Welcome to Kannada Folks   Click to listen highlighted text! Welcome to Kannada Folks
HomeStoriesWhich grains should be offered during Shiva Puja

Which grains should be offered during Shiva Puja

Which grains should be offered during Shiva Puja - ಶಿವ ಪೂಜೆ ಮಾಡುವಾಗ ಯಾವ ಧಾನ್ಯಗಳನ್ನು ಅರ್ಪಿಸಿದರೆ ಒಳ್ಳೆಯದು

Spread the love

Which grains should be offered during Shiva Puja – ಶಿವ ಪೂಜೆ ಮಾಡುವಾಗ ಯಾವ ಧಾನ್ಯಗಳನ್ನು ಅರ್ಪಿಸಿದರೆ ಒಳ್ಳೆಯದು

ಸರಳತೆಯನ್ನು ಬಯಸುವ ಶಿವನನ್ನು ನಿಷ್ಕಲ್ಮಶ ಮನಸ್ಸಿನಿಂದ ಪೂಜೆ ಮಾಡಿದರೆ ಬಹುಬೇಗ ಪ್ರಸನ್ನನಾಗುವನು. ಶಿವನ ಪೂಜೆಯನ್ನು ಹಾಗೂ ಧ್ಯಾನವನ್ನು ಮಾಡುವಾಗ ಶಿವನಿಗೆ ಕೆಲವು ವಿಶೇಷವಾದ ಧಾನ್ಯಗಳನ್ನು ಅರ್ಪಿಸಬೇಕು. ಪುರಾತನ ಕಾಲದಲ್ಲಿ ಋಷಿಮುನಿಗಳು ಸಹ ಶಿವನಿಗೆ ಇಷ್ಟವಾಗುವ ಧಾನ್ಯಗಳ ನೈವೇದ್ಯವನ್ನು ಹಾಗೂ ಅಭಿಷೇಕವನ್ನು ಕೈಗೊಳ್ಳುವುದರ ಮೂಲಕ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಿದ್ದರು. ಧಾನ್ಯಗಳು ಸಾಮಾನ್ಯವಾಗಿ ದೈವ ಶಕ್ತಿಯನ್ನು ಹಾಗೂ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ವೇದ ಮತ್ತು ಪುರಾಣ ಕಥೆಗಳಲ್ಲಿ ವಿವರಿಸಲಾಗಿದೆ. ಶಿವನನ್ನು ಒಲಿಸಲು ಅಥವಾ ಶಿವನ ಆಶೀರ್ವಾದ ಪಡೆಯಲು ಯಾವ ಬಗೆಯ ಧಾನ್ಯಗಳನ್ನು ಅರ್ಪಿಸಬಹುದು ಎನ್ನುವುದನ್ನು ತಿಳಿಯೋಣ.

ಶಿವನಿಗೆ ಪ್ರಿಯವಾದ ಧಾನ್ಯಗಳು

Read this – How to back up your chat history- Android Solutions WhatsApp

ಬಾರ್ಲಿಯನ್ನು ಅರ್ಪಿಸಿ

ಜೀವನದಲ್ಲಿ ಸಾಕಷ್ಟು ಕಷ್ಟ ಹಾಗೂ ನೋವುಗಳನ್ನೇ ಅನುಭವಿಸುತ್ತಿದ್ದೀರಿ ಎಂದಾದರೆ ಸೋಮವರದಂದು, ಶಿವಾರಾತ್ರಿಯಂದು ಅಥವಾ ಶ್ರಾವಣ ಸೋಮವಾರಗಳಂದು ವಿಶೇಷವಾದ ಪೂಜೆಯ ಜೊತೆಗೆ ಶಿವಲಿಂಗಕ್ಕೆ ಬಾರ್ಲಿಯನ್ನು ಅರ್ಪಿಸಬೇಕು. ಆಗ ಶಿವನ ಆಶೀರ್ವಾದ ದೊರೆಯುವುದು. ಜೊತೆಗೆ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳಿಂದ ಕಷ್ಟಗಳು ದೂರವಾಗುತ್ತವೆ. ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಎಲ್ಲಾ ಕೆಟ್ಟ ಸಂಗತಿಗಳು ಸಹ ಜೀವನದಿಂದ ಹೊರಹೋಗುತ್ತವೆ.ಬಾರ್ಲಿಯನ್ನು ಅರ್ಪಿಸಿ

