Welcome to Kannada Folks   Click to listen highlighted text! Welcome to Kannada Folks
HomeNewsAero india 2025 day 2 bengaluru multi role fighter aircraft

Aero india 2025 day 2 bengaluru multi role fighter aircraft

Aero india 2025 day 2 bengaluru multi role fighter aircraft

Spread the love

Aero india 2025 day 2 bengaluru multi role fighter aircraft 

ಬೆಂಗಳೂರು: ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೋ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು 25ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ. ಎರಡನೇ ದಿನ ಕೂಡ ವ್ಯವಹಾರ ಸಮ್ಮೇಳನ ನಡೆಯಲಿದೆ. ಇಂದು ಕೂಡ ಭಾರತೀಯ ಸ್ಟಾರ್ಟ್ ಆಪ್ ಕಂಪನಿಗಳು ವಿದೇಶಿ ಪ್ರಮುಖರನ್ನ ಆಕರ್ಷಿಸಲಿವೆ.

ತುಮಕೂರಿನ ಹೆಎಎಲ್ ಏಷ್ಯಾದ ಅತಿ ದೊಡ್ಡ ವಿಮಾನ ತಯಾರಿಕಾ ಕಾರ್ಖಾನೆಯತ್ತ ವಿದೇಶಿ ರಕ್ಷಣಾ ಅಧಿಕಾರಿಗಳ ಚಿತ್ತ ನೆಟ್ಟಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಉತ್ಪನ್ನಗಳ ಬಗ್ಗೆ ಜಗತ್ತಿನ ಮಾರುಕಟ್ಟೆಗೆ ಭಾರತೀಯ ಕಂಪನಿಗಳು ಪರಿಚಯಿಸಲಿವೆ.

Read this – PM modi takes holy dip in prayagraj sangam ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ಲಘು ಯುದ್ಧ ವಿಮಾನ, ಎಐ, ಫೈಟರ್ ಏರ್ ಕ್ರಾಫ್ಟ್, ಸೈಬರ್ ಸೆಕ್ಯುರಿಟಿ, ಡ್ರೋಣ್, ರೇಡಾರ್ಸ್ ಸೇರಿ ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳ ಪ್ರದರ್ಶನ ನಡೆಯುತ್ತಿದೆ.

ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಆಕರ್ಷಣೆ

ಎರಡನೇ ದಿನದ ಏರ್ ಶೋನಲ್ಲಿ ಸ್ವೀಡನ್ ದೇಶದ ಮಲ್ಟಿರೋಲ್ ಫೈಟರ್ ಏರ್ ಕ್ರಾಫ್ಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಸಾಬ್ ಕಂಪನಿಯಿAದ ನಿರ್ಮಿತವಾದ ಈ ಫೈಟರ್ ಏರ್ ಕ್ರಾಫ್ಟನ್ನು ಭಾರತಕ್ಕೆ ಪರಿಚಯಿಸುವ ಕುರಿತು ಉಭಯ ರಾಷ್ಟ್ರಗಳ ಜೊತೆ ಮಾತುಕತೆ ಕೂಡ ನಡೆಯುತ್ತಿದೆ.

Read this – Modi, Amit Shah take 100 births but will not go to heaven: Mallikarjuna Kharge said

ಬ್ರೆಜಿಲ್ ಯುದ್ಧ ಕಾರ್ಗೋ ವಿಮಾನ

ಆಧುನಿಕ ಯುದ್ಧಗಳ ಸಂಧರ್ಭದಲ್ಲಿ ಫೈಟರ್ ಜೆಟ್‌ಗಳಷ್ಟೇ ಪ್ರಾಮುಖ್ಯತೆ ಕಾರ್ಗೋ ವಿಮಾನಗಳಿಗೂ ಇದೆ. ಫೈಟರ್ ಜೆಟ್‌ಗಳು ಶತ್ರುವಿನ ಮೇಲೆ ಮುಗಿಬೀಳುವ ಸಾಮಾರ್ಥ್ಯ ಹೊಂದಿವೆ. ಕಾರ್ಗೋ ವಿಮಾನಗಳು ಫೈಟರ್ ಜೆಟ್‌ಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಅದೇ ರೀತಿ ಈ ಬಾರಿ ಏರ್ ಶೋನಲ್ಲಿ ಸಿ-390 ಮಿಲಿನಿಯಂ ಹೆಸರಿನ ಭಾರೀ ಗಾತ್ರದ ಬ್ರೆಜಿಲ್ ಮೂಲದ ಕಾರ್ಗೋ ವಿಮಾನ ತನ್ನತ್ತ ಸೆಳೆಯುತ್ತಿದೆ. ವಾಯುಸೇನೆಯಲ್ಲಿ 6 ರೀತಿಯ ಕಾರ್ಯವನ್ನ ಮಾಡಿ, ತನ್ನ ಸೇನೆಗೆ ಬಲ ತುಂಬುವ ಈ ಕಾರ್ಗೋ ಸದ್ಯ ಬ್ರೆಜಿಲ್, ಪೋರ್ಚುಗಲ್, ಹಂಗೇರಿ ದೇಶಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಸೇನೆಗೆ ಈ ಬಾಹುಬಲಿಯನ್ನ ಸೇರ್ಪಡೆ ಮಾಡಲು ಅನೇಕ ದೇಶಗಳು ಕೂಡ ಸಾಲಿನಲ್ಲಿ ಕಾದು ನಿಂತಿವೆ.ಏರ್ ಶೋನ ಎರಡನೇ ದಿನವನ್ನ ನೋಡಲು ರಕ್ಷಣಾ ಇಲಾಖೆ ಅಧಿಕಾರಿಗಳ ಕುಟುಂಬಗಳು, ಗಣ್ಯರು ಯಲಹಂಕದ ವಾಯುನೆಲೆಗೆ ಆಗಮಿಸಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!