HomeNewsUBS vs Dhurandhar 2-ಪವನ್ ಚಿತ್ರಕ್ಕೆ ‘ಧುರಂಧರ್ 2’ ಸವಾಲ್ |Kannada Folks

UBS vs Dhurandhar 2-ಪವನ್ ಚಿತ್ರಕ್ಕೆ ‘ಧುರಂಧರ್ 2’ ಸವಾಲ್ |Kannada Folks

Big Box Office Clash in Telugu States

UBS vs Dhurandhar 2-ಪವನ್ ಚಿತ್ರಕ್ಕೆ ‘ಧುರಂಧರ್ 2’ ಸವಾಲ್

ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ‘ಧುರಂಧರ್ 2’ ದೊಡ್ಡ ಸವಾಲೊಡ್ಡಿದೆ. ಬಹುಭಾಷಾ ಚಿತ್ರ ‘ಧುರಂಧರ್ 2’ಗೆ ಮೊದಲ ಭಾಗದ ಯಶಸ್ಸು ಮತ್ತು ಉತ್ತಮ ಅಡ್ವಾನ್ಸ್ ಬುಕಿಂಗ್ ಬಲವಾಗಿದೆ. ರಿಮೇಕ್ ಆದ ‘ಉಸ್ತಾದ್ ಭಗತ್ ಸಿಂಗ್’ಗೆ ಪ್ರಚಾರದ ಕೊರತೆ ಮತ್ತು ಹಿಂದಿನ ಚಿತ್ರಗಳ ವೈಫಲ್ಯ ಹಿನ್ನಡೆ ತಂದಿದೆ.ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ 'ಧುರಂಧರ್ 2' - Kannada  News | Pawan Kalyan's Ustaad Bhagat Singh Faces Dhurandhar 2 Challenge in  Telugu Box Office | TV9 Kannada

Read this : Love Mocktail 3 Trailer Out-ಲವ್ ಮಾಕ್ಟೆಲ್ 3 ಟ್ರೈಲರ್ ರಿಲೀಸ್ |Kannada Folks

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಟಾಕ್ ಜೋರಾಗಿತ್ತು. ಆದರೆ, ಯಶ್ ಅವರು ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿಕೊಳ್ಳುವ ಮೂಲಕ ಕ್ಲ್ಯಾಶ್ ತಪ್ಪಿಸಿದರು. ಹೀಗಾಗಿ, ‘ಧುರಂಧರ್ 2’ ಸೋಲೋ ರಿಲೀಸ್ ಕಾಣಲಿದೆ ಎನ್ನುವಾಗಲೇ ಪವನ್ ಕಲ್ಯಾಣ್ ಅವರ ‘ಉಸ್ತಾದ ಭಗತ್ ಸಿಂಗ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ತೆಲುಗು ಭಾಗದಲ್ಲೇ ‘ಧುರಂಧರ್ 2’ ಸಿನಿಮಾ ಹೊಡೆತ ಕೊಡೋ ಸಾಧ್ಯತೆ ಇದೆ ಎಂದು ವರದಿ ಆಗಿದೆ.

‘ಧುರಂಧರ್ 2’ ಚಿತ್ರದ ದೊಡ್ಡ ಬಲ ಎಂದರೆ, ‘ಧುರಂಧರ್’ ಚಿತ್ರಕ್ಕೆ ಸಿಕ್ಕ ಪ್​ರತಿಕ್ರಿಯೆ ಮೊದಲ ಭಾಗ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಸೀಕ್ವೆಲ್ ಹಿಂದಿ ಜೊತೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್​​’ ಚಿತ್ರಕ್ಕೆ ಸಾಕಷ್ಟು ಹೊಡೆತ ಕೊಡೋ ಸಾಧ್ಯತೆ ಇದೆ. ಈ ಸಿನಿಮಾ ರಿಮೇಕ್. ಅಲ್ಲದೆ, ಹೆಚ್ಚು ಹೈಪ್ ಇಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.

‘ಧುರಂಧರ್ 2’ ತೆಲುಗು ರಾಜ್ಯಗಳ ಅಡ್ವಾನ್ಸ್ ಬುಕಿಂಗ್​​ನಲ್ಲಿ ಮುಂದಿದೆ. ಸದ್ಯ ಪೇಯ್ಡ್ ಶೋಗಳನ್ನು ಮಾರ್ಚ್ 18ಕ್ಕೆ ಹಲವು ಶೋಗಳನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಬಹುತೇಕವು ಫಿಲ್ಲಿಂಗ್ ಫಾಸ್ಟ್ ಹಂತದಲ್ಲಿ ಇದೆ. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಆ ರೀತಿ ಅಲ್ಲ. ಇದು ತಮಳಿನ ದಳಪತಿ ವಿಜಯ್ ಅವರ ‘ತೇರಿ’ ಚಿತ್ರದ ರಿಮೇಕ್.

‘ಉಸ್ತಾದ್ ಭಗತ್ ಸಿಂಗ್’ ರಿಮೇಕ್ ಮತ್ತು ಈ ಸಿನಿಮಾ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಈ ಕಾರಣದಿಂದ ಚಿತ್ರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ, ಈ ಮೊದಲು ರಿಲೀಸ್ ಆದ ಪವನ್ ಕಲ್ಯಾಣ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ವಿಫಲವಾಗಿವೆ. ಈ ಕಾರಣದಿಂದಲೂ ಚಿತ್ರಕ್ಕೆ ಹೆಚ್ಚಿನ ಹೈಪ್ ಸಿಗುತ್ತಿಲ್ಲ. ಆದರೆ, ‘ಧುರಂಧರ್ 2’ ಹಾಗಲ್ಲ. ದಕ್ಷಿಣದಲ್ಲೂ ಈ ಸಿನಿಮಾ ಪಾರುಪತ್ಯ ಸಾಧಿಸಿದೆ. ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರಕ್ಕೆ, ರಣವೀರ್ ಸಿಂಗ್ ನಾಯಕ. ಆದಿತ್ಯ ಧಾರ್ ಅವರ ನಿರ್ದೇಶನ ಚಿತ್ರಕ್ಕೆ ಇದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments