Festive Travel Fare Surge-ಹಬ್ಬಕ್ಕೆ ಬಸ್ ದರ ಡಬಲ್ ಶಾಕ್
ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲಕರಿಂದ ದರ ಹೆಚ್ಚಳದ ಶಾಕ್ ಎದುರಾಗಿದೆ. KSRTC ಹೆಚ್ಚುವರಿ ಬಸ್ ಬಿಟ್ಟಿದ್ದರೂ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು, ಸೀಟಿಗಾಗಿ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
Read this : Davanagere south by election Ticket Fight ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್| Kannada Folks
ಬೆಂಗಳೂರು, ಮಾರ್ಚ್ 18: ಯುಗಾದಿ ಮತ್ತು ರಂಜಾನ್ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ KSRTC 2,325 ಹೆಚ್ಚುವರಿ ಬಸ್ಗಳನ್ನು ಬಿಟ್ಟಿರುವ ನಡುವೆಯೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.
ಖಾಸಗಿ ಬಸ್ಗಳ ಟಿಕೆಟ್ ದರ ಗಣನೀಯ ಏರಿಕೆ
| ಬಸ್ಗಳ ಟಿಕೆಟ್ ದರ | ||
| ಎಲ್ಲಿಂದ ಎಲ್ಲಿಗೆ? | ಹಿಂದಿನ ದರ (ರೂ.ಗಳಲ್ಲಿ) | ಇಂದಿನ ದರ (ರೂ.ಗಳಲ್ಲಿ) |
| ಬೆಂಗಳೂರು-ಚಿಕ್ಕಮಗಳೂರು | 366-650 | 999-1498 |
| ಬೆಂಗಳೂರು-ಮಂಗಳೂರು | 600-900 | 1212-2999 |
| ಬೆಂಗಳೂರು-ಧಾರವಾಡ | 389-1300 | 1400-4500 |
| ಬೆಂಗಳೂರು-ಹುಬ್ಬಳ್ಳಿ | 409-1248 | 1000-4500 |
| ಬೆಂಗಳೂರು- ಕಾರವಾರ | 542-900 | 1500-4500 |
| ಬೆಂಗಳೂರು-ಕಲಬುರಗಿ | 599-1300 | 1398-2800 |
| ಬೆಂಗಳೂರು-ಶಿವಮೊಗ್ಗ | 416-999 | 1109-2799 |
| ಬೆಂಗಳೂರು-ಧರ್ಮಸ್ಥಳ | 495-801 | 1011-3600 |
| ಬೆಂಗಳೂರು-ಕೊಡಗು | 450-600 | 899-3000 |
ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ
ಇಂದು ಮಧ್ಯಾಹ್ನದಿಂದಲೇ ಊರಿನತ್ತ ಬೆಂಗಳೂರಿಗರು ಹೊರಟಿರುವ ಕಾರಣ ಮೆಜೆಸ್ಟಿಕ್ ಬಸ್ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ. ಸೀಟಿಗಾಗಿ ಪ್ರಯಾಣಿಕರ ನಡುವೆಯೇ ಪೈಪೋಟಿ ನಡೆಯುತ್ತಿದ್ದು, ಬಸ್ಸುಗಳು ಬರ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್ಗಳನ್ನು ಹಾಕಿ ಜನರು ಸೀಟ್ ಹಿಡಿಯಲು ಪ್ರಯತ್ನಿಸುತ್ತಿರೋದು ಸರ್ವೇ ಸಾಮಾನ್ಯ ಎಂಬಂತಿದೆ. ರಾತ್ರಿ ವೇಳೆಗೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


