Welcome to Kannada Folks   Click to listen highlighted text! Welcome to Kannada Folks
Homeಕನ್ನಡ ಫೊಕ್ಸ್Nimika ratnakar signed to act new film 'Wild Tiger Safari'

Nimika ratnakar signed to act new film ‘Wild Tiger Safari’

Nimika ratnakar signed to act new film 'Wild Tiger Safari'

Spread the love

Nimika ratnakar  signed to act new film ‘Wild Tiger Safari’

ಕ್ರಾಂತಿ’ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕವೇ ಭಾರೀ ಕ್ರೇಜ್ ಹುಟ್ಟು ಹಾಕಿದ್ದವರು ಮಂಗಳೂರು ಹುಡುಗಿ ನಿಮಿಕಾ ರತ್ನಾಕರ್. ಇದೊಂದು ಹಾಡಿನ ಮೂಲಕವೇ ಕರ್ನಾಟಕದ ಕ್ರಶ್ ಆಗಿ ಮಿಂಚಿದ್ದ ನಿಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ವಿಶೇಷವೆಂದರೆ, ಮಹಿಳಾ ಪ್ರಧಾನ ಸಿನಿಮಾ ಅವಕಾಶ ಕೂಡ ಅವರ ಪಾಲಿಗೆ ಒಲಿದು ಬಂದಿದೆ.

Read this – Gruhalakshmi money will be released from the taluk panchayat  ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾಗಲಿದೆ ಗೃಹಲಕ್ಷ್ಮಿ ಹಣ

ಹೀಗೆ ಒಂದಷ್ಟು ಸಿನಿಮಾಗಳು ಚಿತ್ರೀಕರಣದ ಅಂತಿಮ ಘಟ್ಟದಲ್ಲಿರುವಾಗಲೇ, ಅವರು ನಾಯಕಿಯಾಗಿ ನಟಿಸಿರುವ ಮತ್ತೊಂದು ಸಿನಿಮಾಗೆ ತಯಾರಿ ಆರಂಭವಾಗಿದೆ. ಆ ಚಿತ್ರಕ್ಕೆ ‘ವೈಲ್ಡ್ ಟೈಗರ್ ಸಫಾರಿ’ ಎಂಬ ಶೀರ್ಷಿಕೆ ನಿಕ್ಕಿಯಾಗಿದೆ. ಇದರ ಮುಹೂರ್ತ ಸಮಾರಂಭ ಮಾರ್ಚ್ 7ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಲಿದೆ.ವೈಲ್ಡ್ ಟೈಗರ್ ಸಫಾರಿ’ ಚಿತ್ರವನ್ನು ಚಂದ್ರಮೌಳಿ ನಿರ್ದೇಶನ ಮಾಡಲಿದ್ದಾರೆ. ಇವರು ಕೆಜಿಎಫ್‌ ಸರಣಿಯ ರೈಟರ್ ಆಗಿ ಗಮನ ಸೆಳೆದಿದ್ದವರು. ಸದರಿ ಸಿನಿಮಾದ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಶಿವಕುಮಾರ್ ನಿಭಾಯಿಸಲಿದ್ದಾರೆ.

Read this – Kollegala MLA AR krishnamurthys mother gowramma passes away  ಕೊಳ್ಳೇಗಾಲ ಶಾಸಕ ಆರ್ ಕೃಷ್ಣಮೂರ್ತಿ ತಾಯಿ ಗೌರಮ್ಮ ನಿಧನ

ಇವರೂ ಕೂಡ ಕೆಜಿಎಫ್ ಸರಣಿಯ ಕಲಾ ನಿರ್ದೇಶಕರಾಗಿದ್ದವರು. ಇನ್ನುಳಿದಂತೆ ಎ.ಜೆ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದ ಮೂಲಕ ಶಿಥಿಲ್ ಪೂಜಾರಿ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಾಲಿವುಡ್‌ನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿಮಿಕಾ ರತ್ನಾಕರ್  ಚೆಂದದ ಪಾತ್ರವೊಂದರ ಮೂಲಕ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾದ ಬಗ್ಗೆ ಇಷ್ಟು ಮಾಹಿತಿಗಳು ಜಾಹೀರಾಗಿವೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!