HomeNewsವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್ - Kannada...

ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್ – Kannada News | Hidden Threat in Your Can: How Energy Drinks Harm Kidneys More Than Alcohol | kannadafolks

ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್ - Kannada News | Hidden Threat in Your Can: How Energy Drinks Harm Kidneys More Than Alcohol | kannadafolks

ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್ – Kannada News | Hidden Threat in Your Can: How Energy Drinks Harm Kidneys More Than Alcohol | kannadafolksದಿನಾ ಮಾತ್ರೆ ತಿನ್ನುವವರಿಗೆ ಕಿಡ್ನಿ ಸಮಸ್ಯೆಯ ಅಪಾಯ ಹೆಚ್ಚು! ಹಾಗಾದ್ರೆ ಇದಕ್ಕೆ ಪರಿಹಾರ  ಏನು, ಇಲ್ಲಿದೆ ತಜ್ಞರ ಮಾಹಿತಿ - how do you keep your kidneys healthy while on  medication? know ...

Read this – Menstrual Leave: New Karnataka Govt Order  ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ

ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿಯೂ ಒಂದು. ಇವು ಶೋಧಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಕಾಪಾಡುತ್ತವೆ. ಆದರೆ ಈ ಮೂತ್ರಪಿಂಡಗಳು ಹಾನಿಗೊಳಗಾದಾಗ, ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ದೇಹದ ಆರೋಗ್ಯಕ್ಕೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಆಲ್ಕೋಹಾಲ್ ಮಾತ್ರ ಕಿಡ್ನಿಗೆ ಹಾನಿ ಮಾಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಕ್ಕಿಂತ ಅಪಾಯಕಾರಿ ಪಾನೀಯಗಳಿವೆ. ಹೌದು, ಇವುಗಳ ಬಗ್ಗೆ ಏಮ್ಸ್ ನ ಮೂತ್ರಶಾಸ್ತ್ರಜ್ಞ ಡಾ. ಪರ್ವೇಜ್ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ಕುರಿತ ಮತ್ತಷ್ಟು ಮಾಹಿತಿ ಪಡೆಯಲು ಸ್ಟೋರಿ ಓದಿ.

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ ಅಥವಾ ಕಿಡ್ನಿಯೂ ಒಂದು. ಇವು ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ದೇಹದಿಂದ ತ್ಯಾಜ್ಯ, ವಿಷವನ್ನು ಹೊರಹಾಕಿ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಈ ಮೂತ್ರಪಿಂಡಗಳು ಹಾನಿಗೊಳಗಾದಾಗ, ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ದೇಹದ ಆರೋಗ್ಯಕ್ಕೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಆಲ್ಕೋಹಾಲ್ ಮಾತ್ರ ಕಿಡ್ನಿಗೆ ಹಾನಿ ಮಾಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಕ್ಕಿಂತ ಅಪಾಯಕಾರಿ ಪಾನೀಯಗಳಿವೆ. ಹೌದು, ಇವುಗಳ ಬಗ್ಗೆ ಏಮ್ಸ್ ನ ಮೂತ್ರಶಾಸ್ತ್ರಜ್ಞ ಡಾ. ಪರ್ವೇಜ್ (Parwez urologist) ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಕಿಡ್ನಿಗೆ ಹಾನಿ ಮಾಡುವಂತಹ ಪಾನೀಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಆಲ್ಕೋಹಾಲ್ ಗಿಂತ ಅಪಾಯಕಾರಿಯಾದ ಪಾನೀಯ ಯಾವುದು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ನಾವು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

Read this – New Mahindra XEV 9e launched; prices in India start at Rs. 21.9 lakh

ಮೂತ್ರಪಿಂಡಗಳಿಗೆ ಹಾನಿಕಾರಕವಾಗಿರುವ ಪಾನೀಯಗಳ ಬಗ್ಗೆ ಡಾ. ಪರ್ವೇಜ್ ಮಾಹಿತಿ ನೀಡಿದ್ದು, ಅವರು ಹೇಳುವ ಪ್ರಕಾರ, ಎನರ್ಜಿ ಡ್ರಿಂಕ್ಸ್ ಮೂತ್ರಪಿಂಡಗಳಿಗೆ ತುಂಬಾ ಅಪಾಯಕಾರಿಯಾಗಿದ್ದು ಅವುಗಳಿಂದ ದೂರವಿದ್ದಷ್ಟು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಈ ಎನರ್ಜಿ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಜನರಲ್ಲಿ ಬಹಳ ಜನಪ್ರಿಯವಾಗುತ್ತಿದ್ದು, ಇವುಗಳ ಸೇವನೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಪ್ರತಿದಿನ ಈ ರೀತಿ ಎನರ್ಜಿ ಡ್ರಿಂಕ್ಸ್ ಸೇವಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಇದು ಕಿಡ್ನಿಗೆ ಹೆಚ್ಚುವರಿ ಒತ್ತಡ ನೀಡಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಡಾ. ಪರ್ವೇಜ್ ಅವರ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಶಕ್ತಿ ಪಾನೀಯ ಅಂದರೆ ಎನರ್ಜಿ ಡ್ರಿಂಕ್ಸ್ ಬಗ್ಗೆ ಎಚ್ಚರಿಕೆ ನೀಡಿದೆ. ಅಂತಹ ಪಾನೀಯಗಳನ್ನು ಸೇವಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಕುಡಿಯಬೇಕು. ಅದರಲ್ಲಿಯೂ ಪ್ರತಿದಿನ ಇಂತಹ ಪಾನೀಯಗಳ ಸೇವನೆ ಮಾಡುವುದರಿಂದ ಅದು ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಬಹುದು. ಅದರಲ್ಲಿಯೂ ಈಗಾಗಲೇ ಮೂತ್ರಪಿಂಡದ ಸಮಸ್ಯೆಗಳಿರುವವರು ಈ ರೀತಿಯ ಪಾನೀಯಗಳ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕಿಡ್ನಿ ಆರೋಗ್ಯಕ್ಕೆ ಯಾವ ರೀತಿಯ ಆಹಾರಗಳು ಒಳ್ಳೆಯದು?

ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ನಿಂಬೆ ನೀರು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ನಿಮ್ಮ ಆಹಾರದಲ್ಲಿ ಶುಂಠಿ ನೀರು ಮತ್ತು ಗಿಡಮೂಲಿಕೆ ಚಹಾವನ್ನು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×