್‌ ಹಾಗೂ ಕಾಕ್ರೋಚ್‌ ಸುಧಿ ನಡುವೆ ಗಲಾಟೆ ನಡೆದಿದೆ. ಟಾಸ್ಕ್‌ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದು, ಹಾಗಾಗಿ ಈ ಟಾಸ್ಕ್‌ ರದ್ದು ಮಾಡಿದ್ದಾಗಿ ಬಿಗ್‌ ಬಾಸ್‌ ಹೇಳಿದ್ದಾರೆ. ಬಳಿಕ ಸ್ಪರ್ಧಿಗಳ ನಡುವೆ ಭಾರೀ ಗದ್ದಲ ನಡೆದಿದೆ. ಈ ವಾರ ಎಲಿಮಿನೇಷನ್‌ ಲಿಸ್ಟ್‌ನಲ್ಲಿ ತುಂಬಾ ಜನರ ಹೆಸರು ಕೇಳಿಬಂದಿದ್ದು, ನಾಮಿನೇಟ್‌ ಆದವರು ಮೊದಲ ವಾರ ಮನೆಯಿಂದ ಹೊರಹೋಗುವ ಭಯದಲ್ಲಿದ್ದಾರೆ. ಅಸಲಿಗೆ ನಾಮಿನೇಟ್‌ ಆದವರು ಯಾರು ಎಂಬುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×