HomeNewsTravelVaranasi-ವಾರಣಾಸಿಯಲ್ಲಿ ಈ 5 ಸ್ಥಳಗಳಿಗೆ ಭೇಟಿ ನೀಡಿ - Travel Folks

Varanasi-ವಾರಣಾಸಿಯಲ್ಲಿ ಈ 5 ಸ್ಥಳಗಳಿಗೆ ಭೇಟಿ ನೀಡಿ – Travel Folks

Varanasi-ವಾರಣಾಸಿಯಲ್ಲಿ ಈ 5 ಸ್ಥಳಗಳಿಗೆ ಭೇಟಿ ನೀಡಿ - Travel Folks

Varanasi-ವಾರಣಾಸಿಯಲ್ಲಿ ಈ 5 ಸ್ಥಳಗಳಿಗೆ ಭೇಟಿ ನೀಡಿ – Travel Folksವಾರಣಾಸಿಗೆ ಹೋದ್ರೆ ಈ 5 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

ಹಿಂದೂಗಳ ಅತ್ಯಂತ ಪವಿತ್ರ ಸ್ಥಳಗಳಲ್ಲಿ ವಾರಣಾಸಿಯು ಒಂದು. ಇಲ್ಲಿ ಮಹಾಶಿವನು ನೆಲೆಸಿದ್ದಾನೆ. ವರ್ಷದ ಯಾವುದೇ ಸಮಯದಲ್ಲಿಯು ಜನರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಬಹುದು. ದೇಶದ ನಾನಾ ಭಾಗಗಳಿಂದಲೇ ಅಲ್ಲದೆ, ವಿದೇಶಗಳಿಂದ ಕೂಡ ಶಿವನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದು ವಿಶ್ವದ ಅತ್ಯಂತ ಹಳೆಯ ಹಾಗು ಜೀವಂತ ನಗರಗಳಲ್ಲಿ ಒಂದಾಗಿದೆ. ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಸಂದರ್ಶಿಸಬೇಕಾದ ಪವಿತ್ರವಾದ ಸ್ಥಳ ಎಂದು ಪರಿಗಣಿಸಿದ್ದಾರೆ. ಇನ್ನು, ನೀವು ವಾರಣಾಸಿಗೆ ಚಳಿಗಾಲದ ತಿಂಗಳಿನಲ್ಲಿ ಪ್ರವಾಸ ಮಾಡುವುದು ಉತ್ತಮ ಎಂದು ನಾವು ಶಿಫಾರಸು ಮಾಡುತ್ತೇವೆ. ಹಾಗಾದರೆ ಯಾವ 5 ಸ್ಥಳಗಳನ್ನು ತಪ್ಪದೇ ಭೇಟಿ ನೀಡಬೇಕು ಗೊತ್ತಾ?

ದಶಾಶ್ವಮೇಧ ಘಾಟ್‌ದಶಾಶ್ವಮೇಧ ಘಾಟ್‌ಗೆ ಹೋಗಿ

Read this-Travel to Srinagar Dal Lake  ಶ್ರೀನಗರದ ದಾಲ್ ಸರೋವರ

ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಗಂಗಾ ಆರತಿಯು ವಾರಣಾಸಿಯ ಅತ್ಯಂತ ಪ್ರಸಿದ್ಧ ಪದ್ಧತಿಗಳಲ್ಲಿ ಒಂದಾಗಿದೆ. ಗಂಗಾ ಆರತಿ ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಂಜೆಯ ಸಮಯದಲ್ಲಿ ಸಾಕಷ್ಟು ಜನರು ಭಾಗಿಯಾಗುತ್ತಾರೆ. ಗಂಟೆಗಳ ನಿನಾದ, ಸಂಸ್ಕೃತ ಪಠಣಗಳು ಭಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಚಳಿಗಾಲವಾಗಲೀ, ಬೇಸಿಗೆ ಕಾಲವಾಗಲೀ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ರೋಮಾಂಚಕ ಕ್ಷಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾಶಿ ವಿಶ್ವನಾಥ ದೇವಾಲಯ

ಕಾಶಿ ವಿಶ್ವನಾಥ ದೇವಾಲಯವನ್ನು ಸಂದರ್ಶಿಸಿ

Read this-Travel to Uttarakhand Valley of flowersಉತ್ತರಾಖಂಡದ ಹೂಗಳ ಕಣಿವೆ

ಕಾಶಿ ವಿಶ್ವನಾಥ ದೇವಾಲಯವು ವಾರಣಾಸಿಯ ಪ್ರಮುಖ ಸ್ಥಳ. ವಿಶೇಷವಾಗಿ ಈ ದೇವಾಲಯ ಸಂದರ್ಶಿಸಲು ದೇಶ-ವಿದೇಶಗಳಿಂದ ಭಕ್ತರು, ಯಾತ್ರಿಕರು ವಾರಣಾಸಿಗೆ ಬರುತ್ತಾರೆ. ಶಿವನಿಗೆ ಸಮರ್ಪಿತವಾಗಿರುವ ಈ ಕಾಶಿ ವಿಶ್ವನಾಥ ದೇವಾಲಯಕ್ಕೆ ತಂಪಾದ ಅಂದರೆ ಚಳಿಗಾಲದ ತಿಂಗಳುಗಳಲ್ಲಿ ಭೇಟಿ ನೀಡಲು ಉತ್ತಮ ಸಮಯ ಎಂದು ನಾವು ಸಲಹೆ ನೀಡುತ್ತೇವೆ. ತಂಪಾದ ಹವಾಮಾನವು ಸ್ಥಳದ ಸುತ್ತಮುತ್ತಲಿನ ಪ್ರದೇಶಗಳ ಸೌಂದರ್ಯ ಮತ್ತಷ್ಟು ಉಲ್ಲಾಸಕರವಾಗಿಸುತ್ತದೆ.

ಗಂಗಾನದಿಯಲ್ಲಿ ದೋಣಿ ವಿಹಾರ ಯಾವಾಗ ಮಾಡಬೇಕು?

ಗಂಗಾನದಿಯಲ್ಲಿ ದೋಣಿ ವಿಹಾರ ಯಾವಾಗ ಮಾಡಬೇಕು?

Read this-Travel to Ladakh  Nubra Vally ಲಡಾಖ್‌ನಲ್ಲಿರುವ ನುಬ್ರಾ ಕಣಿವೆ

ವಾರಣಾಸಿಯಲ್ಲಿ ನೀವು ಗಂಗಾನದಿಯಲ್ಲಿ ದೋಣಿ ವಿಹಾರ ಮಾಡಲು ಬಯಸಿದರೆ ತಪ್ಪದೇ ಮುಂಜಾನೆಯ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಹೌದು, ವಿಶೇಷವಾಗಿ ಚಳಿಗಾಲದ ಆರಂಭದ ಸಮಯದಲ್ಲಿ ಗಂಗಾನದಿಯಲ್ಲಿ ದೋಣಿ ವಿಹಾರ ಮಾಡಲೇಬೇಕು. ಏಕೆಂದರೆ ನದಿಯ ಮೇಲಿನ ಮಂಜು ಮತ್ತು ಉದಯಿಸುವ ಸೂರ್ಯನ ಹೊಳಪು ಅತೀಂದ್ರಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಸ್ಥಳೀಯರು ತಮ್ಮ ಬೆಳಗಿನ ಆಚರಣೆಗಳನ್ನು ಮತ್ತು ಯಾತ್ರಿಕರು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದನ್ನು ನೀವು ನೋಡುತ್ತೀರಿ.

ಕಿರಿದಾದ ಗಲ್ಲಿಗಳು ಮತ್ತು ಮಾರುಕಟ್ಟೆ

ವಾರಣಾಸಿಯು ಅತ್ಯಂತ ಕಿರಿದಾದ ಗಲ್ಲಿಗಳು ಹಾಗು ಆಕರ್ಷಕವಾದ ಮಾರುಕಟ್ಟೆಗಳನ್ನು ಹೊಂದಿದೆ. ನೀವು ಇಲ್ಲಿ ಸುತ್ತಾಡಲು ಬಯಸಿದರೆ ಚಳಿಗಾಲ ಉತ್ತಮವಾದ ಋತುಮಾನವಾಗಿದೆ. ಗಲಭೆಯಿಂದ ಕೂಡಿರುವ ಮಾರುಕಟ್ಟೆಯಲ್ಲಿ ನಿಮ್ಮ ಚೌಕಾಶಿ ಕೌಶಲ್ಯಗಳನ್ನು ಪ್ರದರ್ಶಿಸಬಹುದು. ಇಲ್ಲಿ ಸೊಗಸಾದ ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ಬನಾರಸಿ ರೇಷ್ಮೆ ದೊರೆಯುತ್ತದೆ. ಚುಮು ಚುಮು ಚಳಿಗೆ ಒಂದು ಕಪ್‌ ಮಸಾಲೆ ಚಹಾ ತಪ್ಪದೇ ಸೇವಿಸಿ.

ಸಾರನಾಥ

ಸಾರನಾಥ ವಾರಣಾಸಿ ಇತಿಹಾಸ, ಬೌದ್ಧಧರ್ಮ, ಮತ್ತು ಸಾಂಸ್ಕೃತಿಕ ಮಹತ್ವ

Read this-Dalhousie; ಡಾಲ್ಹೌಸಿ ಭಾರತದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ವಾರಣಾಸಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಸಾರನಾಥವು ಒಂದು ಪ್ರಮುಖ ಬೌದ್ಧ ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಭಗವಾನ್ ಬುದ್ಧನು ಜ್ಞಾನೋದಯ ಪಡೆದ ನಂತರ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದರು ಎನ್ನಲಾಗುತ್ತದೆ. ಚಳಿಗಾಲದಲ್ಲಿ, ಅವಶೇಷಗಳು, ಧಮೇಕ್ ಸ್ತೂಪ ಮತ್ತು ಸಾರನಾಥ ಪುರಾತತ್ವ ವಸ್ತುಸಂಗ್ರಹಾಲಯವನ್ನು ಅನ್ವೇಷಿಸಲು ಹವಾಮಾನವು ಪರಿಪೂರ್ಣವಾಗಿರುತ್ತದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×