Masala oats recipe – ಮಸಾಲಾ ಓಟ್ಸ್
ಬೇಕಾಗುವ ಪದಾರ್ಥಗಳು…
- ಓಟ್ಸ್ – 1 ಬಟ್ಟಲು
- ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
- ಟೊಮ್ಯಾಟೊ – 1
- ಕ್ಯಾರೆಟ್ – 1/4 ಬಟ್ಟಲು
- ಬೀನ್ಸ್ – 1/4 ಬಟ್ಟಲು
- ಬಟಾಣಿ – 1/4 ಬಟ್ಟಲು
- ಹಸಿಮೆಣಸಿನಕಾಯಿ – 2
- ಶುಂಠಿ – 1 ಚಿಕ್ಕ ತುಂಡು
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಕರಿಬೇವು – ಸ್ವಲ್ಪ
- ಅರಿಶಿನ – 1/4 ಚಮಚ
- ಕೆಂಪು ಮೆಣಸಿನ ಪುಡಿ – 1/2 ಚಮಚ
- ಗರಂ ಮಸಾಲಾ – 1/4 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ ಅಥವಾ ತುಪ್ಪ – 2 ಚಮಚ
- ನೀರು – 1½ ಬಟ್ಟಲು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ನಿಂಬೆರಸ – 1 ಚಮಚ
Read this – Bhindi pepper fry Recipe in Kannada ; ಬೆಂಡೆಕಾಯಿ ‘ಪೆಪ್ಪರ್ ಫ್ರೈ;
ಮಾಡುವ ವಿಧಾನ…
- ಮೊದಲು ಪ್ಯಾನ್‌ನಲ್ಲಿ ಓಟ್ಸ್ ಅನ್ನು 2 ನಿಮಿಷ ಸ್ವಲ್ಪ ಹುರಿದು ತೆಗೆದು ಇಡಿ.
- ಅದೇ ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿರಿ.
- ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ. ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
- ಈಗ ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ 3–4 ನಿಮಿಷ ಬೇಯಿಸಿ. ಬಳಿಕ ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಕಲಸಿ.
- ನೀರು ಸೇರಿಸಿ ಕುದಿಯಲು ಬಿಡಿ. ನಂತರ ಹುರಿದ ಓಟ್ಸ್ ಸೇರಿಸಿ ನಿಧಾನ ಉರಿಯಲ್ಲಿ 4–5 ನಿಮಿಷ ಬೇಯಿಸಿ.
- ಓಟ್ಸ್ ಗಟ್ಟಿಯಾಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿ. ಇದೀಗ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.
Read this – Carrot Rasmalai Recipe in Kannada; ಕ್ಯಾರೆಟ್ ರಸ್ಮಲೈ
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



