HomeNewsRajinikanth's 75th Birthday - ರಜನಿಕಾಂತ್ ಜನ್ಮದಿನ: ಸೂಪರ್​ಸ್ಟಾರ್ ಎಷ್ಟು ಶ್ರೀಮಂತ ಗೊತ್ತಾ?

Rajinikanth’s 75th Birthday – ರಜನಿಕಾಂತ್ ಜನ್ಮದಿನ: ಸೂಪರ್​ಸ್ಟಾರ್ ಎಷ್ಟು ಶ್ರೀಮಂತ ಗೊತ್ತಾ?

Rajinikanth's 75th Birthday - ರಜನಿಕಾಂತ್ ಜನ್ಮದಿನ: ಸೂಪರ್​ಸ್ಟಾರ್ ಎಷ್ಟು ಶ್ರೀಮಂತ ಗೊತ್ತಾ?

Rajinikanth’s 75th Birthday – ರಜನಿಕಾಂತ್ ಜನ್ಮದಿನ: ಸೂಪರ್​ಸ್ಟಾರ್ ಎಷ್ಟು ಶ್ರೀಮಂತ ಗೊತ್ತಾ?Happy Birthday Super Star Rajinikanth || Suresh Productions

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಚಾರ್ಮ್ ಇನ್ನೂ ಹಾಗೆಯೇ ಇದೆ. ರಜನಿಕಾಂತ್ ಅವರಿಗೆ ಇಂದು (ಡಿಸೆಂಬರ್ 12) ಜನ್ಮದಿನ. ಅವರಿಗೆ ಈಗ 74 ವರ್ಷ. ಆದಾಗ್ಯೂ, ಅವರ ನಟನೆ ಮತ್ತು ಶೈಲಿಯ ಮೇಲಿನ ಪ್ರೇಕ್ಷಕರ ಪ್ರೀತಿ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗಿದೆ. ಅವರನ್ನು ಪ್ರಪಂಚದಾದ್ಯಂತ ಪ್ರಸಿದ್ಧರನ್ನಾಗಿ ಮಾಡಿದ್ದು ಅವರ ಡೈಲಾಗ್ ಡೆಲಿವರಿ ಮತ್ತು ಡ್ಯಾಶಿಂಗ್ ಎಂಟ್ರಿ, ಮತ್ತು ನಟನಾ ಶೈಲಿ. ಅದು ಇನ್ನೂ ಹಾಗೆಯೇ ಇದೆ. ಎಪ್ಪತ್ತೈದು ವರ್ಷಗಳನ್ನು ತಲುಪಿರುವ ರಜನಿಕಾಂತ್, ಈ ವಯಸ್ಸಿನಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

Read this – ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ  Kannada News | Darshan Thoogudeepa got Tv in his jail barrack | kannadafolks

ರಜನಿಕಾಂತ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಬಜೆಟ್ ಮತ್ತು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 1975 ರಲ್ಲಿ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಸಣ್ಣ ಪಾತ್ರದೊಂದಿಗೆ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ, ರಜನಿಕಾಂತ್ ದಕ್ಷಿಣದಿಂದ ಬಾಲಿವುಡ್‌ವರೆಗೆ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ನಟನೆಗೆ ಬರುವುದಕ್ಕೂ ಮೊದಲು ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು. ಇಂದು, ಅವರು ಕೋಟ್ಯಂತರ ರೂಪಾಯಿಗಳ ಮಾಲೀಕರಾಗಿದ್ದಾರೆ.

ರಜನಿಕಾಂತ್ ಅವರ ಮೊದಲ ಸಂಭಾವನೆ ಎಷ್ಟು?

ರಜನಿಕಾಂತ್ ಡಿಸೆಂಬರ್ 12, 1950 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಮರಾಠಿ ಕುಟುಂಬದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಶಿವಾಜಿರಾವ್ ಗಾಯಕ್ವಾಡ್. ನಟನಾಗುವ ಮೊದಲು ಅವರು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಿಂಗಳಿಗೆ 750 ರೂ. ಸಂಬಳ ಸಿಗುತ್ತಿತ್ತು. ಇದರ ಪ್ರಕಾರ, ಅವರ ಮೊದಲ ಸಂಬಳ 750 ರೂ.

Read this – Menstrual Leave: New Karnataka Govt Order ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ

ಒಂದು ಕಾಲದಲ್ಲಿ ತಿಂಗಳಿಗೆ 750 ರೂಪಾಯಿ ಸಂಪಾದಿಸುತ್ತಿದ್ದ ರಜನಿಕಾಂತ್, ಚಿತ್ರರಂಗಕ್ಕೆ ಬಂದ ನಂತರ ತಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ತಮ್ಮ 50 ವರ್ಷಗಳ ನಟನಾ ವೃತ್ತಿಜೀವನದಲ್ಲಿ 430 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಪೋಯೆಸ್ ಗಾರ್ಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆಯ ಬೆಲೆ ಸುಮಾರು 35 ಕೋಟಿ ರೂಪಾಯಿಗಳು. ಅವರ ಬಳಿ ಬಿಎಂಡಬ್ಲ್ಯೂ ಎಕ್ಸ್ 7 ಸೇರಿದಂತೆ ಅನೇಕ ದುಬಾರಿ ಕಾರುಗಳು ಇವೆ.

ರಜನಿಕಾಂತ್ ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೆಲವು ಚಿತ್ರಗಳಲ್ಲಿ ಅವರು ನಟಿಸಬೇಕಿದೆ. 2027ರ ವೇಳೆಗೆ ಅವರು ನಟನೆಗೆ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×