Virat Kohli – ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಜ್ಜೆ
Read this-Menstrual Leave: New Karnataka Govt Order ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ
ಭಾರತ 146 ಕೋಟಿ ಜನಸಂಖ್ಯೆ ಹೊಂದಿದ್ದು, ನಮ್ಮ ದೇಶದಲ್ಲಿ ಕ್ರಿಕೆಟ್ ಆಟಗಾರರನ್ನು ಪೂಜೆ ಮಾಡುವ ಮಟ್ಟಕ್ಕೆ ಜನಪ್ರಿಯತೆ ಇದೆ. ಅದರಲ್ಲೂ ವಿರಾಟ್ ಕೊಹ್ಲಿ ಬರೋದಕ್ಕಿಂತ ಮೊದಲು ಒಂದು ಲೆಕ್ಕ, ವಿರಾಟ್ ಕೊಹ್ಲಿ ಬಂದ ನಂತರ ಮತ್ತೊಂದು ಲೆಕ್ಕ ಎನ್ನುವಂತೆ ಆಗಿದೆ. ಸಾಲು ಸಾಲು ಕ್ರಿಕೆಟ್ ಶತಕ ಬಾರಿಸುತ್ತಾ ವಿರಾಟ್ ಕೊಹ್ಲಿ ತಮ್ಮ ವಿರೋಧಿಗಳಿಗೆ ಖಡಕ್ ಉತ್ತರ ಕೊಡ್ತಾ ಇದ್ದಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಹೊಸ ದೇವರು, ಕ್ರಿಕೆಟ್ ಲೋಕದ ಸಚಿನ್ ತೆಂಡುಲ್ಕರ್ ಸ್ಥಾನ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಎರಡನೇ ಏಕದಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ, ಕೊಹ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರವು ಈಗ ಕ್ರಿಕೆಟ್ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಡಿಸೆಂಬರ್ 24, 2025 ರಿಂದ ಪ್ರಾರಂಭವಾಗುವ ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ವಾಸ್ತವವಾಗಿ, 16 ವರ್ಷಗಳ ನಂತರ ಕೊಹ್ಲಿ ಈ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಈ ಹಿಂದೆ ವರದಿಗಳಿದ್ದವು.
Support Us 


