HomeNewsEntertainmentAkhanda 2 twitter review - ‘ಅಖಂಡ 2’ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

Akhanda 2 twitter review – ‘ಅಖಂಡ 2’ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

Akhanda 2 twitter review - ‘ಅಖಂಡ 2’ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

Akhanda 2 twitter review – ‘ಅಖಂಡ 2’ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?

Akhanda 2 Twitter Review: Nandamuri Balakrishna's film receives mixed  reactions, netizens call it "pro max cringe"

ನಂದಮೂರಿ ಬಾಲಕೃಷ್ಣ ನಟಿಸಿರುವ ‘ಅಖಂಡ 2’ ಸಿನಿಮಾ ಇಂದು (ಡಿಸೆಂಬರ್ 12) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಟ್ವಿಟ್ಟರ್​​ನಲ್ಲಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದವರಿಗೆ ಸಿನಿಮಾ ಇಷ್ಟವಾಯ್ತೆ? ಯಾವ ಅಂಶ ಚೆನ್ನಾಗಿದೆ? ಯಾವ ಅಂಶಗಳು ಚೆನ್ನಾಗಿಲ್ಲ? ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

Read this – ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks

ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ಕೆಲವು ಅಡೆತಡೆಗಳ ಬಳಿಕ ಇಂದು (ಡಿಸೆಂಬರ್ 12) ಬಿಡುಗಡೆ ಆಗಿದೆ. ಬೆಂಗಳೂರು ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಡಿಸೆಂಬರ್ 11 ರ ರಾತ್ರಿಯೇ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ‘ಅಖಂಡ 2’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾದ ಸೀಕ್ವೆಲ್ ಆಗಿದ್ದು, ಬಾಲಯ್ಯ ಅವರು ಉಗ್ರ ನಾಗಾ ಸಾಧುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಖಂಡ 2’ ಸಿನಿಮಾ ನೋಡಿದ ಪ್ರೇಕ್ಷಕರು ಹಲವರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ.

 

 

ಇಂಡಿಯನ್ ಫ್ಲಿಕ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲಾಗಿರುವ ಟ್ವೀಟ್​​ನಲ್ಲಿ ‘ಅಖಂಡ 2’ ಸಿನಿಮಾ ಬಹಳ ಸಾಧಾರಣವಾದ ಸಿನಿಮಾ ಎನ್ನಲಾಗಿದೆ. ಬಾಲಯ್ಯ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಿಮಿಷಕ್ಕೊಮ್ಮೆ ಬರುವ ಭಾಷಣ, ತಲೆ ಬುಡವಿಲ್ಲದ ಆಕ್ಷನ್ ದೃಶ್ಯಗಳು ತಲೆನೋವು ತರಿಸುತ್ತವೆ, ಜೊತೆಗೆ ಸಿನಿಮಾದ ಹಿನ್ನೆಲೆ ಸಂಗೀತ ಸಹ ಇರಿಟೇಟ್ ಮಾಡುತ್ತದೆ. ನೀವೊಬ್ಬ ಅಭಿಮಾನಿ ಆಗಿದ್ದರಷ್ಟೆ ಸಿನಿಮಾ ನೋಡಿ ಎಂದಿದೆ ಟ್ವೀಟ್.

ವೀರಾರ ಎಂಬುವರು ಟ್ವೀಟ್ ಮಾಡಿ, ‘ಅಖಂಡ 2’ ಸಿನಿಮಾನಲ್ಲಿ ಎಲ್ಲಿಯೂ ಲಾಜಿಕ್ ಎಂಬುದೇ ಇಲ್ಲ. ಇಡೀ ಸಿನಿಮಾನಲ್ಲಿ ಬಾಲಯ್ಯ ರುದ್ರ ತಾಂಡವ ಆಡಿದ್ದಾರೆ. ಬಾಲಯ್ಯ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ ಎಂದಿದ್ದಾರೆ. ಸಿನಿಮಾಕ್ಕೆ ಎರಡು ಸ್ಟಾರ್ಸ್ಟ್ ಕೊಟ್ಟಿದ್ದಾರೆ.

Read this – Happy new year– 2026 ಹೃದಯಸ್ಪರ್ಶಿ ಟಾಪ್ 5 ಶುಭಾಶಯಗಳು

ಬಾಸ್ ಎಂಬುವರು ಟ್ವೀಟ್ ಮಾಡಿ, ‘ಅಖಂಡ 2’ ಸಿನಿಮಾದ ಮೊದಲಾರ್ಧ ಕ್ಲೀಷೆ ದೃಶ್ಯಗಳಿದ್ದರೂ ತುಸು ಡೀಸೆಂಟ್ ಆಗಿದೆ. ದ್ವಿತೀಯಾರ್ಧ ಬಹಳ ಕ್ಲೀಷೆ ಮತ್ತು ಕ್ರಿಂಜ್ ದೃಶ್ಯಗಳನ್ನು ಒಳಗೊಂಡಿದೆ. ತಮನ್ನ ಅವರ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್. ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಬೇಡಿ, ಖಂಡಿತ ಭಯಪಟ್ಟು ಕಣ್ಣೀರು ಹಾಕುತ್ತಾರೆ ಎಂದಿದ್ದಾರೆ.

ತೆಲುಗು ಬಾಕ್ಸ್ ಆಫೀಸ್​​ನವರು ಟ್ವೀಟ್​ ಮಾಡಿದ್ದು, ‘ದೇವರು, ಧರ್ಮದ ಹೆಸರಲ್ಲಿ ಬಾಲಕೃಷ್ಣ ಮತ್ತು ಬೊಯಪಾಟಿ ಶ್ರೀನು ಅವರು ಬಹಳ ಕ್ರಿಂಜ್ ಆದ ಕತೆಯನ್ನು ಹೆಣೆದಿದ್ದಾರೆ. ‘ಅಖಂಡ 2’ ಸಿನಿಮಾವನ್ನು ಬಾಲಯ್ಯ ಜೀವನ ಪರ್ಯಂತ ಟ್ರೋಲ್ ಮಾಡಬಹುದು ಅಷ್ಟು ಕ್ರಿಂಜ್ ದೃಶ್ಯಗಳು ಸಿನಿಮಾನಲ್ಲಿವೆ. ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧ ಬಹಳ ಭಯಾನಕವಾಗಿದೆ. ‘ಅಖಂಡ 2’ಗಿಂತಲೂ ‘ಅಖಂಡ’ ನೂರು ಪಟ್ಟು ಉತ್ತಮವಾಗಿತ್ತು ಎಂದಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×