HomeNewsEPF Account Merge Online-ಬಹು ಇಪಿಎಫ್ ವಿಲೀನ |Kannada Folks

EPF Account Merge Online-ಬಹು ಇಪಿಎಫ್ ವಿಲೀನ |Kannada Folks

Easy Steps to Merge Multiple EPF Accounts

EPF Account Merge Online-ಬಹು ಇಪಿಎಫ್ ವಿಲೀನ

Steps to merge multiple EPF accounts through official EPFO website: ಒಬ್ಬ ಉದ್ಯೋಗಿ ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳನ್ನು ಹೊಂದಿರುವ ಅವಕಾಶ ಇರುತ್ತದೆ. ಎಲ್ಲಾ ಇಪಿಎಫ್ ಅಕೌಂಟ್​ಗಳನ್ನು ಒಂದೇ ಅಕೌಂಟ್​ಗೆ ವಿಲೀನಗೊಳಿಸಬಹುದು. ಹೆಚ್ಚು ಅಕೌಂಟ್ ಇರುವ ಬದಲು ಒಂದೇ ಅಕೌಂಟ್ ಇದ್ದರೆ ಬಡ್ಡಿ ಹಣ ನಿರಂತರವಾಗಿ ಸಂದಾಯ ಆಗುತ್ತಿರುತ್ತದೆ. ಹೀಗೆ ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವ ಕ್ರಮ ಇಲ್ಲಿದೆ.PF Amount: ಒಂದೇ ಕ್ಲಿಕ್‌ನಲ್ಲಿ ಪಿಎಫ್‌ ಖಾತೆಯಿಂದ ಹಣವನ್ನು ಹೀಗೆ ಹಿಂಪಡೆಯಿರಿ!  ಇಲ್ಲಿದೆ ಟ್ರಿಕ್ಸ್‌ | How To Withdraw PF 100 Percent Money Here Is Step By  Step Tricks - Goodreturns kannada

Read this : Davanagere south by election Ticket Fight ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್| Kannada Folks

ಇವತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಭವಿಷ್ಯದ ಭದ್ರತೆಗೆ ಇರುವ ಸ್ಕೀಮ್​ಗಳಲ್ಲಿ ಇಪಿಎಫ್ ಅಕೌಂಟ್ ಪ್ರಮುಖವಾದುದು. ಪ್ರತೀ ಉದ್ಯೋಗಿಗೂ ಕಂಪನಿ ವತಿಯಿಂದ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಅಕೌಂಟ್​ಗೆ ಹಾಕಲಾಗುತ್ತದೆ. ಕಂಪನಿ (ಉದ್ಯೋಗದಾತರು) ವತಿಯಿಂದಲೂ ಅಷ್ಟೇ ಪ್ರಮಾಣದಲ್ಲಿ ಹಣವು ಇಪಿಎಫ್ ಅಕೌಂಟ್​ಗೆ ಸೇರ್ಪಡೆಯಾಗುತ್ತದೆ. ಸರ್ಕಾರದಿಂದ (ಇಪಿಎಫ್​​ಒ ಸಂಸ್ಥೆ) ಪ್ರತೀ ವರ್ಷ ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಆಗುತ್ತದೆ. ಹೀಗೆ ಉದ್ಯೋಗಿ ನಿವೃತ್ತಿಯಾಗುವವರೆಗೂ ಹಣ ಬೆಳೆಯಬೇಕೆನ್ನುವುದು ಉದ್ದೇಶ.

