HomeLyricsVarava Kode Chamundi Song Lyrics - ವರವ ಕೊಡೆ ಚಾಮುಂಡಿ|Devotional Song

Varava Kode Chamundi Song Lyrics – ವರವ ಕೊಡೆ ಚಾಮುಂಡಿ|Devotional Song

Varava Kode Chamundi Song Lyrics - ವರವ ಕೊಡೆ ಚಾಮುಂಡಿ

Varava Kode Chamundi Song Lyrics – ವರವ ಕೊಡೆ ಚಾಮುಂಡಿ

 

 

 

ಚಾಮುಂಡಿ ದೇವಿ ಚಾಮುಂಡಿ||2||

ವರವ ಕೊಡೆ ಚಾಮುಂಡಿ ವರವ ಕೊಡೆ||2||
ಸೆರಗೊಡ್ಡಿ ಬೇಡುವೆನೂ ವರವ ಕೊಡೆ
ವರವ ಕೊಡೆ
ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ||2||
ನಿನ್ನಾಣೆ ನಾ ನಿನ್ನ‌ ಪಾದ ಬಿಡೆ ನಿನ್ನ ಪಾದ ಬಿಡೆ
||ವರವ||

ಕುಂಕುಮವು ಅರಸಿನವು
ಹೊಳೆವಂತ ಕರಿಮಣಿಯು||ಕುಂಕುಮ||
ಸ್ಥಿರವಾಗಿ ಇರುವಂತೆ ವರವ ತೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಬಾಗಿಲಲಿ ತೋರಣ
ಮದುವೆ ಮುಂಜಿ ನಾಮಕರಣ||ಬಾಗಿಲಲಿ||
ಯಾವಾಗಲು ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಹೆಸರುಳ್ಳ ಮನೆ ಕಟ್ಟಿ
ಹಸು ಕರುಗಳ ಸಾಲು ಕಟ್ಟಿ||ಹೆಸರು||
ವಂಶವ್ರಧ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಮನೆಯಲ್ಲಿ ಹರುಷ ಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು||ಮನೆಯ||
ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments