ಸಾಮಾಜಿಕ ವ್ಯವಸ್ಥೆ

ಎಲ್ಲಾ ಜಾತಿಗೂ ಬೇಕು ಅಭಿವೃದ್ಧಿ ಪ್ರಾಧಿಕಾರ – ಹಾಗದರೆ ಇಷ್ಟು ದಿನ ಮಾಡಿದ್ದೇನು ?

ಹೆಚ್ಚು ಚರ್ಚೆಯಲ್ಲಿರುವ ವಿಚಾರ ಈ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯಗಳು. ಇದು ರಾಜಕೀಯ ಅನುಕೂಲದ ಆಟ.

ಹೌದು ಇಷ್ಟು ದಿನ ಇಲ್ಲದ ಈ ಜಾತಿ ಅಭಿವೃದ್ಧಿ ಈಗ ಏಕೆ? 

ಕರ್ನಾಟಕದಲ್ಲಿ  150ಕ್ಕೂ ಹೆಚ್ಚು ಜಾತಿ- ಉಪ ಜಾತಿಗಳಿವೆ. 6,11,20,000 ಕ್ಕೂ ಹೆಚ್ಚು ಜನರಿದ್ದಾರೆ. ಇವುಗಳಲ್ಲಿ ನಮ್ಮ. ಸರ್ಕಾರದವರಿಗೆ ಕೇವಲ ಪ್ರಮುಖ ಜಾತಿಗಳು ಮಾತ್ರ ಕಾಣುತ್ತವೆ.

ಈಗಿನ ವಿಚಿತ್ರ ದಿನಗಳಲ್ಲಿ 75ರಷ್ಟು ಜನರಿಗೆ ಉದ್ಯೋಗವಿಲ್ಲ, ಊಟವಿಲ್ಲ ಆದರೆ ಈ ರಾಜಕೀಯದವರಿಗೆ ಪಕ್ಷ, ಸ್ಥಾನ, ಚುನಾವಣೆಯೇ ಹೆಚ್ಚು, ಈ ಕಷ್ಟ ಕಾಲದಲ್ಲೂ ಲಾಭ ಮಾಡಿಕೊಳ್ಳುವ ಚಠ!

ಬೆಳಗಾವಿ,ಗುಲ್ಬರ್ಗ ದಂತಹ ಗಡಿನಾಡಿನ ಜನರ ಮತ ಗಿಟ್ಟಿಸಲು “ಮರಾಠ ಜನಾಂಗ ಅಭಿವೃದ್ಧಿ”, ರಾಯಚೂರು,  ಯಾದಗಿರಿ ಜನರನ್ನು ಸೆಳೆಯಲು “ತೆಲುಗೂ ಪ್ರಾಧಿಕಾರದ”, ಹೊಸೂರು,ಚಾಮರಾಜನಗರ ಜನರಿಗಾಗಿ “ತಮಿಳು ಪ್ರಾಧಿಕಾರ”,  ವೀರಶೈವರಿಗಾಗಿ, ಗೌಡರಿಗಾಗಿ ಒಕ್ಕಲಿಗ, ಹೀಗೆ ಆಯಾ ಸರ್ಕಾರ  ಅವರ ಮೊಹರು ನಿರೂಪಿಸಲೂ ಮತ್ತು ತಮ್ಮ ವರ್ಚಸ್ಸು ಹೆಚ್ಚಿಸಲು ಇಚ್ಚೆ ಬಂದಂತೆ ಹಣ ಮೀಸಲಿಟ್ಟು, ಪ್ರವಾಹ, ಭೂಕಂಪ, ಸಂಕ್ರಾಮಿಕ ದಂತಹ ಊಹಿಸಲಾಗದ ತೊಂದರೆ ಬಂದಾಗ ಅದೇ ಹಣಕ್ಕಾಗಿ ಅಂಗಲಾಚುವುದನ್ನು ನೋಡಿದ್ದೇವೆ.

ಇದನ್ನು ಓದಿ : ರವಿ ಬೆಳಗೆರೆ- ಸಹೋದ್ಯೋಗಿಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪ ?!- ಪತ್ತೆದಾರಿ ಮಾಡಿದವರ “ಕ್ರೈಂ ಡೈರಿ”

ಹೀಗೇಕೆ ಮಾಡಬಾರದು ?! 

50ಕೋಟಿ,  100 ಕೋಟಿ  ಮನಸ್ಸೋ ಇಚ್ಚೆಬಂದಂತೆ ಮಿಸಲಿಡುವ ಬದಲು ಅದೇ ಹಣದಿಂದ ಬಡವರಿಗೆ, ನಿರುದ್ಯೋಗಿಗಳಿಗೆ ಅಭಿವೃದ್ಧಿ ಪ್ರಾಧಿಕಾರ ಏಕಾಗಬಾರದು. ಇದರಿಂದ ರಾಜ್ಯದ ಸರ್ವತೋಮುಖ ಬೆಳವಣಿಗೆ ಹಾಗುತ್ತದೆ ಜನಾಂಗಿಯ ಪಿಡುಗುಗಳು ದೂರವಾಗುತ್ತದೆ.

ಕೆಲವೊಮ್ಮೆ ಸಾಮಾನ್ಯ ಜನರಿಗೆ ಒಳೆಯುವ ಅಲೋಚನೆಗಳು ಉತ್ತಮ ಎನಿಸಿಕೊಂಡ ಸರ್ವೋತ್ತಮರಿಗೆ ಒಳೆಯುವುದಿಲ್ಲ.

ಏನಾದರೂ ನಾವೆ ಅವರ ಕೈಗೆ ಚುಕಾಣಿ ಕೊಟ್ಟು ಕೂರಿಸಿದ್ದೇವೆ ಇನ್ನು ಅನುಭವಿಸಬೇಕಷ್ಟೆ !

[email-subscribers-form id=”1″]

 

 

Kannada Folks
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
https://kannadafolks.in

One Reply to “ಎಲ್ಲಾ ಜಾತಿಗೂ ಬೇಕು ಅಭಿವೃದ್ಧಿ ಪ್ರಾಧಿಕಾರ – ಹಾಗದರೆ ಇಷ್ಟು ದಿನ ಮಾಡಿದ್ದೇನು ?

Leave a Reply

Your email address will not be published. Required fields are marked *