Read this – What Happened to Wynk Music Story Behind the Screen of Apple

ರಾಗಿ

ದಾಂಪತ್ಯ ಜೀವನದಲ್ಲಿ ವಿರಸ ಹಾಗೂ ಬೇಸರವನ್ನು ಹೊಂದಿದವರು ಶಿವನಿಗೆ ಅಥವಾ ಶಿವಲಿಂಗಕ್ಕೆ ರಾಗಿಯನ್ನು ಅರ್ಪಿಸಬೇಕು. ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಕೈಗೊಳ್ಳುವುದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯವು ಖಚಿತವಾಗಿರುತ್ತದೆ. ಉತ್ತಮ ಸಂಗಾತಿಯನ್ನು ಜೀವನದಲ್ಲಿ ಪಡೆಯಬೇಕು ಎನ್ನುವ ಮನಸ್ಸನ್ನು ಹೊಂದಿರುವ ಅವಿವಾಹಿತರು ಸಹ ಶಿವಲಿಂಗಕ್ಕೆ ರಾಗಿಯನ್ನು ಅರ್ಪಿಸಬಹುದು. ಮನಸ್ಸಿನ ಆಸೆಗಳು ಬಹುಬೇಗ ನೆರವೇರುವುದು. ಈ ಉತ್ತಮ ಧಾರ್ಮಿಕ ವಿಧಿಯನ್ನು ಅನುಸರಿಸುವುದರ ಮೂಲಕ ಮೋಕ್ಷ ಹಾಗೂ ಪುಣ್ಯ ಪ್ರಾಪ್ತಿಯಾಗುವುದು.ರಾಗಿ

Read this – Story of Ravana  Untold story series of Good about evil  Get all Episodes

ಅಕ್ಕಿ

ಅಕ್ಕಿ ಧಾರ್ಮಿಕವಾಗಿ ಅತ್ಯಂತ ಪವಿತ್ರತೆಯನ್ನು ಪಡೆದುಕೊಂಡಿರುವ ಧಾನ್ಯ. ಅಕ್ಕಿ ಅಥವಾ ಅಕ್ಷತೆ ಇಲ್ಲದೆ ಹಿಂದೂ ಪೂಜಾ ವಿಧಿ ಹಾಗೂ ಶುಭ ಕಾರ್ಯಗಳು ಅಪೂರ್ಣವಾಗುತ್ತವೆ. ಅಕ್ಕಿಯು ಮನುಷ್ಯ ಮತ್ತು ದೈವ ಶಕ್ತಿಯ ನಡುವೆ ಉತ್ತಮ ಬಾಂಧವ್ಯ ಹಾಗೂ ಸಂಪರ್ಕವನ್ನು ಕಲ್ಪಿಸಿಕೊಡುತ್ತದೆ ಎಂದು ಹೇಳಲಾಗುವುದು. ಶಿವ ಪುರಾಣದ ಪ್ರಕಾರ ಶಿವಲಿಂಗಕ್ಕೆ ಅಥವಾ ಶಿವನಿಗೆ ಅಕ್ಕಿಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಜೊತೆಗೆ ಆದಾಯದ ಮೂಲವು ಹೆಚ್ಚುತ್ತದೆ. ಜೀವನದಲ್ಲಿ ಹಣದ ಕೊರತೆ ಉಂಟಾಗದು ಎಂದು ಸಹ ಹೇಳಲಾಗುವುದು.ಅಕ್ಕಿ