ಇದೇ ವೇಳೆ, ಉದ್ಯೋಗಿಯು ಕಂಪನಿ ಬದಲಿಸಿ ಹೊಸ ಕಂಪನಿ ಸೇರಿದಾಗ ಹೊಸ ಇಪಿಎಫ್ ಅಕೌಂಟ್ ರಚನೆಯಾಗುತ್ತದೆ. ಉದ್ಯೋಗಿಯು ತನ್ನ ವೃತ್ತಿಜೀವನದಲ್ಲಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಬಹುದಾದ್ದರಿಂದ ಬಹು ಇಪಿಎಫ್ ಅಕೌಂಟ್​ಗಳು ಇದ್ದಿರಲು ಸಾಕು. ಕಂಪನಿ ಬದಲಿಸಿದಾಗ ಹಿಂದಿನ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ವಿಲೀನಗೊಳಿಸಲು ಹೊಸ ಕಂಪನಿಯ ಎಚ್​ಆರ್​ಗೆ ತಿಳಿಸಿದರೆ ಸುಲಭವಾಗಿ ವಿಲೀನಗೊಳಿಸಬಹುದು. ಇಲ್ಲದಿದ್ದರೆ ಒಬ್ಬ ವ್ಯಕ್ತಿಗೆ ಹಲವು ಇಪಿಎಫ್ ಅಕೌಂಟ್​ಗಳು ಇರುತ್ತವೆ.

ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳಿದ್ದರೆ ಅವನ್ನು ಇತ್ತೀಚಿನ ಇಪಿಎಫ್ ಅಕೌಂಟ್​ಗೆ ವಿಲೀನಗೊಳಿಸಬಹುದು. ಆನ್​ಲೈನ್​ನಲ್ಲೇ ಸುಲಭವಾಗಿ ಈ ಕೆಲಸ ಮಾಡಬಹುದು. ಹಾಗೆ ಮಾಡಲು ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವ ಕ್ರಮ ಹೀಗಿದೆ:

  • ಇಪಿಎಫ್​ಒ ವೆಬ್​ಸೈಟ್​ಗೆ ಭೇಟಿ ನೀಡಿ:
  • ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಸೈನ್ ಇನ್ ಆಗಿ
  • ಆನ್​ಲೈನ್ ಸರ್ವಿಸ್ ಟ್ಯಾಬ್​ಗೆ ಹೋಗಿ, ‘ಒನ್ ಮೆಂಬರ್ ಅಂಡ್ ಒನ್ ಇಪಿಎಫ್ ಅಕೌಂಟ್’ ಲಿಂಕ್ ಕ್ಲಿಕ್ ಮಾಡಿ.
  • ಹೊಸ ವಿಂಡೋದಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ಈಗಿರುವ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ನೋಡಬಹುದು.
  • ನೊಂದಾಯಿತ ಫೋನ್ ನಂಬರ್ ಮತ್ತು ಯುಎಎನ್ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿ ಒದಗಿಸಿ.
  • ‘ಜನರೇಟ್ ಒಟಿಪಿ’ ಆಯ್ಕೆ ಆಯ್ದುಕೊಂಡು ವೆರಿಫಿಕೇಶನ್ ಪಡೆಯಿರಿ.
  • ಈಗ ಹೊಸ ಇಪಿಎಫ್ ಅಕೌಂಟ್​ಗೆ ವಿಲೀನವಾಗಬೇಕಿರುವ ಹಳೆಯ ಇಪಿಎಫ್ ಅಕೌಂಟ್​ಗಳ ಮಾಹಿತಿ ಕೇಳಲಾಗುತ್ತದೆ.
  • ಡಿಕ್ಲರೇಶನ್ ಬಾಕ್ಸ್ ಅನ್ನು ಚೆಕ್ ಮಾಡಿ, ‘ಸಬ್ಮಿಟ್’ ಕ್ಲಿಕ್ ಮಾಡಿ.

ಈಗ ವಿಲೀನಕ್ಕೆ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ. ಈ ಅರ್ಜಿಗೆ ನಿಮ್ಮ ಈಗಿನ ಕಂಪನಿಯು ಅನುಮೋದನೆ ನೀಡಬೇಕು. ಆಗ ಈ ಅರ್ಜಿಯನ್ನು ಇಪಿಎಫ್​ಒ ಪರಿಶೀಲಿಸಿ, ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುತ್ತದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments