365 Cr for Team India-ಟೀಂ ಇಂಡಿಯಾ 365 ಕೋಟಿ ಬಹುಮಾನ
BCCI Rewards Team India: ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವು ಐಸಿಸಿ ಟೂರ್ನಿಗಳಲ್ಲಿ ತೋರಿದ ಅಸಾಧಾರಣ ಯಶಸ್ಸಿಗೆ ಬಿಸಿಸಿಐ ಭಾರಿ ಬಹುಮಾನ ನೀಡಿದೆ. 2026ರ ಟಿ20 ವಿಶ್ವಕಪ್ ಗೆಲುವಿಗೆ ₹131 ಕೋಟಿ, ಮಹಿಳಾ ಏಕದಿನ ವಿಶ್ವಕಪ್ಗೆ ₹51 ಕೋಟಿ, ಚಾಂಪಿಯನ್ಸ್ ಟ್ರೋಫಿಗೆ ₹58 ಕೋಟಿ ಹಾಗೂ 2024ರ ಟಿ20 ವಿಶ್ವಕಪ್ಗೆ ₹125 ಕೋಟಿ ಸೇರಿ ಒಟ್ಟು ₹365 ಕೋಟಿ ನೀಡಿ ಗೌರವಿಸಿದೆ.
Read this : Arshdeep Singh ICC Fine-ಅರ್ಶದೀಪ್ ಸಿಂಗ್ಗೆ ಐಸಿಸಿ ಶಾಕ್ |Kannada Folks
2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ, ಭಾರತ ತಂಡವು ಸತತ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮಹತ್ವದ ಸಾಧನೆಯ ನಂತರ, ಬಿಸಿಸಿಐ ಟೀಂ ಇಂಡಿಯಾಗೆ ಬೃಹತ್ ಮೊತ್ತದ ಹಣವನ್ನು ಬಹುಮಾನವನ್ನಾಗಿ ನೀಡಿದೆ. ಮೇಲೆ ಹೇಳಿದಂತೆ ಭಾರತ ತಂಡಕ್ಕೆ 131 ಕೋಟಿ ರೂ. ಬಹುಮಾನ ಸಿಕ್ಕಿದೆ.
ಇನ್ನು ಟಿ20 ವಿಶ್ವಕಪ್ಗೂ ಮೊದಲು ನಡೆದಿದ್ದ ಮಹಿಳೆಯರ ಏಕದಿನ ವಿಶ್ವಕಪ್ನಲ್ಲಿ ಭಾರತ ವನಿತಾ ಪಡೆ ಚಾಂಪಿಯನ್ ಆಗಿತ್ತು. 2025 ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಐತಿಹಾಸಿಕ ಸಾಧನೆಗೆ ಬಿಸಿಸಿಐ 51 ಕೋಟಿ ರೂ. ಬಹುಮಾನ ನೀಡಿತ್ತು.
2024 ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ, ಬಿಸಿಸಿಐ 125 ಕೋಟಿ ರೂ. ಬಹುಮಾನ ನೀಡಿತ್ತು. ಈಗ ಭಾರತ ಮಹಿಳಾ ತಂಡವು ಈ ವರ್ಷ ಟಿ20 ವಿಶ್ವಕಪ್ ಆಡಬೇಕಾಗಿದೆ. ಹಾಗೆಯೇ ಪುರುಷರ ತಂಡವು ಮುಂದಿನ ವರ್ಷ ಅಂದರೆ 2027ರಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಮತ್ತು ಬಿಸಿಸಿಐ ಎಷ್ಟು ಬಹುಮಾನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



