ಚಾಮುಂಡಿ ದೇವಿ ಚಾಮುಂಡಿ
ಚಾಮುಂಡಿ ದೇವಿ ಚಾಮುಂಡಿ||2||
ವರವ ಕೊಡೆ ಚಾಮುಂಡಿ ವರವ ಕೊಡೆ||2||
ಸೆರಗೊಡ್ಡಿ ಬೇಡುವೆನೂ ವರವ ಕೊಡೆ
ವರವ ಕೊಡೆ
ಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ
||ವರವ||
ಕುಂಕುಮವು ಅರಸಿನವು
ಹೊಳೆವಂತ ಕರಿಮಣಿಯು||ಕುಂಕುಮ||
ಸ್ಥಿರವಾಗಿ ಇರುವಂತೆ ವರವ ತೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ
||ವರವ||
ಬಾಗಿಲಲಿ ತೋರಣ
ಮದುವೆ ಮುಂಜಿ ನಾಮಕರಣ||ಬಾಗಿಲಲಿ||
ಯಾವಾಗಲು ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ
||ವರವ||
ಹೆಸರುಳ್ಳ ಮನೆ ಕಟ್ಟಿ
ಹಸು ಕರುಗಳ ಸಾಲು ಕಟ್ಟಿ||ಹೆಸರು||
ವಂಶವ್ರಧ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ
||ವರವ||
ಮನೆಯಲ್ಲಿ ಹರುಷ ಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು||ಮನೆಯ||
ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ
||ವರವ||
Read more here
Pumpkin soup Recipe in Kannada
Ekadantaya Vakratundaya Gauri Tanayaya Dheemahi lyrics ಏಕದಂತಾಯ ವಕ್ರತುಂಡಾಯ
Joke Nanu Balliya Minchu- kannada KGF- 1 ಚಿತ್ರದ ಜೋಕೆ& ನಾನು