HomeNewsCultureWednesday Special - ಗಣಪತಿ ಪೂಜೆಯಿಂದ ಫಲ

Wednesday Special – ಗಣಪತಿ ಪೂಜೆಯಿಂದ ಫಲ

Wednesday Special - ಗಣಪತಿ ಪೂಜೆಯಿಂದ ಫಲ

Wednesday Special – ಗಣಪತಿ ಪೂಜೆಯಿಂದ ಫಲGanesh Festival - Nadi Tarangini

Read this-Dhanurmas 2025  ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿಬೇಕು

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ವಿಘ್ನನಿವಾರಕನಾದ ಗಣಪತಿಯನ್ನು ಆರಾಧಿಸಲಾಗುತ್ತದೆ. ಈ ಕಾರಣದಿಂದ ಗಣೇಶನನ್ನು ಮೊದಲ ಆರಾಧಕ, ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಗಣಪತಿಯನ್ನು ಪೂಜಿಸಿ, ಅವನಿಗೆ ಪ್ರಿಯವಾದ ಕೆಲಸಗಳನ್ನು ಈ ದಿನ ಮಾಡುವುದರಿಂದ ಮನೆಯಲ್ಲಿರುವ ವಾಸ್ತು ದೋಷದೊಂದಿಗೆ ಎಲ್ಲಾ ರೀತಿಯ ದೋಷಗಳು ದೂರಾಗುತ್ತದೆ. ಗಣಪತಿಯ ಅನುಗ್ರಹವನ್ನು ಪಡೆದುಕೊಂಡಿರುವವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಶೀಘ್ರದಲ್ಲೇ ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ ಎನ್ನುವ ನಂಬಿಕೆಯಿದೆ. ಬುಧವಾರದಂದು ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಬುಧವಾರ ಗಣೇಶನನ್ನು ಪೂಜಿಸುವುದರಿಂದ ಬುಧ ಗ್ರಹಕ್ಕೆ ಸಂಬಂಧಿಸಿದ ದೋಷಗಳು ದೂರಾಗುತ್ತದೆ, ಮತ್ತು ಆ ವ್ಯಕ್ತಿಯ ದುರಾದೃಷ್ಟವು ದೂರಾಗಿ ಅದೃಷ್ಟವು ಕೈಹಿಡಿಯುತ್ತದೆ ಎನ್ನುವ ನಂಬಿಕೆಯಿದೆ. ಗುರುವಾರ ಗಣೇಶನನ್ನು ಮೆಚ್ಚಿಸಲು ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.

ಬುಧವಾರ ಹಸಿರು ಬಣ್ಣದ ಮಹತ್ವ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಬುಧವಾರವು ಗಣೇಶನ ದಿನ. ಈ ದಿನ ಗಣಪತಿಯ ಆರಾಧನೆಯು ವಿಶೇಷ ಮಹತ್ವನ್ನು ಒಳಗೊಂಡಿದೆ. ಈ ದಿನ ಗಣೇಶನಿಗೆ ಮಾತ್ರವಲ್ಲ, ಬೂಧ ಗ್ರಹಕ್ಕೂ ಕೂಡ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರ ಜಾತಕದಲ್ಲಿ ಬುಧನು ದುರ್ಬಲ ಸ್ಥಿತಿಯಲ್ಲಿರುತ್ತಾನೋ ಅಂತವರು ಬುಧವಾರದಂದು ಹಸಿರು ಬಟ್ಟೆ ಅಥವಾ ಹಸಿರು ಕರವಸ್ತ್ರವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿರಬೇಕು. ಇದಲ್ಲದೆ ಬುಧವಾರದಂದು ನೀವು ಹೆಸರು ಬೇಳೆ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. ಇದನ್ನು ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ.

Read this-Dhanurmasa  ಧನುರ್ಮಾಸದಂದು ವಿಷ್ಣುವಿನ ಪೂಜೆ ಏಕೆ ಮಾಡಬೇಕು?

ಗಣೇಶನಿಗೆ ದುರ್ವಾವನ್ನು ಅರ್ಪಿಸಿ:

ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ದುರ್ವಾವನ್ನು ಕುಡ ಒಂದೆಂದು ಪರಿಗಣಿಸಲಾಗುತ್ತದೆ. ಸತತವಾಗಿ 11 ಬುಧವಾರದವರೆಗೆ ನೀವು ಗಣೇಶನಿಗೆ ದುರ್ವಾವನ್ನು ಅರ್ಪಿಸಿದರೆ, ಅವನು ಶೀಘ್ರದಲ್ಲೇ ನಿಮ್ಮಿಂದ ಸಂತೋಷಪಡುತ್ತಾನೆ. ಮತ್ತು ನೀವು ಅವನಿಂದ ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ ಎನ್ನುವ ನಂಬಿಕೆಯಿದೆ. ನೀವು ಯಾವುದೇ ರೀತಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ಉದ್ಯೋಗ, ವ್ಯಾಪಾರ ಹಾಗೂ ವ್ಯವಹಾರದಲ್ಲಿ ಪದೇ ಪದೇ ನಷ್ಟಗಳು ಎದುರಾಗುತ್ತಿದ್ದರೆ ಶುದ್ಧ ಮನಸ್ಸಿನಿಂದ ಗಣೇಶನ ಮಂತ್ರವನ್ನು ಪಠಿಸುತ್ತಾ ಅವನಿಗೆ ದುರ್ವಾ ಹುಲ್ಲನ್ನು ಅರ್ಪಿಸಿ. ಇದು ಶೀಘ್ರದಲ್ಲೇ ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ.

