God Songs Lyrics – Here the devotee is praying Goddess Chamundi to grant her (all) wishes in very simple words.. whatever she needs and her desires too. She is begging God for her husband’s long life, a house, a baby and above all for peace and happiness in her home..
ಇದೊಂದು ಸುಮಧುರವಾದ ತುಂಬಾ ಹಳೆಯ ಭಕ್ತಿ ಗೀತೆಯನ್ನು ಶ್ರೀಮತಿ ಬಿ ಕೆ ಸುಮಿತ್ರ ರವರು ಹಾಡಿದ್ದಾರೆ..
ವರವ ಕೊಡೆ ಚಾಮುಂಡಿ ವರವ ಕೊಡೆ
ವರವ ಕೊಡೆ ಚಾಮುಂಡಿ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
||ವರವ ಕೊಡೆ||
ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ನಿನ್ನಾಣೆ ನಾ ನಿನ್ನ ಪಾದ ಬಿಡೇ.. ನಿನ್ನ ಪಾದ ಬಿಡೇ..
||ವರವ ಕೊಡೆ||
ಕುಂಕುಮವು ಅರಿಸಿನವು ಹೊಳೆವಂಥ ಕರಿಮಣಿಯು
ಸ್ಥಿರವಾಗಿ ಇರುವಂತೆ ವರವ ಕೊಡೆ.. ಸೆರಗೊಡ್ಡಿ ಬೇಡುವೆನು ವರವ ಕೊಡೆ..
|| ವರವ ಕೊಡೆ||
ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ
ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ
ಯಾವಾಗಲೂ ಆಗುವಂತೆ ವರವ ಕೊಡೆ…
ನಿನ್ನಾಣೆ ನಾ ನಿನ್ನ ಪಾದ ಬಿಡೇ ನಿನ್ನ ಪಾದ ಬಿಡೇ
||ವರವ ಕೊಡೆ||
ಹೆಸರುಳ್ಳ ಮನೆಕಟ್ಟಿ ಹಸು ಕರುವ ಸಾಲುಕಟ್ಟಿ
ಹೆಸರುಳ್ಳ ಮನೆಕಟ್ಟಿ ಹಸು ಕರುವ ಸಾಲುಕಟ್ಟಿ
ವಂಶ ವೃದ್ಧಿ ಆಗುವಂತೆ ವರವ ಕೊಡೆ.. ಸೆರಗೊಡ್ಡಿ ಬೇಡುವೆನು ವರವ ಕೊಡೆ..
|| ವರವ ಕೊಡೆ||
ಮನೆಯಲ್ಲಿ ಹರುಷಕೊಟ್ಟು ಮನದಲ್ಲಿ ಶಾಂತಿಕೊಟ್ಟು
ಮನೆಯಲ್ಲಿ ಹರುಷಕೊಟ್ಟು ಮನದಲ್ಲಿ ಶಾಂತಿಕೊಟ್ಟು
ಭಕ್ತಿ ಹೃದಯ ತುಂಬುವಂತೆ ವರವ ಕೊಡೆ.. ನಿನ್ನಾಣೆ ನಾನಿನ್ನ ಪಾದ ಬಿಡೇ ನಿನ್ನ ಪಾದ ಬಿಡೇ
||ವರವ ಕೊಡೆ||
Read More Songs Here
> Januma Needuthale Namma Thayi song lyrics in Kannada – ಜನುಮ ನೀಡುತಾಳೆ
> Yare Akka bengaluru Kayolu Lyrics; Nvashakthi Vaibhava; ಯಾರೇ ಅಕ್ಕ ಬೆಂಗಳೂರ್ ಕಾಯೋಳು; Annamma Songs
> Story Of SM Krishna; Life Journey of Village to White House