HomeNewsBallari banner row - 'ಬ್ಯಾನರ್ ಗಲಾಟೆ' ವೇಳೆ ಘರ್ಷಣೆ, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ...

Ballari banner row – ‘ಬ್ಯಾನರ್ ಗಲಾಟೆ’ ವೇಳೆ ಘರ್ಷಣೆ, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ |Kannada Folks

ಶಾಸಕ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿಯವರು ಭದ್ರತೆಗೆ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದಾಗ ಕಾರ್ಯಕರ್ತ ರಾಜಶೇಖರ್ ಗೆ ತಗುಲಿ ಮೃತಪಟ್ಟಿದ್ದಾರೆ. ಗುಂಡು ಯಾರ ಬುಲೆಟ್ ನಿಂದ ಹೋಗಿದೆ ಎಂದು ಗೊತ್ತಾಗಬೇಕಿದೆ ಎಂದರು.

Ballari banner row – ಬ್ಯಾನರ್ ಗಲಾಟೆ ವೇಳೆ ಘರ್ಷಣೆ ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ,ಘಟನೆ ಬಗ್ಗೆ ತನಿಖೆ ಮಾಡಲು ಗೃಹ ಇಲಾಖೆಗೆ ಸೂಚಿಸಿದ್ದೇನೆ. ಅದು ಬಿಜೆಪಿಯವರ ಗನ್ ನಿಂದ ಬುಲೆಟ್ ಹಾರಿದೆಯೇ ಇಲ್ಲ ಕಾಂಗ್ರೆಸ್ ನವರ ಗನ್ ನಿಂದ ಬುಲೆಟ್ ಹಾರಿದೆಯೇ ಎಂದು ತಿಳಿಯಬೇಕಿದೆ, ತನಿಖೆ ಮಾಡಿ ವರದಿ ನೀಡಿ ಎಂದು ಹೇಳಿದ್ದೇನೆ ಎಂದರು.

ಶಾಸಕ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿಯವರು ಭದ್ರತೆಗೆ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದಾಗ ಕಾರ್ಯಕರ್ತ ರಾಜಶೇಖರ್ ಗೆ ತಗುಲಿ ಮೃತಪಟ್ಟಿದ್ದಾರೆ. ಗುಂಡು ಯಾರ ಬುಲೆಟ್ ನಿಂದ ಹೋಗಿದೆ ಎಂದು ಗೊತ್ತಾಗಬೇಕಿದೆ ಎಂದರು.ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: 'ಕೈ' ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದು ಯಾರ ಗುಂಡೇಟಿಗೆ? - Kannada News | Ballari Banner Dispute: Who Fired the Fatal Shot That Killed Rajasekhar? | TV9 Kannada

Read this – Ramnath Goenka  ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ | Kannada Folks

ಶೇ 83.61 ರಷ್ಟು ಕರ್ನಾಟಕದ ಮತದಾರರು EVM ಬಗ್ಗೆ ವಿಶ್ವಾಸ ಹೊಂದಿದ್ದಾರೆಂದು ಸಮೀಕ್ಷೆಯೊಂದು ಬಹಿರಂಗಪಡಿಸಿದ್ದು, ಕಲಬುರಗಿಯಲ್ಲಿ ಅತಿ ಹೆಚ್ಚು ಮಂದಿ ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಕೇಳಿದಾಗ ಸಿಎಂ, ರಾಹುಲ್ ಗಾಂಧಿಯವರು ಯಾವತ್ತೂ ಸುಳ್ಳು ಹೇಳಿಲ್ಲ, ಅವರು ಸರಿಯಾಗಿ ಅಧ್ಯಯನ ಮಾಡಿ, ತನಿಖೆ ಮಾಡಿದ ನಂತರವೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ ಎಂದರು.

ಬಳ್ಳಾರಿ ಹಿಂಸಾಚಾರದ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಮಹರ್ಷಿ ವಾಲ್ಮೀಕಿ ಪ್ರತಿಮೆಯ ಪ್ರಸ್ತಾವಿತ ಉದ್ಘಾಟನೆಗೆ ಸಂಬಂಧಿಸಿದ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ಸ್ಥಳೀಯ ಶಾಸಕ ನರ ಭರತ್ ರೆಡ್ಡಿ ಅವರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಬ್ಯಾನರ್‌ಗಳನ್ನು ತೆಗೆದುಹಾಕಲಾಯಿತು.

ಇದು ಗುಂಪುಗಳ ನಡುವೆ ಕಲ್ಲು ತೂರಾಟಕ್ಕೆ ಕಾರಣವಾಯಿತು. ನಂತರ ಗುಂಡಿನ ದಾಳಿ ನಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ನಾನು ತನಿಖೆಗೆ ಆದೇಶಿಸಿದ್ದೇನೆ. ಚಿತ್ರದುರ್ಗ ದಾವಣಗೆರೆಯಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಈಗ ಶಾಂತಿಯುತವಾಗಿದೆ. ಕೆಲವರನ್ನು ಬಂಧಿಸಲಾಗಿದೆ. ಪೂರ್ಣ ವರದಿ ಸಲ್ಲಿಸಿದ ನಂತರ ಏನಾಯಿತು ಎಂದು ನಿಖರವಾಗಿ ತಿಳಿಯುತ್ತದೆ ಎಂದರು.

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×