HomeNewsFestive Travel Fare Surge-ಹಬ್ಬಕ್ಕೆ ಬಸ್ ದರ ಡಬಲ್ ಶಾಕ್ |Kannada Folks

Festive Travel Fare Surge-ಹಬ್ಬಕ್ಕೆ ಬಸ್ ದರ ಡಬಲ್ ಶಾಕ್ |Kannada Folks

Private buses hike fares amid Ugadi and Ramadan rush

Festive Travel Fare Surge-ಹಬ್ಬಕ್ಕೆ ಬಸ್ ದರ ಡಬಲ್ ಶಾಕ್ 

ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲಕರಿಂದ ದರ ಹೆಚ್ಚಳದ ಶಾಕ್ ಎದುರಾಗಿದೆ. KSRTC ಹೆಚ್ಚುವರಿ ಬಸ್ ಬಿಟ್ಟಿದ್ದರೂ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು, ಸೀಟಿಗಾಗಿ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ - Kannada  News | Ugadi, Summer Holidays: Private Bus Price Hike, burden to passengers  | TV9 Kannada

Read this : Davanagere south by election Ticket Fight  ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್| Kannada Folks

ಬೆಂಗಳೂರು, ಮಾರ್ಚ್​​ 18: ಯುಗಾದಿ ಮತ್ತು ರಂಜಾನ್​​ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್​​ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​​ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್​​ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ KSRTC 2,325 ಹೆಚ್ಚುವರಿ ಬಸ್​​ಗಳನ್ನು ಬಿಟ್ಟಿರುವ ನಡುವೆಯೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.

ಖಾಸಗಿ ಬಸ್​​ಗಳ ಟಿಕೆಟ್​​ ದರ ಗಣನೀಯ ಏರಿಕೆ

ಬಸ್​​ಗಳ ಟಿಕೆಟ್​​ ದರ
ಎಲ್ಲಿಂದ ಎಲ್ಲಿಗೆ? ಹಿಂದಿನ ದರ (ರೂ.ಗಳಲ್ಲಿ) ಇಂದಿನ ದರ (ರೂ.ಗಳಲ್ಲಿ)
ಬೆಂಗಳೂರು-ಚಿಕ್ಕಮಗಳೂರು 366-650 999-1498
ಬೆಂಗಳೂರು-ಮಂಗಳೂರು 600-900 1212-2999
ಬೆಂಗಳೂರು-ಧಾರವಾಡ 389-1300 1400-4500
ಬೆಂಗಳೂರು-ಹುಬ್ಬಳ್ಳಿ 409-1248 1000-4500
ಬೆಂಗಳೂರು- ಕಾರವಾರ 542-900 1500-4500
ಬೆಂಗಳೂರು-ಕಲಬುರಗಿ 599-1300 1398-2800
ಬೆಂಗಳೂರು-ಶಿವಮೊಗ್ಗ 416-999 1109-2799
ಬೆಂಗಳೂರು-ಧರ್ಮಸ್ಥಳ 495-801 1011-3600
ಬೆಂಗಳೂರು-ಕೊಡಗು 450-600 899-3000

ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮೆಜೆಸ್ಟಿಕ್ ಬಸ್​​ ನಿಲ್ದಾಣ

ಇಂದು ಮಧ್ಯಾಹ್ನದಿಂದಲೇ ಊರಿನತ್ತ ಬೆಂಗಳೂರಿಗರು ಹೊರಟಿರುವ ಕಾರಣ ಮೆಜೆಸ್ಟಿಕ್ ಬಸ್​​ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ. ಸೀಟಿಗಾಗಿ ಪ್ರಯಾಣಿಕರ ನಡುವೆಯೇ ಪೈಪೋಟಿ ನಡೆಯುತ್ತಿದ್ದು, ಬಸ್ಸುಗಳು ಬರ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್​​ಗಳನ್ನು ಹಾಕಿ ಜನರು ಸೀಟ್ ಹಿಡಿಯಲು ಪ್ರಯತ್ನಿಸುತ್ತಿರೋದು ಸರ್ವೇ ಸಾಮಾನ್ಯ ಎಂಬಂತಿದೆ. ರಾತ್ರಿ ವೇಳೆಗೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments