Homeಕನ್ನಡ ಫೊಕ್ಸ್Intresting Facts About Kannada Century Star Dr Shivarajkumar - ಇಲ್ಲಿದೆ ಹ್ಯಾಟ್ರಿಕ್ ಹೀರೋ...

Intresting Facts About Kannada Century Star Dr Shivarajkumar – ಇಲ್ಲಿದೆ ಹ್ಯಾಟ್ರಿಕ್ ಹೀರೋ ಬಗ್ಗೆ ಗೊತ್ತಿರದ ಇಂಟ್ರಸ್ಟಿಂಗ್ ಸಂಗತಿ

ಶಿವಣ್ಣ –  61; ಇಲ್ಲಿದೆ ಹ್ಯಾಟ್ರಿಕ್ ಹೀರೋ ಬಗ್ಗೆ ಗೊತ್ತಿರದ ಇಂಟ್ರಸ್ಟಿಂಗ್ ಸಂಗತಿ

ಶಿವಣ್ಣರದ್ದು, ಸರಳ, ಸಜ್ಜನಿಕೆ ವ್ಯಕ್ತಿತ್ವ. ಅವರಿಗೆ ದುಬಾರಿ ಕಾರು ಬೇಕು ಅನ್ನೋ ಆಸೆ ಇಲ್ಲ. ಇಂದಿಗೂ ಅವರ ಬಳಿ ದುಬಾರಿ ಕಾರುಗಳಿಲ್ಲ. ಶಿವರಾಜ್ ಕುಮಾರ್ ಬಳಿ ಐದು ಕಾರುಗಳಿವೆ. ಒಂದು ವೋಲ್ವೋ, ಮತ್ತೊಂದು ಇನೋವಾ, ಇನ್ನೊಂದು ಫಾರ್ಚುನರ್ ಆದರೆ ಇನ್ನೆರಡು ಚಿಕ್ಕ ಕಾರುಗಳಿವೆ.

ಅಣ್ಣಾವ್ರ ಕುಟುಂಬದ ಮುಕುಟ ಮಣಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅನೇಕ ವರ್ಷಗಳಿಂದ ಕಲಾ ಸೇವೆಯಲ್ಲಿರೋ ಅಣ್ಣಾವ್ರ ದೊಡ್ಮಗ ಅಂದು ಇಂದಿಗೂ ಅದೇ ಎನರ್ಜಿ, ಅದೇ ಬ್ಯುಸಿ, ಚಿರ ಯುವಕಂತೆ ಪ್ರಜ್ವಲಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಜನ್ಮದಿನಕ್ಕೆ ಸಾಲು ಸಾಲು ಸರ್ಪ್ರೈಸ್ ಸಿಕ್ಕಿವೆ. ಘೋಸ್ಟ್ ಫಸ್ಟ್ ಲುಕ್, ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾ ಟೈಟಲ್ 45 ಅಂತ ಅನೌನ್ಸ್ ಆಗಿದೆ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ, ತಮಿಳು ನಟ ಶಿವ ಕಾರ್ತಿಕೇಯನ್, ಮಲೆಯಾಳಂ ನಟ ಪೃತ್ವಿರಾಜ್ ಟೈಟಲ್ ರಿವಿಲ್ ಮಾಡಿದ್ದಾರೆ. ಅಷ್ಟೆ ಅಲ್ಲ ಸತ್ಯಮಂಗಳ ಅನ್ನೋ ಸಿನಿಮಾ ಅನೌನ್ಸ್ ಆಗಿದೆ.

