HomeNewsBagalkote - ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು

Bagalkote – ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು

Bagalkote - ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು

Bagalkote – ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು

ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸಬೇಡಿ ಎಂಬ ಸಿಬ್ಬಂದಿಯ ಎಚ್ಚರಿಕೆಗೆ ನಾಲ್ವರು SSLC ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ನಡೆದಿದೆ. ಈ ಬಗ್ಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಾಲ್ಕೇ ಗಂಟೆಗಳಲ್ಲಿ, ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ವಿಜಯಪುರದಲ್ಲಿ ಪತ್ತೆ ಹಚ್ಚಲಾಗಿದೆ.

Read this-ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ  Kannada News | Darshan Thoogudeepa got Tv in his jail barrack | kannadafolks

ಹಾಸ್ಟೆಲ್​ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್​ಎಸ್​ಎಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ಬಾಗಲಕೋಟೆಯ  ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ಪ್ರಕರಣ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಕೊನೆಗೂ ವಿಜಪುರದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಕರೆತರಲಾಗಿದೆ.

ಸಿಬ್ಬಂದಿ ಮಾತಿಗೆ ಕೋಪಗೊಂಡ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಂಡಿದ್ದ ಹಾಸ್ಟೆಲ್ ಸಿಬ್ಬಂದಿ, ಹಾಸ್ಟೆಲ್​ನಲ್ಲಿ ಮೊಬೈಲ್ ಬಳಸಿದರೆ ಪೋಷಕರಿಗೆ ಹೇಳುತ್ತೇನೆ ಎಂದು ಎಚ್ಚರಿಸಿದ್ದರು. ಅಷ್ಟಕ್ಕೇ ಕೋಪಗೊಂಡ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ವಸತಿ ಶಾಲೆಯನ್ನೇ ಬಿಟ್ಟು ಹೊರಹೋಗಿದ್ದಾರೆ. ಈ ವಿಷಯ ತಿಳಿದ ಸಿಬ್ಬಂದಿ ಕೂಡಲೆ ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.

Read this-ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್ Kannada News | Hidden Threat in Your Can: How Energy Drinks Harm Kidneys More Than Alcohol | kannadafolks

ಕೆಲವೇ ಗಂಟೆಗಳಲ್ಲಿ ಬಾಲಕಿಯರನ್ನು ಪತ್ತೆ ಹಚ್ಚಿದ ಪೊಲೀಸರು

ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ನಾಲ್ವರು ವಿದ್ಯಾರ್ಥಿನಿಯರ ಹುಡುಕಾಟ ಶುರು ಮಾಡಿದ್ದರು. ಕೊನೆಗೂ ವಿಜಯಪುರದ ಬಸ್ ನಿಲ್ದಾಣ ಬಳಿ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಲಾಗಿದೆ. ಬಾಗಲಕೋಟೆಯಿಂದ ಹುನಗುಂದ ಹೋಗಿ‌ದ್ದ ವಿದ್ಯಾರ್ಥಿನಿಯರು, ಅಲ್ಲಿಂದ ವಿಜಯಪುರಕ್ಕೆ ತೆರಳಿದ್ದರು. ಬಾಲಕಿಯರು ನಾಪತ್ತೆಯಾದ ನಾಲ್ಕೇ ತಾಸಿನಲ್ಲಿ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು ನಡುರಾತ್ರಿ 12.30ರ ಹೊತ್ತಿಗೆ ಅವರನ್ನು ರಕ್ಷಿಸಿದ್ದಾರೆ.

ಹಾಸ್ಟೆಲ್​ನಲ್ಲಿ ಮೊಬೈಲ್ ಬಳಕೆ ನಿಷೇಧ

ಮೊದಲಿನಿಂದಲೂ ಮೊರಾರ್ಜಿ ಶಾಲೆಗಳಲ್ಲಿ ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಆದಾಗಿಯೂ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿನಿಯು ಕದ್ದು ಮುಚ್ಚಿ ಹಾಸ್ಟೆಲ್ ಒಳಗೆ ಮೊಬೈಲ್ ತಂದಿದ್ದು, ನಾಲ್ವರೂ ಸೇರಿ ಬಳಕೆ ಮಾಡುತ್ತಿರುವಾಗ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×