Welcome to Kannada Folks   Click to listen highlighted text! Welcome to Kannada Folks
HomeNewsTrump gave gatepass to more than 13,500 employees leaving 294 people

Trump gave gatepass to more than 13,500 employees leaving 294 people

Trump gave gatepass to more than 13,500 employees leaving 294 people

Spread the love

Trump gave gatepass to more than 13,500 employees leaving 294 people

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 13,500ಕ್ಕೂ ಹೆಚ್ಚು ಮಂದಿಯನ್ನು ಮನೆಗೆ ಕಳುಹಿಸಿದ್ದಾರೆ.USAID ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವಾದ್ಯಂತ ಸುಮಾರು 14 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 294 ಮಂದಿಯನ್ನು ಮಾತ್ರ ಉಳಿಸಿದ್ದು ಉಳಿದ ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಲಾಗಿದೆ.Trump administration to keep only 294 USAID staff out of over 10,000  globally, sources say | The National

Read this – M kharges outburst in rajya sabha as bjp mp interrupts him

ವಿಶ್ವದ ಶ್ರೀಮಂತ ವ್ಯಕ್ತಿ,   ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ  ಮುಖ್ಯಸ್ಥ ಎಲೋನ್‌ ಮಸ್ಕ್  ಸಲಹೆಯ ಬೆನ್ನಲ್ಲೇ ಟ್ರಂಪ್‌ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.ವಿಶ್ವಾದ್ಯಂತ ಅನೇಕ ಉದ್ಯೋಗಿಗಳನ್ನು ಈಗಾಗಲೇ ಆಡಳಿತಾತ್ಮಕ ರಜೆಯ ಮೇಲೆ ಕಳುಹಿಸಲಾಗಿದೆ. ಶುಕ್ರವಾರದ ವೇಳೆ ಮಿಷನ್-ನಿರ್ಣಾಯಕ ಕಾರ್ಯಗಳಿಗೆ ಜವಾಬ್ದಾರರಾಗಿರುವ ಸಿಬ್ಬಂದಿ ಮಾತ್ರ ಉಳಿಯುತ್ತಾರೆ ಎಂದು ವರದಿಯಾಗಿದೆ.

USAID ಹಲವರು ದೇಶಗಳಿಗೆ ಹಣಕಾಸಿನ ಸಹಾಯ ನೀಡುತ್ತಿದೆ. ಬಡತನ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಈ ಹಣವನ್ನು ಬಳಕೆ ಮಾಡಲು ಅಮೆರಿಕ ಸರ್ಕಾರ ಹಲವು ದೇಶಗಳಿಗೆ ಈ ಅನುದಾನ ನೀಡುತ್ತಾ ಬಂದಿದೆ.ಅನುದಾನ ಹಂಚಿಕೆಯಲ್ಲಿ ಕೇವಲ 10% ಮಾತ್ರ ನಿಜವಾದ ಫಲಾನುಭವಿಗಳಿಗೆ ಸಹಾಯವಾಗುತ್ತದೆ. ಉಳಿದ ಹಣಗಳು ಸರ್ಕಾರೇತರ ಸಂಸ್ಥೆ, ಎಡಪಂಥೀಯ ಮಾಧ್ಯಮಗಳಿಗೆ ಬಳಕೆಯಾಗುತ್ತದೆ ಎಂದು ಮಸ್ಕ್‌ ದೂರಿದ್ದಾರೆ.Donald Trump signs order to sack thousands of federal employees. Who are  safe, who can be fired? - The Economic Times

Read this – Sarigama VG cremated at Chamarajpet crematorium  ಚಿತಾಗಾರದಲ್ಲಿ ನೆರವೇರಿದ ಸರಿಗಮ ವಿಜಿ ಅಂತ್ಯಕ್ರಿಯೆ

ನಮ್ಮ ದೇಶದ ಜನರೇ ಸಂಕಷ್ಟಕ್ಕೆ ಸಿಲುಕಿರುವಾಗ ಬೇರೆ ದೇಶಗಳಿಗೆ ಯಾಕೆ ಅನುದಾನ ನೀಡಬೇಕು. ಅಮೆರಿಕ ಸರ್ಕಾರ ವಿದೇಶಗಳಿಗೆ ನೀಡುತ್ತಿರುವ USAID ಅನ್ನು ಕ್ರಿಮಿನಲ್‌ ಸಂಘಟನೆ ಎಂದು ಮಸ್ಕ್‌ ಕರೆದಿದ್ದಾರೆ. ಈ ಅನುದಾನ ನಿಜವಾಗಿಯೂ ಬಡ ದೇಶಗಳಿಗೆ ತಲುಪುತ್ತಿಲ್ಲ. ಇದು ಅಮೆರಿಕ ಸರ್ಕಾರವನ್ನು ಬೆಂಬಲಿಸುವ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತದೆ. ಈ ಎನ್‌ಜಿಒಗಳು ಆ ಹಣವನ್ನು ಸರ್ಕಾರದ ಡೆಮಾಕ್ರಟಿಕ್ ನಾಯಕರಿಗೆ ಕಳುಹಿಸುತ್ತಾರೆ. ಅಕ್ರಮ ಹಣ ವರ್ಗಾವಣೆ ಮಾಡಲು USAID ಇದನ್ನು ಬಳಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ.

ನಷ್ಟದಲ್ಲಿದ್ದ ಟ್ವಿಟ್ಟರ್‌  ಕಂಪನಿಯನ್ನು ಖರೀದಿಸಿದ ಬಳಿಕ ಮಸ್ಕ್‌ ಮಾಡಿದ ಮೊದಲ ಕೆಲಸ ಏನೆಂದರೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದರು. ಟ್ವಿಟ್ಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಬಳಿಕ 80% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿದ್ದನ್ನು ಮಸ್ಕ್‌ ಸಮರ್ಥಿಸಿಕೊಂಡಿದ್ದರು.Trump administration to keep only 294 USAID staff out of over 10,000  globally, sources say

Read this – Cabinet approves constitution of 8th Pay Commission  8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

ನಾವು ಯಾವುದೇ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಸೆನ್ಸರ್‌ಶಿಪ್‌ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ 80% ರಷ್ಟು ಉದ್ಯೋಗವನ್ನು ಕಡಿತ  ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದ್ದರು.ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು 80% ರಷ್ಟು ಮಂದಿಗೆ ಗೇಟ್‌ಪಾಸ್‌ ನೀಡಲಾಗಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!