Aloo jeera fry Recipe in Kannada – ಆಲೂ ಜೀರಾ ಫ್ರೈ
read this-Jeera rice Recipe in Kannada-ಜೀರಾ ರೈಸ್
ಬೇಕಾಗುವ ಪದಾರ್ಥಗಳು..
- ಎಣ್ಣೆ- 2 ಚಮಚ
- ಜೀರಿಗೆ- 1 ಚಮಚ
- ಶುಂಠಿ- ಒಂದು ಇಂಚು
- ಹಸಿಮೆಣಸಿನ ಕಾಯಿ- 2
- ಅರಿಶಿಣದ ಪುಡಿ- ಸ್ವಲ್ವ
- ದನಿಯಾ ಪುಡಿ – 1 ಚಮಚ
- ಆಮ್ಚೂರ್ ಪೌಡರ್- ಕಾಲು ಚಮಚ
- ಇಂಗು- ಚಿಟಿಕೆ
- ಉಪ್ಪು- ರುಚಿಗೆ ತಕ್ಕಷ್ಟು
- ಬೇಯಿಸಿದ ಆಲೂಗಡ್ಡೆ- 2
- ಕೊತ್ತಂಬರಿ ಸೊಪ್ಪು- ಸ್ವಲ್ಪ
Read this-Aloo Kabab Recipe in Kannada – ಆಲೂ ಕಬಾಬ್
ಮಾಡುವ ವಿಧಾನ…
- ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಹಾಕಿ ಚಟ ಪಟಾಯಿಸಿ.
- ನಂತರ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಹಸಿಮೆಣಸಿಕಾಯಿ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಉರಿಯನ್ನು ಸಣ್ಣಗೆ ಮಾಡಿ ಅರಿಶಿನ, ಅಚ್ಚಖಾರದ ಪುಡಿ, ದನಿಯಾ ಪುಡಿ, ಆಮ್ಚೂರ್ ಪೌಡರ್, ಇಂಗು ಹಾಗೂ ಉಪ್ಪನ್ನು ಹಾಕಿ. ಮಸಾಲೆ ಬರ್ನ್ ಆಗದಂತೆ ಹುರಿಯಿರಿ.
- ಇದೀಗ ಬೇಯಿಸಿ ಸಿಪ್ಪೆ ಸುಲಿದು ಹೆಚ್ಚಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿ. ಆಲೂಗಡ್ಡೆ ಚೂರಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.
- ನಂತರ 2 ಚಮಚ ನೀರು ಬೆರೆಸಿ. ಸಣ್ಣ ಉರಿಯಲ್ಲಿ 5 ನಿಮಿಷ ಹಾಗೇ ಮುಚ್ಚಿಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಆಲೂ ಜೀರಾ ಫ್ರೈ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



