HomeNewsTravelTaj Mahal - ತಾಜ್‌ಮಹಲ್‌ ರಹಸ್ಯಗಳು

Taj Mahal – ತಾಜ್‌ಮಹಲ್‌ ರಹಸ್ಯಗಳು

Taj Mahal - ತಾಜ್‌ಮಹಲ್‌ ರಹಸ್ಯಗಳು

Taj Mahal – ತಾಜ್‌ಮಹಲ್‌ ರಹಸ್ಯಗಳು

ತಾಜ್‌ ಮಹಲ್‌ ಎಂದರೆ ಅದನ್ನು ಪ್ರೀತಿಯ ಸಂಕೇತ ಎನ್ನಲಾಗುತ್ತದೆ. ತಾಜ್ ಮಹಲ್ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ್ದಾನೆ. ಪ್ರೀತಿಯ ಸಂಕೇತವಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್‌ಗೆ ಪ್ರೀತಿಯ ಸಂಕೇತವಾಗಿ ಇದನ್ನು ನಿರ್ಮಿಸಿದ್ದಾನೆ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ದೇಶದ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ.

ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುವ ಈ ಐತಿಹಾಸಿಕ ಅದ್ಭುತ ಇದಾಗಿದೆ. ಪ್ರಸ್ತುತ ತಾಜ್ ಮಹಲ್ ಬಗ್ಗೆ ತುಂಬಾ ಚರ್ಚೆಗಳಾಗುತ್ತಿವೆ. ಪ್ರೀತಿ ಮತ್ತು ಪ್ರಣಯದ ಸಾಕಾರವಾದ ತಾಜ್ ಮಹಲ್ ದೆಹಲಿಯ ದಕ್ಷಿಣಕ್ಕೆ ಸುಮಾರು 204 ಕಿ.ಮೀ ದೂರದಲ್ಲಿರುವ ಆಗ್ರಾ ನಗರದಲ್ಲಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈ ಸ್ಮಾರಕವು ವರ್ಷಪೂರ್ತಿ ವಿಶ್ವದಾದ್ಯಂತದ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಲೇಖನದಲ್ಲಿ ನಾವು ತಾಜಮಹಲ್‌ ಬಗ್ಗೆ ಕೆಲವು ಇಂಟ್ರಸ್ಟಿಂಗ್ ಸಂಗತಿಗಳನ್ನು ತಿಳಿಸಿಕೊಡಲಾಗಿದೆ.

ಮುಮ್ತಾಜ್ ಮೂಲ ಹೆಸರು
ಮುಮ್ತಾಜ್, ಷಹಜಹಾನ್‌ನ ಮೂರನೇ ಹೆಂಡತಿ, ಇವಳನ್ನು ಮೊದಲು ಅರ್ಜುಮಂಡ್ ಬಾನೊ ಬೇಗಮ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮುಮ್ತಾಜ್ 14 ನೇ ಮಗುವಿಗೆ ಜನ್ಮ ನೀಡುವ ಮೂಲಕ ಪ್ರಾಣ ಕಳೆದುಕೊಂಡರು.

ತಾಜ್‌ಮಹಲ್‌ ನಿರ್ಮಾಣಕ್ಕೆ 1000 ಆನೆ ಬಳಕೆ
ತಾಜ್ ಮಹಲ್ ನಿರ್ಮಿಸುವಾಗ ಸುಮಾರು 1000 ಆನೆಗಳನ್ನು ಬಳಸಲಾಗಿತ್ತು. ಆನೆಗಳನ್ನು ತಾಜ್‌ಮಹಲ್‌ ನಿರ್ಮಾಣದ ಸಾಮಗ್ರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲು ಬಳಸಲಾಗುತ್ತಿತ್ತು. ಮುಮ್ತಾಜ್ ಅವರ ಸಮಾಧಿಯಲ್ಲಿ ಸುಮಾರು 99 ವಿಭಿನ್ನ ಅಲ್ಲಾಹನ ಹೆಸರುಗಳನ್ನು ಕ್ಯಾಲಿಗ್ರಫಿ ಶಾಸನಗಳಲ್ಲಿ ಬರೆಯಲಾಗಿದೆ.

28 ಬಗೆಯ ಕಲ್ಲುಗಳಿಂದ ತಾಜ್‌ಮಹಲ್‌ ನಿರ್ಮಾಣ
ತಾಜ್ ಮಹಲ್ ನಿರ್ಮಾಣಕ್ಕೆ 28 ಬಗೆಯ ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳನ್ನ ಬಳಸಿ ನಿರ್ಮಿಸಲಾಗಿದೆ. ತಾಜ್ ಮಹಲ್ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ವಿವಿಧ ಪ್ರದೇಶಗಳು ಮತ್ತು ದೇಶಗಳಿಂದ ತರಲಾಗಿತ್ತು. ಪಂಜಾಬ್, ರಾಜಸ್ಥಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಚೀನಾ, ಟಿಬೆಟ್ ಮತ್ತು ಅರೇಬಿಯಾ ದೇಶದಿಂದ ಕಲ್ಲುಗಳು ಮತ್ತು ವಸ್ತುಗಳನ್ನು ತರಲಾಗಿತ್ತು.

ತಾಜ್‌ ನಿರ್ಮಾಣಕ್ಕೆ 22 ವರ್ಷ, 20000 ಕಾರ್ಮಿಕರು ಕೆಲಸ
ತಾಜ್‌ಮಹಲ್‌ನ್ನು ನಿರ್ಮಾಣ ಮಾಡಲು ಸುಮಾರು 20,000 ಕಾರ್ಮಿಕರು ಹಗಲು ರಾತ್ರಿ ಎನ್ನದೇ ಸುಮಾರು 22 ವರ್ಷಗಳ ಕಾಲ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×