Read this – Krishna Janmashtami: Puja Timings, Rituals, Story, and Dates

ಗೋಧಿ

ಬಂಜೆತನ ಸಮಸ್ಯೆ ಇರುವ ದಂಪತಿಗಳು ಶಿವಲಿಂಗದ ಪೂಜೆಯನ್ನು ಕೈಗೊಳ್ಳಬೇಕು ಎಂದು ಪುರಾಣಗಳು ಸಲಹೆ ನೀಡುತ್ತವೆ. ಪ್ರಾಚೀನ ಕಾಲದ ಋಷಿಮುನಿಗಳು ಹೇಳುವ ಪ್ರಕಾರ ಮಕ್ಕಳಿಲ್ಲದ ದಂಪತಿಗಳು ಪ್ರತಿ ಸೋಮವಾರ, ಶಿವರಾತ್ರಿಯ ಸಮಯದಲ್ಲಿ ಅಥವಾ ಶ್ರಾವಣ ಮಾಸದ ಪ್ರತಿ ಸೋಮವಾರ ಶಿವನಿಗೆ ಗೋಧಿಯನ್ನು ಅರ್ಪಿಸಬೇಕು. ಜೊತೆಗೆ ಭಕ್ತಿಯಿಂದ ಕೈಗೊಳ್ಳುವ ಪೂಜೆಯಿಂದ ಮಕ್ಕಳ ಭಾಗ್ಯವನ್ನು ಪಡೆದುಕೊಳ್ಳಬಹುದು.ಗೋಧಿ

Read this – Dasara  Day 1- Story of goddess shailaputri: Navarathri Vibhava

ಎಳ್ಳಿನ ಬೀಜಗಳು

ಕುಟುಂಬದ ಸದಸ್ಯರು ದೀರ್ಘಕಾಲದ ಅನಾರೋಗ್ಯ ಹಾಗೂ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದರೆ ಶಿವನಿಗೆ ಅಥವಾ ಶಿವಲಿಂಗಕ್ಕೆ ಎಳ್ಳನ್ನು ಅರ್ಪಿಸಿ ಪೂಜೆ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳಿಂದ ಬಹು ಬೇಗ ಮುಕ್ತಿ ಪಡೆಯಬಹುದು. ಕಷ್ಟಗಳು ಸಹ ಸುಲಭವಾಗಿ ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದು. ಭವಿಷ್ಯದಲ್ಲಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವರು.ಎಳ್ಳಿನ ಬೀಜಗಳು

Read this – Story of Ravan Kannada Version of Ravan Episodes Series

ಹೆಸರು ಕಾಳು

ಪುರಾಣ ಕಥೆಗಳು ವಿವರಿಸುವ ಪ್ರಕಾರ ಶಿವಲಿಂಗಕ್ಕೆ ಅಥವಾ ಶಿವನಿಗೆ ಹೆಸರು ಕಾಳನ್ನು ಅರ್ಪಿಸಿದರೆ ಜೀವನದಲ್ಲಿ ಮಾಡಿದ ಪಾಪ ಕರ್ಮಗಳು ತೊಳೆಯುತ್ತವೆ. ಇದರೊಟ್ಟಿಗೆ ಜೀವನದಲ್ಲಿ ಸಕಾರಾತ್ಮಕತೆಯನ್ನು ಪಡೆದುಕೊಳ್ಳುವರು. ಜೀವನದಲ್ಲಿ ಸನ್ಮಾರ್ಗದಲ್ಲಿಯೇ ನಡೆಯುವರು. ಪ್ರತಿ ಸೋಮವಾರ ವಿಶೇಷವಾದ ಶಿವ ಧ್ಯಾನ, ಪೂಜೆ ಹಾಗೂ ಹೆಸರು ಕಾಳನ್ನು ಅರ್ಪಿಸುವುದರಿಂದ ಭವಿಷ್ಯದ ಪ್ರತಿಯೊಂದು ಮಾರ್ಗದಲ್ಲೂ ಅಡಚಣೆಗಳು ಹಾಗೂ ಕಷ್ಟಗಳು ನಿರ್ಮೂಲನೆಯಾಗುತ್ತವೆ.ಹೆಸರು ಕಾಳು

Read this – Story of Ravan  Kannada Version of Ravan Episodes Series

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!