ಯಾಕೋ ಏನೋ ಯಾಕೋ ಏನೋ
ಚಿತ್ರ: ಅಭಯ್
ನಟರು: ದರ್ಶನ್, ಆರತಿ
ಗಾಯಕ: ಸೋನು ನಿಗಮ್
ಯಾಕೋ ಏನೋ ಯಾಕೋ ಏನೋ
ಜೊತೆಯಲೇ ಬೆರೆತೆವು ಜಗವನೆ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು
ನೀನೆ…ಮೊದಲ ಹುಡುಗಿಯು ನೀನೆ
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೆ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು
ಕಣ್ಣ ಕೊಳದ ಒಳಗಡೆ ನಿನ್ನ
ಅಡಗಿಸಿಡುವೆನು ಚಿನ್ನ
ಜನುಮಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೆ ನನಗಾಧಾರ
ಮಿನುಗು ಬಾರೆ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು
Read More Here
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