ಡಾ. ಶಿವರಾಜ್ ಕುಮಾರ್ (SRK) ಅಂದ್ರೆ ಹಲವು ಕುತೂಹಲಗಳ ಗುಚ್ಛ.
ಹಲವು ಏಳು ಬೀಳುಗಳನ್ನ ಕಂಡಿರೋ ಶಿವಣ್ಣ ವೃತ್ತಿ ಜೀವನದಲ್ಲಿ 123 ಸಿನಿಮಾ ಮಾಡಿದ್ದಾರೆ ಎಂದರೆ ಅದು ಸಾಮಾನ್ಯ ಅಲ್ಲ. ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನ ಪೂರೈಸುತ್ತಿರೋ ಸೆಂಚುರಿ ಸ್ಟಾರ್ (Shivarajkumar) ಈಗಲೂ ಸೂಪರ್ ಸ್ಟಾರ್. ಇಂತಹ ಶಿವಣ್ಣನ ಬಗ್ಗೆ ನೀವು ಕಂಡರಿಯದ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳಿವೆ. ಅಣ್ಣಾವ್ರು, ವಿಷ್ಣುವರ್ಧನ್ ಬಿಟ್ಟರೆ ಈಗಿನ ಜನರೇಷನ್ ನಲ್ಲಿ 120ಕ್ಕೂ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ನಟಿಸಿರೋ ಏಕೈಕ ನಟ ಶಿವರಾಜ್ ಕುಮಾರ್. ಅಷ್ಟೆ ಅಲ್ಲ 60 ವರ್ಷ ಆದ ಮೇಲೂ ಹೀರೋ ಪಾತ್ರಗಳಲ್ಲಿ ಮಿಂಚುತ್ತಿರೋ ಏಕೈಕನ ನಟ ಕರುನಾಡ ಚಕ್ರವರ್ತಿ.

ಶಿವಣ್ಣನ ಬಳಿ ಇರೋ ಕಾರುಗಳೆಷ್ಟು?

ಶಿವಣ್ಣರದ್ದು, ಸರಳ, ಸಜ್ಜನಿಕೆ ವ್ಯಕ್ತಿತ್ವ. ಅವರಿಗೆ ದುಬಾರಿ ಕಾರು ಬೇಕು ಅನ್ನೋ ಆಸೆ ಇಲ್ಲ. ಇಂದಿಗೂ ಅವರ ಬಳಿ ದುಬಾರಿ ಕಾರುಗಳಿಲ್ಲ. ಶಿವರಾಜ್ ಕುಮಾರ್ ಬಳಿ ಐದು ಕಾರುಗಳಿವೆ. ಒಂದು ವೋಲ್ವೋ, ಮತ್ತೊಂದು ಇನೋವಾ, ಇನ್ನೊಂದು ಫಾರ್ಚುನರ್ ಆದರೆ ಇನ್ನೆರಡು ಚಿಕ್ಕ ಕಾರುಗಳಿವೆ.

ಶಿವಣ್ಣನ ಫೇವರಿಟ್ ವಿಲನ್, ಹೀರೋ ಯಾರು?

ಬಿಗ್ ಸ್ಟಾರ್ ಆಂದ್ಮೇಲೆ ವಿಲನ್ ಗಳಿಂದ ಒದೆ ತಿನ್ನೋ ಸೀನ್ ಗಳನ್ನು ಕೆಲ ಸ್ಟಾರ್ಸ್ ಮಾಡಲ್ಲ. ಆದ್ರೆ ಶಿವರಾಜ್ ಕುಮಾರ್ ಗೆ ವಿಲನ್ ಗಳು ಅವರ ಜೊತೆ ಫೈಟ್ ಮಾಡೋದು ತುಂಬಾ ಇಷ್ಟ. ಶಿವಣ್ಣನ ಫೇವರಿಟ್ ವಿಲನ್ ಅಂದ್ರೆ ವಜ್ರಮುನಿ. ಅಂದಹಾಗೆ ಸೆಂಚುರಿ ಸ್ಟಾರ್ ಫೇವರಿಟ್ ಹೀರೋ ಕಮಲ್ ಹಾಸನ್.

ಅಜಾತ ಶತ್ರು ಸೆಂಚುರಿ ಸ್ಟಾರ್

ಶಿವಣ್ಣನಿಗೆ ಬಹಳ ಬೇಗ ಕೋಪ ಬರುತ್ತೆ. ಕೋಪಿಸಿಕೊಂಡಷ್ಟೇ ಬೇಗ ಸಮಾಧಾನ ಆಗುತ್ತಾರೆ. ಎಲ್ಲಾ ಹೀರೋಗಳು ಹಾಗೂ ಕಲಾವಿದರ ಜೊತೆ ಬೇಗ ಬೆರೆತು ಬಿಡ್ತಾರೆ. ಯಾರನ್ನು ದ್ವೇಶಿಸದೇ, ಯಾರ ಜೊತೆಗೂ ವಿವಾದ ಮಾಡಿಕೊಳ್ಳದ ಅಜಾತ ಶತ್ರು ಕರುನಾಡ ಚಕ್ರವರ್ತಿ.

ಶಿವಣ್ಣನ ಫೇವರಿಟ್ ಹಾಲಿಡೇ ಸ್ಪಾಟ್

ಶಿವರಾಜ್ ಕುಮಾರ್ ಫೇವರಿಟ್ ಹಾಲಿಡೇ ಸ್ಪಾಟ್ ಗೋವಾ. ಇನ್ನು ಶಿವಣ್ಣ ಹೆಚ್ಚು ಕಾಲ್ ಮಾಡುವ ವ್ಯಕ್ತಿ ಅಂದರೆ ನಿರ್ಮಾಪಕ ಕಮ್ ಶಿವಣ್ಣನ ಅಭಿಮಾನಿ ಕೆ.ಪಿ ಶ್ರೀಕಾಂತ್.

ಚಿಕ್ಕವರಿದ್ದಾಗ ಕಳೆದುಹೋಗಿದ್ದ ಶಿವಣ್ಣ

ಚೆನ್ನೈನಲ್ಲಿ ನೆಲೆಸಿದ್ದಾಗ ಚಿಕ್ಕವರಾಗಿದ್ದ ಶಿವಣ್ಣ ಶಾಪಿಂಗ್ ಹೋದಾಗ ಕಳೆದು ಹೋಗಿದ್ರಂತೆ. ಕೊನೆಗೆ ಶಿವಣ್ಣನನ್ನು ಹುಡುಕಿದಾಗ ಮೈ ಮೇಲೆ ಶರ್ಟ್ ಇರಲಿಲ್ಲ. ಶರ್ಟ್ ಏನಾಯ್ತು ಅಂತ ಹುಡುಕಿದ್ರೆ ಬಡ ಹುಡುಗನಿಗೆ ಕೊಟ್ಟಿದ್ರಂತೆ. ಶಿವಣ್ಣನಿಗೆ ಹೇರ್ ಕಟ್ ಅಂದ್ರೆ ಸಿಕ್ಕಾಪಟ್ಟೆ ಸಿಟ್ಟಂತೆ. ಚಿಕ್ಕವರಿದ್ದಾಗ ಹೇರ್ ಕಟ್ ಮಾಡುವಾಗ ಓಡಿ ಹೋಗ್ತಿದ್ರಂತೆ ಶಿವಣ್ಣ, ಕೊನೆಗೆ ಪಾರ್ವತಮ್ಮ ರಾಜ್ ಕುಮಾರ್ ಹಗ್ಗದಲ್ಲಿ ಕಟ್ಟಿಹಾಕಿ ಹೇರ್ ಕಟ್ ಮಾಡಿಸುತ್ತಿದ್ದರಂತೆ.

ಇಷ್ಟವಾದ ತಿನಿಸು

ಶಿವಣ್ಣನಿಗೆ ಊಟದ ಮೇಲೆ ಆಸಕ್ತಿ ಕಡಿಮೆ. ಆದರೆ ಊಟ ಬಡಿಸೋಕೆ ವರಿಗೆ ತುಂಬಾ ಇಷ್ಟವಂತೆ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಿನ್ನೋ ಕ್ರೇಜ್ ಶಿವಣ್ಣನಿಗೆ ಇಲ್ಲ. ರೋಡ್ ಸೈಡ್ ಆದರೂ ಸರಿ ಊಟ ಮಾಡ್ತಾರೆ. ಉಪ್ಪಿಟ್ಟು ಅಂದರೆ ಕರುನಾಡ ಚಕ್ರವರ್ತಿಗೆ ಪಂಚಪ್ರಾಣ.

