HomeLyricsKolu Kolanna Kolu song lyrics - ಕೋಲು ಕೋಲಣ್ಣ ಕೋಲು

Kolu Kolanna Kolu song lyrics – ಕೋಲು ಕೋಲಣ್ಣ ಕೋಲು

ಕರ್ನಾಟಕದ ಜಾನಪದ ಸೊಗಡನ್ನು ಹೊತ್ತಿರುವ "ಕೋಲು ಕೋಲಣ್ಣ ಕೋಲು" ಹಾಡು ಗ್ರಾಮೀಣ ಸಂಸ್ಕೃತಿ, ಸಂಭ್ರಮ ಮತ್ತು ಜನಪದ ಪರಂಪರೆಯನ್ನು ಬಿಂಬಿಸುವ ಜನಪ್ರಿಯ ಕನ್ನಡ ಜಾನಪದ ಗೀತೆ.

Kolu Kolanna Kolu song lyrics – ಕೋಲು ಕೋಲಣ್ಣ ಕೋಲು

ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ನೀರಿಗೆ ಹೋಗೋ ಹೆಣ್ಣೇ
ನಿಲ್ಲೇ ನಾ ಬರುತೀನಿ
ನಿನ್ನಾಣೆ ನಿನ್ನ ಕೊಡದಾಣೆ
ನಿನ್ನಾಣೆ ನಿನ್ನ ಕೊಡದಾಣೆ
ನಿಲ್ಲೂ ನಿಲ್ಲೆನ್ನವಳೆ
ಕರದಾವೆ ಕೈಯಬಳೆ
ಬಿರಿದಾವೆ ನಿನ್ನ ನಗೆಮುಗುಳೆ
ಬಿರಿದಾವೆ ನಿನ್ನ ನಗೆಮುಗುಳೆ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಬಿಡು ಕೈಯ ಗೆಣೆಕಾರ
ಕೊಡಹೊತ್ತ ನಾಡು ಭಾರ
ಹಿಡಿ ನಿನ್ನ ದಾರಿ ಸರದಾರ
ಹಿಡಿ ನಿನ್ನ ದಾರಿ ಸರದಾರ
ಸಿಡುಕ್ಯಾಕೆ ನನ್ನ ಜಾಣೆ
ಸಿಡಿಲು ಬಡಿದಾರು ನಿನ್ನ
ಕಡಗಾದ ಕೈಯ ಬಿಡಲಾರೆ
ಕಡಗಾದ ಕೈಯ ಬಿಡಲಾರೆ
 ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ನೀನು ಕೋಡಂಗಿ ಗಂಡ
ದಾರಿ ಬಿಟ್ಟರೆ ಚಂದ
ನಿಂಗು ನಂಗೆಲ್ಲಿಯ ಸಂಬಂಧ
ನಿಂಗು ನಂಗೆಲ್ಲಿಯ ಸಂಬಂಧ
 ಬಂಗಾರ ಬೆಳ್ಳಿ ಒಡವೆ
ಸಿಂಗಾರ ಮಾಡಿಸುವೆ
ಹೆಂಗಾರ ಒಪ್ಪಿಕೊಳ್ಳೆ ಎಲೆ ಚೆಲುವೆ
ಹೆಂಗಾರ ಒಪ್ಪಿಕೊಳ್ಳೆ ಎಲೆ ಚೆಲುವೆ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲು
ಎಕ್ಕೋಲೆ ಕೋಲಣ್ಣ ಕೋಲೆ
ಬಣ್ಣಾದ ಸರದ ಮ್ಯಾಲೆ
ಕಣ್ಣ್ಯಾಕೋ ಗಿಣಿರಾಮ
ಹಣ್ಣಿಲ್ಲವೇನೊ ಮೆಲುವೋಕೆ
ಹಣ್ಣಿಲ್ಲವೇನೊ ಮೆಲುವೋಕೆ
ನೀನು ಮಲ್ಲಿಗೆ ಬಳ್ಳಿ
ನಾನಾದೆ ಮರವಿಲ್ಲಿ
ಸುತ್ತಿಕೊಳ್ಳೆ ನನ್ನ ಸೊಗದಲ್ಲಿ
ಸುತ್ತಿಕೊಳ್ಳೆ ನನ್ನ ಸೊಗದಲ್ಲಿ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
 ಆಚೇಯ ಕೇರಿಯೋನೆ
ಕುದ್ರೆ ಏರಿ ಬರುವೋನೆ
ಪಾರ್ವಾಳದಂಗೆ ಸುಳಿಯೋನೆ
ಪಾರ್ವಾಳದಂಗೆ ಸುಳಿಯೋನೆ
ಪಾರ್ವಾಳದಂಗೆ ಸುಳಿಯೋನೆ ಗೆಣೆಕಾರ
ದೂರು ಬಂದಾವು ನಿನ್ನಮ್ಯಾಲೆ
ದೂರು ಬಂದಾವು ನಿನ್ನಮ್ಯಾಲೆ
ದೂರು ಬಂದಾರು ಸರಿಯೇ
ನೂರು ಕೊಟ್ಟರು ಸರಿಯೇ
ನಾರಿ ನಿನ್ನ ಬಿಟ್ಟು ಇರಲಾರೆ
ನಾರಿ ನಿನ್ನ ಬಿಟ್ಟು ಇರಲಾರೆ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಮಾತು ಮಾತನ್ನು ಬೆಳೆಸಿ
ಯಾತಕ್ಕು ಸುಖವಿಲ್ಲ
ಸೋತೇನು ಬೇರೆ ಮಾತೇನು
ಸೋತೇನು ಬೇರೆ ಮಾತೇನು
 ಆಚೆ ಕೇರೀಲಿ ನಾನು
ಈಚೆ ಕೇರೀಲಿ ನೀನು
ಭಾಷೆ ತಾರೆಣ್ಣೆ ಬಲಗೈಲಿ
ಭಾಷೆ ತಾರೆಣ್ಣೆ ಬಲಗೈಲಿ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಮಾತಿಗೆ ತಪ್ಪುವಂತ
ಮಗಳಲ್ಲ ಕಾಣೋ ನಾನು
ಕಾದಿರೊ ಗೆಣೆಯಾ ನನಗಾಗಿ
ಕಾದಿರೊ ಗೆಣೆಯಾ ನನಗಾಗಿ
ನಾವಿಬ್ಬರೊಂದಾದ ಈ ಹಬ್ಬದಾನಂದ
ಹಬ್ಬಲಿ ಜಗವಾ ತಬ್ಬಾಲಿ
ಹಬ್ಬಲಿ ಜಗವಾ ತಬ್ಬಾಲಿ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲು
ಕೋಲು ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಎಕ್ಕೋಲೆ ಕೋಲಣ್ಣ ಕೋಲೆ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments