HomeNews365 Cr for Team India-ಟೀಂ ಇಂಡಿಯಾ 365 ಕೋಟಿ ಬಹುಮಾನ |Kannada Folks

365 Cr for Team India-ಟೀಂ ಇಂಡಿಯಾ 365 ಕೋಟಿ ಬಹುಮಾನ |Kannada Folks

BCCI rewards India for multiple ICC tournament victories.

365 Cr for Team India-ಟೀಂ ಇಂಡಿಯಾ 365 ಕೋಟಿ ಬಹುಮಾನ

BCCI Rewards Team India: ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವು ಐಸಿಸಿ ಟೂರ್ನಿಗಳಲ್ಲಿ ತೋರಿದ ಅಸಾಧಾರಣ ಯಶಸ್ಸಿಗೆ ಬಿಸಿಸಿಐ ಭಾರಿ ಬಹುಮಾನ ನೀಡಿದೆ. 2026ರ ಟಿ20 ವಿಶ್ವಕಪ್ ಗೆಲುವಿಗೆ ₹131 ಕೋಟಿ, ಮಹಿಳಾ ಏಕದಿನ ವಿಶ್ವಕಪ್‌ಗೆ ₹51 ಕೋಟಿ, ಚಾಂಪಿಯನ್ಸ್ ಟ್ರೋಫಿಗೆ ₹58 ಕೋಟಿ ಹಾಗೂ 2024ರ ಟಿ20 ವಿಶ್ವಕಪ್‌ಗೆ ₹125 ಕೋಟಿ ಸೇರಿ ಒಟ್ಟು ₹365 ಕೋಟಿ ನೀಡಿ ಗೌರವಿಸಿದೆ.2026 ರ ಟಿ20 ವಿಶ್ವಕಪ್‌ ಚಾಂಪಿಯನ್ ಟೀಮ್ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂ. ಬಹುಮಾನ ನೀಡಿದೆ. ಇದರ ಜೊತೆಗೆ ಐಸಿಸಿಯಿಂದಲೂ ಭಾರತ ತಂಡಕ್ಕೆ ಹಣ ಸಿಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ನಿರಂತರವಾಗಿ ಯಶಸ್ಸು ಸಾಧಿಸುತ್ತಿರುವ ಟೀಂ ಇಂಡಿಯಾದ ಆಟಗಾರರ ಮೇಲೆ ಬಿಸಿಸಿಐ ಹಣದ ಮಳೆಯನ್ನೇ ಹರಿಸಿದೆ. ಕಳೆದ 21 ತಿಂಗಳುಗಳಲ್ಲಿ ಬಿಸಿಸಿಐ, ಟೀಂ ಇಂಡಿಯಾಗೆ 365 ಕೋಟಿ ರೂ. ಬಹುಮಾನ ನೀಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

Read this : Arshdeep Singh ICC Fine-ಅರ್ಶದೀಪ್ ಸಿಂಗ್‌ಗೆ ಐಸಿಸಿ ಶಾಕ್ |Kannada Folks

2026 ರ ಟಿ20 ವಿಶ್ವಕಪ್‌ ಚಾಂಪಿಯನ್ ಟೀಮ್ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂ. ಬಹುಮಾನ ನೀಡಿದೆ. ಇದರ ಜೊತೆಗೆ ಐಸಿಸಿಯಿಂದಲೂ ಭಾರತ ತಂಡಕ್ಕೆ ಹಣ ಸಿಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ನಿರಂತರವಾಗಿ ಯಶಸ್ಸು ಸಾಧಿಸುತ್ತಿರುವ ಟೀಂ ಇಂಡಿಯಾದ ಆಟಗಾರರ ಮೇಲೆ ಬಿಸಿಸಿಐ ಹಣದ ಮಳೆಯನ್ನೇ ಹರಿಸಿದೆ. ಕಳೆದ 21 ತಿಂಗಳುಗಳಲ್ಲಿ ಬಿಸಿಸಿಐ, ಟೀಂ ಇಂಡಿಯಾಗೆ 365 ಕೋಟಿ ರೂ. ಬಹುಮಾನ ನೀಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

2026 ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ, ಭಾರತ ತಂಡವು ಸತತ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮಹತ್ವದ ಸಾಧನೆಯ ನಂತರ, ಬಿಸಿಸಿಐ ಟೀಂ ಇಂಡಿಯಾಗೆ ಬೃಹತ್ ಮೊತ್ತದ ಹಣವನ್ನು ಬಹುಮಾನವನ್ನಾಗಿ ನೀಡಿದೆ. ಮೇಲೆ ಹೇಳಿದಂತೆ ಭಾರತ ತಂಡಕ್ಕೆ 131 ಕೋಟಿ ರೂ. ಬಹುಮಾನ ಸಿಕ್ಕಿದೆ.
ಇನ್ನು ಟಿ20 ವಿಶ್ವಕಪ್​ಗೂ ಮೊದಲು ನಡೆದಿದ್ದ ಮಹಿಳೆಯರ ಏಕದಿನ ವಿಶ್ವಕಪ್​ನಲ್ಲಿ ಭಾರತ ವನಿತಾ ಪಡೆ ಚಾಂಪಿಯನ್ ಆಗಿತ್ತು. 2025 ರ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಐತಿಹಾಸಿಕ ಸಾಧನೆಗೆ ಬಿಸಿಸಿಐ 51 ಕೋಟಿ ರೂ. ಬಹುಮಾನ ನೀಡಿತ್ತು.

ಕಳೆದ ವರ್ಷ ನಡೆದಿದ್ದ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಈ ಗೆಲುವಿಗೆ ಬಹುಮಾನವಾಗಿ ಬಿಸಿಸಿಐ ಭಾರತ ತಂಡಕ್ಕೆ 58 ಕೋಟಿ ರೂ. ನೀಡಿತ್ತು.

2024 ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. 2007 ರ ನಂತರ ಇದು ಟೀಂ ಇಂಡಿಯಾದ ಮೊದಲ ಟಿ20 ವಿಶ್ವಕಪ್ ಗೆಲುವಾಗಿತ್ತು. ಹೀಗಾಗಿ ಈ ಸ್ಮರಣೀಯ ಗೆಲುವನ್ನು ಇನ್ನಷ್ಟು ವಿಶೇಷವಾಗಿಸಿದ ಬಿಸಿಸಿಐ ದೊಡ್ಡ ಮೊತ್ತದ ಬಹುಮಾನ ನೀಡಿತ್ತು.

2024 ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ, ಬಿಸಿಸಿಐ 125 ಕೋಟಿ ರೂ. ಬಹುಮಾನ ನೀಡಿತ್ತು. ಈಗ ಭಾರತ ಮಹಿಳಾ ತಂಡವು ಈ ವರ್ಷ ಟಿ20 ವಿಶ್ವಕಪ್ ಆಡಬೇಕಾಗಿದೆ. ಹಾಗೆಯೇ ಪುರುಷರ ತಂಡವು ಮುಂದಿನ ವರ್ಷ ಅಂದರೆ 2027ರಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಮತ್ತು ಬಿಸಿಸಿಐ ಎಷ್ಟು ಬಹುಮಾನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments