HomeNewsWashington Post CEO Resigns Amid Job-Cut Backlash - 300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ...

Washington Post CEO Resigns Amid Job-Cut Backlash – 300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ ಕತ್ತರಿ|Kannada Folks

ಸುಮಾರು 300ಕ್ಕೂ ಹೆಚ್ಚು ಪತ್ರಕರ್ತರನ್ನು (ಸುಮಾರು ಮೂರನೇ ಒಂದು ಭಾಗದಷ್ಟು ಸಿಬ್ಬಂದಿ) ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ವಿಲ್ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Washington Post CEO Resigns Amid Job-Cut Backlash – 300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ ಕತ್ತರಿ

ದಿ ವಾಷಿಂಗ್ಟನ್ ಪೋಸ್ಟ್‌ನ ಸಿಇಒ ಮತ್ತು ಪ್ರಕಾಶಕ ವಿಲ್ ಲೂಯಿಸ್ (Will Lewis) ಫೆಬ್ರವರಿ 7, 2026 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸುಮಾರು 300ಕ್ಕೂ ಹೆಚ್ಚು ಪತ್ರಕರ್ತರನ್ನು (ಸುಮಾರು ಮೂರನೇ ಒಂದು ಭಾಗದಷ್ಟು ಸಿಬ್ಬಂದಿ) ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ವಿಲ್ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.

ಪತ್ರಿಕೆಯ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಹೇಳಿದ್ದ ವಿಲ್ ಲೂಯಿಸ್ ಅವರು, ಪತ್ರಿಕೆಯ 300ಕ್ಕೂ ಹೆಚ್ಚು ಪತ್ರಕರ್ತರನ್ನು ಉದ್ಯೋಗದಿಂದ ತೆಗೆದಿದ್ದರು. ಇದರ ಬೆನ್ನಲ್ಲೇ ಆಡಳಿತ ವೈಖರಿ ಬಗ್ಗೆ ಸಿಬ್ಬಂದಿ ಹಾಗೂ ಓದುಗರಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.Washington Post CEO resigns after mass layoffs - Breaking The News

Read this – India committed to stopping oil purchasing from russian  ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಭಾರತ ಬದ್ಧವಾಗಿದೆ

ಈ ಬೆಳವಣಿಗೆಯ ಬೆನ್ನಲ್ಲೇ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೂಯಿಸ್ ಅವರ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಅವರ ಸ್ಥಾನಕ್ಕೆ ಪತ್ರಿಕೆಯ ಮುಖ್ಯ ಹಣಕಾಸು ಅಧಿಕಾರಿ (CFO) ಜೆಫ್ ಡೊನೊಫ್ರಿಯೊ (Jeff D’Onofrio) ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ.

2024 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಲೂಯಿಸ್ ಅವರ ಎರಡು ವರ್ಷಗಳ ಅವಧಿಯು ಹಲವಾರು ವಿವಾದಗಳು ಮತ್ತು ಆರ್ಥಿಕ ನಷ್ಟಗಳನ್ನು ಸರಿಪಡಿಸುವ ಪ್ರಯತ್ನಗಳ ನಡುವೆ ಸಾಗಿತ್ತು. ಜೆಫ್ ಡೊನೊಫ್ರಿಯೊ ಈ ಹಿಂದೆ Tumblr ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

ಏತನ್ಮಧ್ಯೆ ವಾಷಿಂಗ್ಟನ್ ಪೋಸ್ಟ್ ಗಿಲ್ಡ್ (Union) ವಿಲ್ ಲೂಯಿಸ್ ಅವರ ರಾಜೀನಾಮೆಯನ್ನು ಸ್ವಾಗತಿಸಿದ್ದು, ಇತ್ತೀಚೆಗೆ ಮಾಡಲಾದ 300ಕ್ಕೂ ಹೆಚ್ಚು ಸಿಬ್ಬಂದಿಗಳ ವಜಾವನ್ನು ಕೂಡಲೇ ರದ್ದುಗೊಳಿಸಬೇಕು ಅಥವಾ ಪತ್ರಿಕೆಯನ್ನು ಸರಿಯಾದ ಹೂಡಿಕೆದಾರರಿಗೆ ಮಾರಾಟ ಮಾಡಬೇಕು ಎಂದು ಬೆಜೋಸ್ ಅವರ ಮೇಲೆ ಒತ್ತಡ ಹೇರುತ್ತಿವೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×