ಗಣೇಶನಿಗೆ ಶಮಿಯನ್ನು ಅರ್ಪಿಸಿ:

ಶಮಿ ಎಲೆಗಳನ್ನ ಹೆಚ್ಚಾಗಿ ಶಿವನಿಗೆ ಅರ್ಪಿಸುವುದನ್ನು ನೋಡಿರಬಹುದು. ಯಾಕೆಂದರೆ ಶಿವನು ಬಿಲ್ವದಂತೆ ಶಮಿ ಎಲೆಗಳನ್ನು ಕೂಡ ಇಷ್ಟಪಡುತ್ತಾನೆ. ಶಮಿ ಎಲೆಯನ್ನು ಶಿವ ಮತ್ತು ಗಣೇಶನ ಪೂಜೆಯಲ್ಲಿ ಬಳಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಿವನಂತೆ ಗಣೇಶನಿಗೂ ಶಮಿ ಎಲೆಗಳನ್ನು ಅರ್ಪಿಸಲಾಗುತ್ತದೆ. ಗಣೇಶನಿಗೆ ಶಮಿ ಎಲೆಗಳನ್ನು ಅರ್ಪಿಸುವುದರಿಂದ ಓರ್ವ ವ್ಯಕ್ತಿಯು ಮಾನಸಿಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಯಾಗುತ್ತದೆ.

Read this-Danurmasa  ಬ್ರಹ್ಮ ಮುಹೂರ್ತದಲ್ಲಿ ದೇವರನ್ನೇ ಪೂಜಿಸಬೇಕು.!

ಗಣೇಶನಿಗೆ ಮೋದಕವನ್ನು ಅರ್ಪಿಸಿ:

ಗಣೇಶನಿಗೆ ದುರ್ವಾ, ಶಮಿ ಎಲೆಗಳು ಮಾತ್ರವಲ್ಲ, ಮೋದಕವೆಂದರೂ ಅಚ್ಚುಮೆಚ್ಚು. ಗಣೇಶನ ಪೂಜೆಯಲ್ಲಿ ಯಾವುದೇ ವಸ್ತು ಮರೆತರೂ ಮೋದಕ ಅರ್ಪಿಸುವುದನ್ನು ಮರೆಯುವುದಿಲ್ಲ. ಮೋದಕವಿಲ್ಲದೆ ಮಾಡಿದ ಗಣಪತಿ ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ಗಣಪತಿಯನ್ನು ಪೂಜಿಸುವಾಗ ಅಥವಾ ಯಾವುದೇ ಸಮಸ್ಯೆಯ ನಿವಾರಣೆಗೆ ಗಣೇಶನನ್ನು ಪೂಜಿಸುತ್ತಿರುವಾಗ ತಪ್ಪದೇ ಮೋದಕವನ್ನು ಅರ್ಪಿಸಬೇಕು. ಮೋದಕವು ಗಣೇಶನನ್ನು ಮೆಚ್ಚಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದು ಗಣೇಶನ ಆಶೀರ್ವಾದವನ್ನು ಪಡೆಯಲು ಅತ್ಯಂತ ಸರಳ ಮಾರ್ಗವಾಗಿದೆ.

ಕೆಂಪು ಸಿಂಧೂರವನ್ನು ಅರ್ಪಿಸಿ:

ಒಂದು ವೇಳೆ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದರಿಂದ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಜೀವನದಲ್ಲಿ ಸಂಪತ್ತು, ಸಮೃದ್ಧಿಯನ್ನು ಪಡೆದುಕೊಳ್ಳಲು ಬುಧವಾರದಂದು ನೀವು ಗಣೇಶನಿಗೆ ಕೆಂಪು ಬಣ್ಣದ ಸಿಂಧೂರವನ್ನು ಅರ್ಪಿಸಬೇಕು. ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ಸಿಂಧೂರವು ಒಂದೆಂದು ಹೇಳಲಾಗುತ್ತದೆ. ಗಣೇಶನಿಗೆ ಕೆಂಪು ಸಿಂಧೂರವನ್ನು ಅರ್ಪಿಸುವುದರಿಂದ ಗಣೇಶನ ಕೃಪೆ ಸದಾಕಾಲ ನಿಮ್ಮ ಮೇಲಿರುತ್ತದೆ.

ಗಣೇಶನ ಈ ಮಂತ್ರವನ್ನು ಪಠಿಸಿ:
ಗಣೇಶನು ಭಕ್ತರ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವುದರಿಂದ ಆತನನ್ನು ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಅಥವಾ ತೊಂದರೆಗಳನ್ನು ತೊಡೆದುಹಾಕಲು ನೀವು ಬಯಸಿದರೆ ಗಣೇಶನ ಈ ಮಂತ್ರವನ್ನು ಪಠಿಸಬೇಕು. ‘ಓಂ ಗಂ ಗಣಪತಯೇ ನಮಃ’ ಎನ್ನುವ ಗಣೇಶ ಮಂತ್ರವನ್ನು ಒಂದು ಜಪಮಾಲೆ ಪೂರ್ಣಗೊಳ್ಳುವವರೆಗೆ ಪಠಿಸಬೇಕು. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಅಥವಾ ಅಡೆತಡೆಗಳು ಬಂದಾಗ ತಕ್ಷಣ ಗಣೇಶನ ಈ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿರುತ್ತದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×