Shivarajkumar: ಶಿವಣ್ಣ ಬರ್ತ್ಡೇಗೆ ಸಾಲುಸಾಲು ಸಿನಿಮಾ ಅನೌನ್ಸ್; ಫ್ಯಾನ್ಸ್ಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್
ಶಿವಣ್ಣನ ಬರ್ತ್ಡೇ ದಿನ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಸದ್ಯ ಅವರ ಕೈಯಲ್ಲಿ 10 ಸಿನಿಮಾಗಳಿವೆ. ಇದರ ಜೊತೆಗೆ ಒಂದಷ್ಟು ಹೊಸ ಸಿನಿಮಾ ಘೋಷಣೆ ಆಗಿದೆ.
ಶಿವರಾಜ್ಕುಮಾರ್ (Shivarajkumar) ಅವರಿಗೆ ಇಂದು (ಜುಲೈ 12) ಬರ್ತ್ಡೇ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳು ಬರುತ್ತಿವೆ. ಸ್ಟಾರ್ ಹೀರೋಗಳ ಬರ್ತ್ಡೇ ಎಂದರೆ ಸಿನಿಮಾ ತಂಡದಿಂದ ಹೊಸ ಟೀಸರ್, ಪೋಸ್ಟರ್ ರಿಲೀಸ್ ಆಗುತ್ತವೆ. ಹೊಸ ಹೊಸ ಸಿನಿಮಾಗಳು ಕೂಡ ಘೋಷಣೆ ಆಗುತ್ತವೆ. ಅದೇ ರೀತಿ ಶಿವರಾಜ್ಕುಮಾರ್ ಅವರ ಬರ್ತ್ಡೇ ಪ್ರಯುಕ್ತ ಹೊಸಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಸದ್ಯ ಅವರ ಕೈಯಲ್ಲಿ 10 ಸಿನಿಮಾಗಳಿವೆ. ಇದರ ಜೊತೆಗೆ ಒಂದಷ್ಟು ಹೊಸ ಸಿನಿಮಾ ಘೋಷಣೆ ಆಗಿದೆ.
Shivanna’s Line Up 🔥
Personally excited for
GHOST💥
Bharathi Ranagal💥
KD💥
45💥
IV Returns💥
Combo with Ganesh💥Happy Birthday LEGEND🔥#HappyBirthdayShivanna#ಶಿವಸಂಭ್ರಮ2023 #ShivannaBirthdayCDP#Shivanna #Drshivanna #Drshivarajkumar#Ghost #BigDaddy pic.twitter.com/dacPQRMET0
— ROCKY (@Rocky23697) July 12, 2023
ಗಣೇಶ್ ಜೊತೆ ಹೊಸ ಸಿನಿಮಾ
ಶಿವರಾಜ್ಕುಮಾರ್ ಹಾಗೂ ಗಣೇಶ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರಿಗೆ ಒಟ್ಟಾಗಿ ಸಿನಿಮಾ ಮಾಡೋಕೆ ಸಾಧ್ಯವಾಗಿರಲಿಲ್ಲ. ಈಗ ಇವರು ಒಂದಾಗಿದ್ದಾರೆ. ‘ಪ್ರೊಡಕ್ಷನ್ ನಂಬರ್ 6’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದೆ. ಇಂದು ರಿಲೀಸ್ ಆದ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಕೆಎಸ್ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬಿ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಲಕ್ಕಿ ಗೋಪಾಲ್ ಸಿನಿಮಾಗೆ ಟೈಟಲ್
ಲಕ್ಕಿ ಗೋಪಾಲ್ ಅವರು ಶಿವರಾಜ್ಕುಮಾರ್ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮೈಲಾರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘IV Returns’ ಎಂದು ಟೈಟಲ್ ಇಡಲಾಗಿದೆ.
ಇನ್ನೂ ಅನೇಕ ಸಿನಿಮಾ ಘೋಷಣೆ
ರಾಮ್ ಧೂಲಿಪುಡಿ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಅವರು ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರು ಶಿವಣ್ಣನ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಅನೇಕ ಚಿತ್ರಗಳು ಘೋಷಣೆ ಆಗಿವೆ.
ಮೊದಲು ಒಬ್ಬ ಅಭಿಮಾನಿಯಾಗಿ ಈಗ ನಿರ್ದೇಶಕನಾಗಿ ಕರುನಾಡಿನ ಚಕ್ರವರ್ತಿ ಡಾ:ಶಿವರಾಜ್ ಕುಮಾರ್ ಅವರ CDP ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ.
ಈ 61 ವರ್ಷದಲ್ಲಿ 37 ವರ್ಷವನ್ನು ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಮೀಸಲಿಟ್ಟಿದ್ದೀರಿ..ಕನ್ನಡ ಚಲನಚಿತ್ರ ರಂಗಕ್ಕೆ ನಿಮ್ಮ ಕೊಡುಗೆ ಅಪಾರ.ನೂರ್ಕಾಲ ಹೀಗೆ ನಗುನಗುತ್ತಾ ಸಂತೋಷದಿಂದ ಇರಿ.… pic.twitter.com/lXZSEyYHmK
— SRINI (@lordmgsrinivas) July 11, 2023