Small Cap Multibagger Stock – 1 ವರ್ಷದಲ್ಲಿ 450% ಏರಿಕೆ; ಸ್ಮಾಲ್ ಕ್ಯಾಪ್ ಅಪ್ಪರ್ ಸರ್ಕ್ಯೂಟ್
Read this-Congress Using Dalit Vote Bank ದಲಿತ ಮತ ಬ್ಯಾಂಕ್ ಬಳಕೆಯಲ್ಲಿ ಕಾಂಗ್ರೆಸ್:ಎನ್. ಮಹೇಶ್
ಭಾರತದ ಷೇರು ಮಾರುಕಟ್ಟೆ ಗುರುವಾರ ಬಹುತೇಕ ಫ್ಲ್ಯಾಟ್ ಆಗಿ ವಹಿವಾಟು ನಡೆಸಿದ್ದು, ಅನೇಕ ವಲಯವು ರೆಡ್ ಮಾರ್ಕ್‌ನಲ್ಲಿದೆ. ಹೀಗಿರುವಾಗ ಮಲ್ಟಿಬ್ಯಾಗರ್ ಸ್ಮಾಲ್ ಕ್ಯಾಪ್ ಸ್ಟಾಕ್ ಆಗಿರುವ ಸ್ಪೈಸ್ ಲಾಂಜ್ ಫುಡ್ ವರ್ಕ್ಸ್ ಷೇರು ಬೆಲೆ ಇಂಟ್ರಾಡೇ ವಹಿವಾಟಿನಲ್ಲಿ ಅಪ್ಪರ್ ಸರ್ಕ್ಯೂಟ್ ತಲುಪಿದೆ. ಕಂಪನಿಯು ಡಿಸೆಂಬರ್ 4ರಂದು ವಿಂಗ್‌ಜೋನ್‌ನಲ್ಲಿ ತನ್ನ ಫ್ರಾಂಚೈಸಿ ಹಕ್ಕನ್ನು ಪಡೆದಿರುವುದಾಗಿ ಘೋಷಿಸಿದ ಬಳಿಕ ಈ ಸ್ಮಾಲ್‌ಕ್ಯಾಪ್ ಮಲ್ಟಿಬ್ಯಾಗರ್ ಬಂಪರ್ ಜಿಗಿತ ಸಾಧಿಸಿದೆ.
ಒಂದು ವರ್ಷದಲ್ಲಿ 450% ಕ್ಕಿಂತ ಹೆಚ್ಚು ಜಿಗಿದಿರುವ ಸ್ಟಾಕ್
ಈ ಸ್ಮಾಲ್ ಕ್ಯಾಪ್ ಸ್ಟಾಕ್ ಗುರುವಾರ 52.47 ರೂಪಾಯಿಗೆ ತೆರೆದುಕೊಂಡಿದ್ದು, ಬುಧವಾರದ ಮುಕ್ತಾಯದ ಬೆಲೆ 50.7 ರೂಪಾಯಿಗೆ ವಿರುದ್ಧವಾಗಿ ಬಂಪರ್ ಏರಿಕೆಯಾಗಿದೆ. ದಿನದ ವಹಿವಟಿನಲ್ಲಿ ಇಂಟ್ರಾಡೇ ಗರಿಷ್ಠ 4.99% ಅಥವಾ 2.52 ರೂಪಾಯಿ ಏರಿಕೆಗೊಂಡು 52.99 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.
ಸ್ಪೈಸ್ ಲಾಂಜ್ ಫುಡ್ ವರ್ಕ್ಸ್ ಕಳೆದ ಆರು ತಿಂಗಳಿನಲ್ಲಿ ಮಲ್ಟಿಬ್ಯಾಗರ್ ರಿಟರ್ನ್ ನೀಡಿದ್ದು 137.62% ನಷ್ಟು ಜಿಗಿತ ಸಾಧಿಸಿದೆ. ಅದೇ ರೀತಿಯಲ್ಲಿ ಈ ವರ್ಷ ಇಲ್ಲಿಯವರೆಗೆ 454.29% ನಷ್ಟು ಹಾಗೂ ಕಳೆದ 1 ವರ್ಷದಲ್ಲಿ ಈ ಸ್ಟಾಕ್ 896% ನಷ್ಟು ಜಿಗಿತ ಸಾಧಿಸಿದೆ. ಸ್ಪೈಸ್ ಲಾಂಜ್ ಫುಡ್ ವರ್ಕ್ಸ್ 52 ವಾರಗಳ ಗರಿಷ್ಠ ಮಟ್ಟ 72.20 ರೂಪಾಯಿ ಹಾಗೂ 52 ವಾರಗಳ ಕನಿಷ್ಠ ಮಟ್ಟ 34.59 ರೂಪಾಯಿನಷ್ಟಿದೆ.
ಸ್ಪೈಸ್ ಲಾಂಜ್ ಫುಡ್ ವರ್ಕ್ಸ್ ಷೇರು ಬೆಲೆ ಏರಿಕೆಗೆ ಕಾರಣವೇನು?
ಡಿಸೆಂಬರ್ 4 ರಂದು ಸ್ಪೈಸ್ ಲಾಂಜ್ ಫುಡ್ ವರ್ಕ್ಸ್ ಪ್ರಮುಖ ಬಿಜಿನೆಸ್ ಅಪ್‌ಡೇಟ್ ನೀಡಿದೆ. ವಿಂಗ್‌ಜೋನ್‌ನಲ್ಲಿ ಕಂಪನಿಯು ಎಕ್ಸ್‌ಕ್ಲೂಸಿವ್ ಫ್ರಾಂಚೈಸಿ ಹಕ್ಕುಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಬ್ರ್ಯಾಂಡ್ ವಿಂಗ್ ಜೋನ್‌ಗೆ ವಿಶೇಷ ಮಾಸ್ಟರ್ ಫ್ರಾಂಚೈಸಿ ಹಕ್ಕುಗಳನ್ನು ಸ್ವೀಕರಿಸಿರುವುದಾಗಿ ಘೋಷಣೆ ಮಾಡಿದೆ.
ಕಂಪನಿಯು ಭಾರತದಾದ್ಯಂತ ತನ್ನ ಗ್ರಾಹಕರಿಗೆ ಹೈ ಸ್ಟ್ರೀಟ್ ಔಟ್‌ಲೆಟ್‌ಗಳನ್ನು ಮತ್ತು ಕ್ಲೌಡ್ ಕಿಚನ್ ಮೂಲಕ ವಿವಿಧ ಕಾರ್ಯತಂತ್ರದ ಮಿಶ್ರಣದೊಂದಿಗೆ ವಿಂಗ್ ಜೋನ್ ಪರಿಚಯಿಸಲು ಯೋಜನೆ ಮಾಡಿದೆ. ಇದ್ರಿಂದ ಕಂಪನಿಯ ಭವಿಷ್ಯದ ಬೆಳವಣಿಗೆ ಹಾಗೂ ಉತ್ಪಾದನೆ ಬೆಳವಣಿಗೆ ಹೆಚ್ಚಿಸಲು ಅನುವುಮಾಡಿಕೊಡಲಿದೆ.
ಕಂಪನಿಯ ಪತ್ರಿಕಾ ಪ್ರಕಟಣೆ ಪ್ರಕಾರ ಜನವರಿ 2026ರಲ್ಲಿ ಕಂಪನಿಯು ಭಾರತದ ಮೊದಲ ವಿಂಗ್ ಜೋನ್ ಔಟ್‌ಲೇಟ್ ಅನ್ನು ಬೆಂಗಳೂರಿನ ಕೋರಮಂಗಲದಲ್ಲಿ ಪ್ರಾರಂಭಿಸಲಿದೆ.
ಈ ಲಾಂಚ್ ಮೂಲಕ ಸ್ಪೈಸ್ ಲಾಂಜ್ ಫುಡ್ ವರ್ಕ್ಸ್, ತನ್ನ ವಿಂಗ್ ಜೋನ್‌ನ ಅಸ್ತಿತ್ವವ್ನು ಬೆಂಗಳೂರು ಅಷ್ಟೇ ಅಲ್ಲದೆ ಹೈದ್ರಾಬಾದ್, ಚೆನ್ನೆ ಹಾಗೂ ಇತರೆ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಮೂಲಕ ಔಟ್‌ಲೇಟ್‌ಗಳನ್ನು ಪರಿಚಯಿಸಿವು ಮೂಲಕ ಬಹುಸಂಖ್ಯೆಯ ವಿಸ್ತರಣೆಯನ್ನು ಯೋಜನೆ ಮಾಡಿಕೊಂಡಿದೆ.
Support Us 


