Bengaluru Pink Line Launch-ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ
ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗವನ್ನು ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ತಯಾರಿ ನಡೆದಿದೆ. ಇದಕ್ಕಾಗಿ ನಾಳೆಯಿಂದ ಏಪ್ರಿಲ್ 5ರವರೆಗೆ RDSO ಅಧಿಕಾರಿಗಳಿಂದ ರೈಲು ವೇಗ, ಲೋಡ್ ಟೆಸ್ಟ್ ಸೇರಿ ವ್ಯಾಪಕ ಪರಿಶೀಲನೆ ನಡೆಯಲಿದೆ. 6 ಡ್ರೈವರ್ಲೆಸ್ ರೈಲುಗಳೊಂದಿಗೆ ಆರಂಭಿಕ ಹಂತದಲ್ಲಿ ಕಾರ್ಯಾಚರಣೆ ಶುರುವಾಗಲಿದ್ದು, ಇದು ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಿದೆ.
Read this : Karnataka LPG Crisis CM Appeals-50 ಸಾವಿರ ಸಿಲಿಂಡರ್ಗಾಗಿ ಸಿದ್ದರಾಮಯ್ಯ ಪತ್ರ |Kannada Folks
ಬೆಂಗಳೂರು, ಮಾರ್ಚ್ 20: ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಪಿಂಕ್ ಲೈನ್ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಈ ವರ್ಷ ಮೇ ತಿಂಗಳಿನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಭರದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ನಾಳೆಯಿಂದ ಏಪ್ರಿಲ್ 5ರ ವರೆಗೆ 16 ದಿನಗಳ ಕಾಲ RDSO ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ್ಯಾಕ್ ಟೆಸ್ಟ್, ಸ್ಟೇಷನ್ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಇನ್ನು ಈ ಪಿಂಕ್ ಲೈನ್ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ಮೊದಲ ಹಂತದಲ್ಲಿ ಪಿಂಕ್ ಲೈನ್ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿದ್ದು, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್ಗಳಾಗಿವೆ. ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಪಿಂಕ್ ಲೈನ್ಗಾಗಿ ಬಿಇಎಂಎಲ್ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್ ಆಫ್ ಮೆಟ್ರೋ ರೈಲ್ವೇ ಸೇಫ್ಟಿಯಿಂದಲೂ ಅನುಮತಿ ಸಿಗುತ್ತಿದ್ದಂತೆ ಪಿಂಕ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಶುರುವಾಗಲಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


