HomeNewsBengaluru Pink Line Launch-ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ |Kannada Folks

Bengaluru Pink Line Launch-ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ |Kannada Folks

Bengaluru gears up as final checks begin for Pink Line launch

Bengaluru Pink Line Launch-ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ

ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್​​ ಮಾರ್ಗವನ್ನು ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ತಯಾರಿ ನಡೆದಿದೆ. ಇದಕ್ಕಾಗಿ ನಾಳೆಯಿಂದ ಏಪ್ರಿಲ್ 5ರವರೆಗೆ RDSO ಅಧಿಕಾರಿಗಳಿಂದ ರೈಲು ವೇಗ, ಲೋಡ್ ಟೆಸ್ಟ್ ಸೇರಿ ವ್ಯಾಪಕ ಪರಿಶೀಲನೆ ನಡೆಯಲಿದೆ. 6 ಡ್ರೈವರ್ಲೆಸ್ ರೈಲುಗಳೊಂದಿಗೆ ಆರಂಭಿಕ ಹಂತದಲ್ಲಿ ಕಾರ್ಯಾಚರಣೆ ಶುರುವಾಗಲಿದ್ದು, ಇದು ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಿದೆ.ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​ - Kannada News | Namma  Metro Pink and Blue Lines will open in 2026 | TV9 Kannada

Read this : Karnataka LPG Crisis CM Appeals-50 ಸಾವಿರ ಸಿಲಿಂಡರ್‌ಗಾಗಿ ಸಿದ್ದರಾಮಯ್ಯ ಪತ್ರ |Kannada Folks

ಬೆಂಗಳೂರು, ಮಾರ್ಚ್​​ 20: ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಪಿಂಕ್ ಲೈನ್ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಈ ವರ್ಷ ಮೇ ತಿಂಗಳಿನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಭರದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ನಾಳೆಯಿಂದ ಏಪ್ರಿಲ್ 5ರ ವರೆಗೆ 16 ದಿನಗಳ ಕಾಲ RDSO ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ್ಯಾಕ್ ಟೆಸ್ಟ್, ಸ್ಟೇಷನ್​​ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನು ಈ ಪಿಂಕ್​​ ಲೈನ್​​ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ‌ಮೊದಲ ಹಂತದಲ್ಲಿ ಪಿಂಕ್ ಲೈನ್​​ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿದ್ದು, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್​​ಗಳಾಗಿವೆ. ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​​ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಪಿಂಕ್​​ ಲೈನ್​​ಗಾಗಿ ಬಿಇಎಂಎಲ್​​ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್​​ ಆಫ್​​ ಮೆಟ್ರೋ ರೈಲ್ವೇ ಸೇಫ್ಟಿಯಿಂದಲೂ ಅನುಮತಿ ಸಿಗುತ್ತಿದ್ದಂತೆ ಪಿಂಕ್​​ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಶುರುವಾಗಲಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments