HomeLyricsKayakave Kailasa Andaru Basava Song Lyrics-ಕಾಯಕವೇ ಕೈಲಾಸ ಅಂದರು ಬಸವ|Devotional Song

Kayakave Kailasa Andaru Basava Song Lyrics-ಕಾಯಕವೇ ಕೈಲಾಸ ಅಂದರು ಬಸವ|Devotional Song

Kayakave Kailasa Andaru Basava Song Lyrics-ಕಾಯಕವೇ ಕೈಲಾಸ ಅಂದರು ಬಸವ

Kayakave Kailasa Andaru Basava Song Lyrics-ಕಾಯಕವೇ ಕೈಲಾಸ ಅಂದರು ಬಸವ

 

 

 

ಮಹಾಮಹಿಮ ಪರಮ ನಿರಂಜನ
ತ್ರಿವಿಧ ದಾಸೋಹಿ..
ಜಗಜ್ಯೋತಿ ಬಸವಣ್ಣರ ಅನುಯಾಯಿ…
ಕಾರುಣ್ಯ ಗಂಗೆಯ ಜನಕನಿಗೆ…
ಮನುಜ ಕುಲವೇ ಶರಣಾಗಿದೆ…
ಅನುಕಂಪ ಸಾಗರದ ಹೃದಯಕೆ
ದೇವಲೋಕವೇ ತಲೆ ಬಾಗಿದೆ
ಶಿವ ಭಕ್ತನ ಕಂಡ ಭಕ್ತನಿಗೆ..
ಎಲ್ಲಿಲ್ಲದ ಹರುಷ..
ಈ.. ಶತಮಾನ ಕಂಡ ತೇಜೋ ಪುರುಷ…
ಸುದ್ದಿಗಾಗಿ ಸೇವೆ ಮಾಡಲಿಲ್ಲ
ಸೇವೆ ಮಾಡಿ ಸುದ್ದಿ ಯಾಗಲಿಲ್ಲ
ಸದ್ದಿಲ್ಲದೆ ಸೇವೆ ಮಾಡಿದ
ನಡೆದಾಡುವ ದೇವರೇ ಆದ..

ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ

 

ಇನ್ನಷ್ಟು ಅನ್ವೇಷಿಸಿ
ಜಸ್ಟ್ ಮಾತ್ ಮಾತಲ್ಲಿ
ಸಂಗೀತ

 

ಸಿದ್ದಗಂಗಾ ಕ್ಷೇತ್ರವೇ ಪೂಜ್ಯರ ಉಸಿರು
ಪ್ರತಿಕಲ್ಲು ಹೇಳುತ್ತಿದೆ ಬುದ್ಧಿಯ ಹೆಸರು
ಸಿದ್ದಗಂಗಾ ಕ್ಷೇತ್ರವೇ ಪೂಜ್ಯರ ಉಸಿರು
ಪ್ರತಿಕಲ್ಲು ಹೇಳುತ್ತಿದೆ ಬುದ್ಧಿಯ ಹೆಸರು

ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ

ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ ಹಚ್ಚಿದ ಒಲೆಯೂ ಎಂದು
ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ ಹಚ್ಚಿದ ಒಲೆಯೂ ಎಂದು
ಊರೂರು ತಿರುಗಿ ಬಿಕ್ಷೆಯಬೇಡಿ
ಅನ್ನವ ಹಾಕಿದ ಯೋಗಿಯ ನೋಡಿ
ಜಾತಿ ಮತಗಳಿಗೆ ಬೆಂಕಿಯ ಇಟ್ಟು
ಎಲ್ಲರೂ ಒಂದೇ ಎನುವುದ ನೆಟ್ಟು
ಜ್ಞಾನದ ಜ್ಯೋತಿಯ ಹಚ್ಚುತ್ತ ನಡೆದ…
ಧರೆಯಲ್ಲಿ ಅಳಿಯದ ಇತಿಹಾಸ ಬರೆದ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ

 

ಇನ್ನಷ್ಟು ಅನ್ವೇಷಿಸಿ
ಸಂಗೀತ
ಜಸ್ಟ್ ಮಾತ್ ಮಾತಲ್ಲಿ

 

ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ

ಕಾನನಕೆ ಗಾನವಿಯ ಕರೆ ಕಳಿಸಿದ
ಎಲ್ಲರಿಗೂ ಆಕೆಯನ್ನು ಪರಿಚಯಿಸಿದ
ಕಾನನಕೆ ಗಾನವಿಯ ಕರೆ ಕಳಿಸಿದ
ಎಲ್ಲರಿಗೂ ಆಕೆಯನ್ನು ಪರಿಚಯಿಸಿದ
ಸರ್ವರಿಗೂ ಸಂಸ್ಕೃತ ಉಣಬಡಿಸಿದ
ಸಕಲರಿಗೂ ವೇದವ ತಿಳಿ ಪಡಿಸಿದ
ಅಂಧರ ಬಾಳಿನ ಆಶಾಕಿರಣ
ಬಡವರರಿಗೆ ಬಂಧು ಆದಾ ಶರಣ
ಬೆವರನ್ನು ಬಿತ್ತಿ ಮುತ್ತನ್ನು ಬೆಳೆದ…
ಭಾರತ ಮಾತೆಗೆ ಹಾರವನು ಹಾಕಿದ
ಭಾರತ ಮಾತೆಗೆ ಹಾರವನು ಹಾಕಿದ
ಭಾರತ ಮಾತೆಗೆ ಹಾರವನು ಹಾಕಿದ

 

ಇನ್ನಷ್ಟು ಅನ್ವೇಷಿಸಿ
ಜಸ್ಟ್ ಮಾತ್ ಮಾತಲ್ಲಿ
ಸಂಗೀತ

 

ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಕಾಯಕವೇ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ

ದಾನದಲ್ಲಿ ಧ್ಯಾನವು ಇದೆ ಎಂದರು
ತ್ಯಾಗದಲ್ಲಿ ಸುಖವನ್ನು ಕಾಣೆಂದರು
ದಾನದಲ್ಲಿ ಧ್ಯಾನವು ಇದೆ ಎಂದರು
ತ್ಯಾಗದಲ್ಲಿ ಸುಖವನ್ನು ಕಾಣೆಂದರು
ಸೇವೆಯಲ್ಲಿ ದೇವರನ್ನು ನೋಡಂದರು
ಪ್ರೀತಿಯಲ್ಲಿ ಜಗವನ್ನು ಗೆಲ್ಲೆಂದರು

ಉದ್ದಾನ ಶ್ರೀಗಳು ಕೆತ್ತಿದ ಮೂರುತಿ
ಇರುಳಾದ ಬಾಳನ್ನು ಬೆಳಗಿತು ಜ್ಯೋತಿ
ಪದಗಳಿಗೆ ನಿಲುಕದ ಸಾಧಕ ನೀನು…
ನಿಮಗಾಗಿ ಬರೆದದ್ದು ಶೂನ್ಯ ನಾನು
ನಿನಗಾಗಿ ಬರೆದದ್ದು ಶೂನ್ಯ ನಾನು
ನಿನಗಾಗಿ ಬರೆದದ್ದು ಶೂನ್ಯ ನಾನು

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments