Top Devotional stories of Ayyappa Swamy Chapter 2 – ಅಯ್ಯಪ್ಪ ಸ್ವಾಮಿಯ ಕಥೆ
4.ಗುರುಕುಲದಲ್ಲೇ ಮಣಿಕಂಠನ ಪವಾಡ:
![]()
Read previous story – Top Devotional stories of Ayyappa Swamy Chapter 1 ಅಯ್ಯಪ್ಪ ಸ್ವಾಮಿಯ ಕಥೆ
ಸಕಲ ವಿದ್ಯೆಯನ್ನು ಕಲಿತು ಸರ್ವಗುಣ ಸಂಪನ್ನನಾದ ಮಣಿಕಂಠನು ಕಲಿಕೆ ಪೂರ್ತಿಗೊಳಿಸಿದ ನಂತರ ಯಥೋಚಿತ ಗುರುದಕ್ಷಿಣೆ ಕೊಡಲು ಮತ್ತು ಗುರುವಿನ ಅನುಗ್ರಹ ಪಡೆಯಲು ಹೊರಟನು. ಅಯ್ಯಪ್ಪನು ಅಮಾನುಷಿಕ ಪ್ರಭಾವವಿರುವವ ಹಾಗೂ ದಿವ್ಯಶಕ್ತಿಯುಳ್ಳವನು ಎಂದು ತಿಳಿದ ಗುರು ತನ್ನ ಆಶೀರ್ವಾದವನ್ನು ಅಪೇಕ್ಷಿಸಿ ಬಂದ ಮಣಿಕಂಠನನ್ನು ಕುರಿತು ನನಗೆ ಗುರುದಕ್ಷಿಣೆ ನೀಡುವ ಹಂಬಲ ನಿನ್ನಲ್ಲಿದ್ದರೆ “ಕುರುಡನೂ ಕಿವುಡನೂ ಆದ ನನ್ನ ಮಗನಿಗೆ ದೃಷ್ಟಿಯನ್ನೂ, ಮಾತಾಡುವ ಶಕ್ತಿಯನ್ನೂ ನೀಡಿ ಅನುಗ್ರಹಿಸು” ಎಂದು ಕೇಳುತ್ಥಾರೆ. ಗುರುವಿನ ಮಾತಿಗೆ ಮನ್ನಿಸಿದ ಮಣಿಕಂಠನು ಗುರುಪುತ್ರನ ಶಿರದ ಮೇಲೆ ಕೈಯಿಟ್ಟನು. ಕೂಡಲೇ ಅವನಿಗೆ ದೃಷ್ಟಿ ಮತ್ತು ಮಾತಾಡುವ ಸಾಮರ್ಥ್ಯ ಪ್ರಾಪ್ತವಾದುವು. ತಾನುಮಾಡಿದ ಅದ್ಭುತ ಕೆಲಸವನ್ನು ಯಾರಿಗೂ ತಿಳಿಸಬಾರದೆಂದು ಕೇಳಿಕೊಂಡು ಮಣಿಕಂಠನು ಗುರುಕುಲದಿಂದ ಅರಮನೆಗೆ ಹಿಂದಿರುಗಿದನು.
5.ಮಣಿಕಂಠನ ಪಟ್ಟಾಭಿಷೇಕ:
Read this-Why Ayyappa Mala Importance of Ayyappa Mala Shabarimala
ಮಣಿಕಂಠನು ಗುರುಕುಲದಲ್ಲಿದ್ದ ಸಮಯದಲ್ಲಿ ಆತನ ಸಾಕುತಾಯಿ ರಾಣಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆ ಮಗುವಿಗೆ ರಾಜ ರಾಜನ್ ಎಂದು ನಾಮಕರಣ ಮಾಡಿದ್ದರು. ರಾಜ್ಯದಲ್ಲಿ ನಡೆದು ಹೋದ ಅದ್ಭುತ ಘಟನಾವಳಿಗಳು ಭಗವಾನ್ ಅಯ್ಯಪ್ಪನೇ ತನ್ನ ಮಗನಾಗಿ ಬಂದಿರುವನೆಂದು ಅವನು ಭಾವಿಸಿದನು. ಮಣಿಕಂಠನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದನು. ತನ್ನ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿ ಪೋಷಿಸಿದ್ದ ಕುತಂತ್ರಿಯಾದ ಮಂತ್ರಿಯು ಮಣಿಕಂಠನನ್ನು ದ್ವೇಷಿಸುತ್ತಿದ್ದನು. ಅವನು ಈ ದೈವಿಕ ಅವತಾರವನ್ನು ನಿರ್ಣಾಮಗೊಳಿಸಬೇಕೆಂದು ಪಣತೊಟ್ಟನು. ಮಣಿಕಂಠನಿಗೆ ವಿಷ ಪ್ರಾಶನ ಮಾಡುವುದರಿಂದ ಹಿಡಿದು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾನೆ. ಆದರೆ ಮಂತ್ರಿಯ ಯಾವುದೇ ಉಪಾಯಗಳು ಫಲಕಾರಿಯಾಗಲಿಲ್ಲ.
6.ಮಣಿಕಂಠನನ್ನು ಕೊಲ್ಲುವ ಕಸರತ್ತು:
ತನ್ನ ಯೋಜನೆಗಳು ಭಂಗವಾಗುವುದನ್ನು ಕಂಡು ನಿರಾಶನಾಗಿ ಹೋದ ಮಂತ್ರಿಯು ರಾಣಿಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸತೊಡಗಿದನು. ಸ್ವಂತ ಮಗನು ಜೀವಿಸಿರುವಾಗಲೇ ಮಣಿಕಂಠನನ್ನು ರಾಜನನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಅವಳ ಮನಸ್ಸನ್ನು ಕೆಡಿಸುತ್ತಾನೆ. ರಾಣಿ ಮತ್ತು ಮಂತ್ರಿ ಸೇರಿಕೊಂಡು ಮಣಿಕಂಠನನ್ನು ಕೊಲ್ಲಲಿ ಉಪಾಯ ಮಾಡುತ್ತಾರೆ. ಉಪಾಯದಂತೆ ಮಂತ್ರಿಯ ವೈದ್ಯನೊಬ್ಬನಿಂದ ರಾಣಿಯ ಅನಾರೋಗ್ಯ ನಿವಾರಣೆಗೆ ಹುಲಿಯ ಹಾಲು ಬೇಕು ಎಂದು ಹೇಳಿಸಿದನು. ಹುಲಿಯ ಹಾಲನ್ನು ಹುಡುಕಲು ಹೊರಟ ಮಣಿಕಂಠನನ್ನು ಹುಲಿಯ ಬಾಯಿಗೆ ಆಹಾರವಾಗಿ ನೀಡಲು ಯೋಚಿಸಿದ್ದರು. ಜವಾಬ್ದಾರಿ ನೆರವೇರಿಸಲು ಸಾಧ್ಯವಾಗದೆ ಪರಾಜಿತನಾಗಿ ಮಣಿಕಂಠನು ಹಿಂತಿರುಗಿ ಬಂದಲ್ಲಿ ಸಹಜವಾಗಿಯೇ ರಾಜನಿಗೆ ಆತನ ಮೇಲಿದ್ದ ಪ್ರೀತಿ ಕಡಿಮೆಯಾಗುವುದು ಎಂದು ರಾಣಿಗೆ ಹೇಳಿದನು.
Support Us 