Collection of Shivanna”s Vedha; ದರ್ಶನ ಫ್ಯಾನ್ಸ್ ; ಅಪ್ಪು ಫ್ಯಾನ್ಸ್ ನಡುವೆ ಏನಾಯಿತು ಶಿವಣ್ಣನ ವೇಧ ?

ಶಿವಣ್ಣನ ಇಷ್ಟದ ಸಬ್ಜೆಕ್ಟ್

ಶಿವಣ್ಣನಿಗೆ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ಫೇವರಿಟ್. ಕ್ರಿಕೆಟ್ ಹಾಗು ವಾಲಿಬಾಲ್ ಅಂದರೆ ತುಂಬಾ ಇಷ್ಟಪಡುತ್ತಾರೆ. ಆದರೆ ಚೆನ್ನೈನಲ್ಲಿದ್ದಾಗ ಶಿವಣ್ಣ 100 ಮೀಟರ್ ಓಟದಲ್ಲಿ ಸಿಲ್ವರ್ ಮೆಡಲ್ ಪಡೆದಿದ್ದರು.

ಶಿವಣ್ಣನಿಗೆ ಡಿಸೈನರ್ ಪತ್ನಿ ಗೀತಾ

ಶಿವಣ್ಣ ಹಾಕೋ ಎಲ್ಲಾ ಬಟ್ಟೆಗಳನ್ನ ಡಿಸೈಡ್ ಮಾಡೋದು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅಂತೆ. ತನ್ನ ಮಡದಿ ಗೀತಾ ಶಿವರಾಜ್ ಕುಮಾರ್ ವಾರಕ್ಕೆ ಒಮ್ಮೆ ಡಿನ್ನರ್ ಗೆ ಕರೆದುಕೊಂಡು ಹೋಗೋದನ್ನು ಶಿವಣ್ಣ ಮಿಸ್ ಮಾಡಲ್ಲ. ಅಷ್ಟೆ ಅಲ್ಲ ಕೇಕ್ ಎಂದರೆ ಶಿವಣ್ಣನಿಗೆ ಬಹಳ ಇಷ್ಟ. ಹೀಗಾಗಿ ಗೀತಾ ಶಿವರಾಜ್ ಕುಮಾರ್ 15 ವೆರಾಯಿಟಿ ಕೇಕ್ ಮಾಡೋದನ್ನ ಕಲಿತಿದ್ದಾರೆ.

ಶಿವಣ್ಣ ಇಷ್ಟದ ಬಣ್ಣ

ನೀಲಿ ಬಣ್ಣ ಶಿವಣ್ಣನಿಗೆ ತುಂಬಾ ಫೇವರಿಟ್. ಟೀ ಕಾಫಿಯನ್ನ ಹೇಟ್ ಮಾಡೋ ಶಿವಣ್ಣ ಗ್ರೀನ್ ಟೀಯನ್ನ ದಿನಕ್ಕೆ ಏಳೆಂದು ಬಾರಿ ಕುಡಿತಾರೆ. 60ರ ಹರೆಯದಲ್ಲೂ ಹರೆಯದ ಯುವಕರು ನಾಚುವಂತೆ ಸ್ಟೆಪ್ಸ್ ಹಾಕ್ತಾರೆ. ಕುಚಿಪೂಡಿ ನೃತ್ಯ ಕಲಿತಿದ್ದಾರೆ. ಹಣ ಅಂತಸ್ತು, ಐಶ್ವರ್ಯ, ಗೌರವ ಎಲ್ಲವೂ ಕಾಲಡಿ ಬಿದ್ದಿದ್ದರು ಶಿವಣ್ಣ ಹೃದಯವಂತರಾಗಿ ಬಾಳುತ್ತಿದ್ದಾರೆ. ಸಾಕಷ್ಟು ಮಂದಿಗೆ ಬೆಳಕಾಗುತ್ತಿದ್ದಾರೆ.

kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments