HomeNewsBangalore Auto Fare - ಮೀಟರ್ ದರಕ್ಕಾಗಿ ಚಾಲಕ ಸಂಘಟನೆಗಳ ಮನವಿ

Bangalore Auto Fare – ಮೀಟರ್ ದರಕ್ಕಾಗಿ ಚಾಲಕ ಸಂಘಟನೆಗಳ ಮನವಿ

Bangalore Auto Fare - ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಎಲ್‌ಪಿಜಿ ಬೆಲೆ ಏರಿಕೆ, ಕನಿಷ್ಠ 50 ರೂಪಾಯಿಗೆ ಚಾಲಕರ ಒತ್ತಾಯ

Bangalore Auto Fare – ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಎಲ್‌ಪಿಜಿ ಬೆಲೆ ಏರಿಕೆ, ಕನಿಷ್ಠ 50 ರೂಪಾಯಿಗೆ ಚಾಲಕರ ಒತ್ತಾಯ

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದು ಪ್ರಯಾಣಿಕರಿಗೆ ಹೊರೆಯಾದರೂ, ಚಾಲಕರ ಸಂಕಷ್ಟ ಅರಿತ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ ಎಲ್ಪಿಜಿ ದರವೀಗ 95 ರೂಪಾಯಿಗಳಿಗೆ ತಲುಪಿದೆ. ಹೀಗಾಗಿ ಮೀಟರ್​​ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಚಾಲಕರ ಅಭಿಪ್ರಾಯ.

ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ! - Kannada News | Bengaluru Auto Fare Hike: LPG Gas crisis leads to raise in Fuel price, Auto drivers demand RsRead this: Karnataka LPG Crisis-ಕರ್ನಾಟಕದಲ್ಲಿ ಆಟೋ LPG ಕೊರತೆ |Kannada Folks

  • ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ
  • ಆಟೋ ಮೀಟರ್ ದರ ಏರಿಕೆಗೆ ಚಾಲಕ ಸಂಘಟನೆಗಳಿಂದ ಮನವಿ
  • ಮೀಟರ್​​ ದರ ಎಷ್ಟು ಹೆಚ್ಚಳಕ್ಕೆ ಆಟೋ ಚಾಕರಿಂದ ಪ್ರಸ್ತಾಪ?
ಎಷ್ಟು ದರ ಹೆಚ್ಚಳಕ್ಕೆ ಮನವಿ?

ಆಟೋ ಮೀಟರ್ ಕನಿಷ್ಠ ದರವನ್ನು 50 ರೂ. ಹಾಗೂ ಆ ನಂತರದ ರೇಟ್​​ ಕಿಲೋ ಮೀಟರ್​​ಗೆ 25 ರೂ.ಗೆ ಹೆಚ್ಚಿಸಲು ಆಟೋ ಚಾಲಕ ಸಂಘಟನೆಗಳು ಬೇಡಿಕೆ ಇಟ್ಟಿವೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ. ಮೊದಲೇ ಆಟೋ ಎಲ್ಪಿಜಿ ಅಗತ್ಯಕ್ಕೆ ತಕ್ಕಂತೆ ಸಿಗ್ತಿಲ್ಲ. ಈ ನಡುವೆ ಗ್ಯಾಸ್​​ ದರವನ್ನೂ ಕೇಂದ್ರ ಸರ್ಕಾರ ದಿಢೀರ್​​ ಏರಿಸಿರೋದು ಚಾಲಕರನ್ನು ಸಂಕಷ್ಟ ತಳ್ಳಿದೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಚಾಲಕ ಸಂಘಟನೆಗಳ ಆಗ್ರಹದ ಬಗ್ಗೆ ಪ್ರಯಾಣಿಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಸ್​​ ರೇಟ್​​ ಹೆಚ್ಚಳದ ಕಾರಣಕ್ಕೆ ಆಟೋ ಚಾಲಕರ ಬೇಡಿಕೆಯೇನೋ ಸರಿಯಿದೆ. ಆದರೆ ದರ ಏರಿಕೆ ಮಾಡಿದಲ್ಲಿ ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಹಲವರು ಆಟೋ ಎಲ್ಪಿಜಿ ದರ ದುಪ್ಪಟ್ಟಾಗಿರುವ ಕಾರಣ ದರ ಏರಿಕೆ ಆಗಲಿ ಎಂದು ತಿಳಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವರಿಗೂ ತಮ್ಮ ಬೇಡಿಕೆ ಒಳಗೊಂಡ ಮನವಿಯನ್ನು ನೀಡೋದಾಗಿ ಆಟೋ ಚಾಲಕ ಸಂಘಟನೆಗಳು ತಿಳಿಸಿವೆ. ಅಂತಿಮವಾಗಿ ನಿರ್ಧಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments