Welcome to Kannada Folks   Click to listen highlighted text! Welcome to Kannada Folks
HomeStoriesShankar Nag Birthday Special - ಶಂಕ್ರಣ್ಣನ ಆ ಸಿನಿಮಾ ನೋಡಿ ಇಂಪ್ರೆಸ್ ಆದ ಇಳಯರಾಜಾ...

Shankar Nag Birthday Special – ಶಂಕ್ರಣ್ಣನ ಆ ಸಿನಿಮಾ ನೋಡಿ ಇಂಪ್ರೆಸ್ ಆದ ಇಳಯರಾಜಾ ಸಂಭಾವನೆಯೇ ಬೇಡ ಅಂದ್ಬಿಟ್ರು

Spread the love

Shankar Nag Birthday Special – ಶಂಕ್ರಣ್ಣನ ಸಿನಿಮಾ ನೋಡಿ ಇಂಪ್ರೆಸ್ ಆದ ಇಳಯರಾಜಾ ಸಂಭಾವನೆಯೇ ಬೇಡ ಅಂದ್ಬಿಟ್ರು

ಇವತ್ತು ಶಂಕರ್ ನಾಗ್ ಹುಟ್ಟುಹಬ್ಬ. ಅವರು ಹುಟ್ಟಿದ್ದು 1974ರ ನ. 9ರಂದು. ಇಂದು ಬದುಕಿರುತ್ತಿದ್ದರೆ 70 ವರ್ಷ ವಯಸ್ಸಾಗಿರುತ್ತಿತ್ತು. ಇಷ್ಟೊತ್ತಿಗೆ ಹಲವಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಅಲ್ಲಿಯೂ ತಮ್ಮ ಛಾಪು ಮೂಡಿಸಿರುತ್ತಿದ್ದರು. ಅವರ ಹುಟ್ಟುಹಬ್ಬದ ಈ ದಿನ ಅವರ ಜೀವನದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವ ಮೂಲಕ ಅವರನ್ನೊಮ್ಮೆ ಸ್ಮರಿಸುವ ಪ್ರಯತ್ನ ಇದಾಗಿದೆ. ಇಳಯರಾಜಾ ಅವರು ಶಂಕರ್ ನಾಗ್ ಅವರ ಮೇಲಿಟ್ಟಿದ್ದ ಗೌರವ ಎಂಥದ್ದು ಎಂಬುದನ್ನು ಈ ಲೇಖನ ಅನಾವರಣ ಮಾಡಲಿದೆ.

ಶಂಕರ್ ನಾಗ್ ಹುಟ್ಟುಹಬ್ಬದ ದಿನದಂದು ಕರಾಟೆ ಕಿಂಗ್ ಕುರಿತು ವಿಶೇಷ ಲೇಖನ.

ಆ್ಯಕ್ಸಿಡೆಂಟ್ ಸಿನಿಮಾಕ್ಕೆ ಹಿನ್ನಲೆ ಸಂಗೀತ ನೀಡಿದ್ದ ಇಳಯರಾಜಾ.

ಭಾರೀ ಬ್ಯುಸಿ ಶೆಡ್ಯೂಲ್ ನಡುವೆಯೂ ತಮ್ಮ ಚಿತ್ರ ಒಪ್ಪಿಕೊಂಡು ಸಂಗೀತ ನೀಡಿದ್ದಕ್ಕೆ ಬ್ಲ್ಯಾಂಕ್ ಚೆಕ್ ಕೊಟ್ಟಿದ್ದ ಶಂಕರ್.

ಆದರೆ, ರಿಜಿಸ್ಟರ್ ಪೋಸ್ಟ್ ಮೂಲಕ ಚೆಕ್ ಹಿಂದಿರುಗಿಸಿದ ಇಳಯರಾಜಾ! ಕಾರಣ ಮಾತ್ರ ಕುತೂಹಲ.

ಅದು 1985ರ ಸಮಯ. ಶಂಕರ್ ನಾಗ್ ತಮ್ಮ ನಿರ್ದೇಶನದ ಏಳನೆಯ ಸಿನಿಮಾ ಆದ ಆ್ಯಕ್ಸಿಡೆಂಟ್ ಚಿತ್ರವನ್ನು ಸಿದ್ದ ಮಾಡಿದ್ದರು. ವಸಂತ್ ಮೊಕಾಶಿಯವರ ಕಾದಂಬರಿ ಆಧರಿಸಿ ನಿರ್ಮಾಣವಾಗಿದ್ದ ಆ ಸಿನಿಮಾದಲ್ಲಿ ಹಾಡುಗಳಿರಲಿಲ್ಲವಾದರೂ ಪರಿಣಾಮಕಾರಿಯಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬೇಕಿತ್ತು. ಶಂಕರ್ ನಾಗ್ ಅವರು ಎಂದಿನಂತೆ ನೆಚ್ಚಿನ ಸಂಗೀತ ನಿರ್ದೇಶಕ ಇಳಯರಾಜಾ ಅವರಿಂದಲೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಾಡಿಸಲು ನಿರ್ಧರಿಸಿ, ಆ್ಯಕ್ಸಿಡೆಂಟ್ ಚಿತ್ರದ ರೀಲುಗಳ ಡಬ್ಬಿಗಳನ್ನು ಚೆನ್ನೈಗೆ ಕೊಂಡೊಯ್ದಿದ್ದರು.

ಈ ಮೊದಲೇ ಹೇಳಿದಂತೆ, ಅದು 1985ರ ಸಮಯ. ಇಳಯರಾಜ ಆಗ ತಮಿಳು ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲಿ ಅತಿ ಬೇಡಿಕೆಯ ಸಂಗೀತ ನಿರ್ದೇಶಕ. ತಮಿಳು ಚಿತ್ರಗಳೇ ಸಾಲು ಸಾಲಾಗಿ ಅವರ ಕೈಯ್ಯಲ್ಲಿರುವುದರ ಜೊತೆಗೆ ತೆಲುಗು, ಮಲಯಾಳಂ ಸಿನಿಮಾಗಳು ಅವರ ಕೈಯ್ಯಲ್ಲಿ ಇದ್ದವು. ಅವರಿಗೆ ಸಿನಿಮಾಕ್ಕೆ ಸಂಗೀತ ಕಂಪೋಸ್ ಮಾಡೋದಿರಲಿ… ಆರಾಮಾಗಿ ಕುಳಿತು ತಿಂಡಿ, ಊಟ ಮಾಡಲೂ ಪುರುಸೊತ್ತು ಇಲ್ಲ. ಅಷ್ಟು ಬ್ಯುಸಿ… ಆ ಕಾಲದಲ್ಲಿ ಅವರು ಬೆಳಗಿನ ಜಾವ 4 ರಿಂದ ಮಧ್ಯರಾತ್ರಿ 11-12ರವರೆಗೆ ದಿನಕ್ಕೆ ನಾಲ್ಕು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ಆಗೆಲ್ಲಾ ಅವರನ್ನು ಭೇಟಿ ಮಾಡಲು ಬೇರೆ ರಾಜ್ಯಗಳಿಂದ ಹೋಗುವ ಪ್ರೊಡ್ಯೂಸರ್ ಗಳು ಚೆನ್ನೈನಲ್ಲಿ (ಆಗಿನ ಮದ್ರಾಸ್) ಹೋಟೆಲಲ್ಲಿ ರೂಮು ಮಾಡಿಕೊಂಡು ಕನಿಷ್ಟ ಒಂದು ವಾರದ ಮಟ್ಟಿಗಾದರೂ ಕಾಯಬೇಕಿರುತ್ತಿತ್ತು. ಅಷ್ಟು ಬ್ಯುಸಿ ಅವರು.

ಇಂಥ ಸಂದರ್ಭದಲ್ಲೇ ಶಂಕರ್ ನಾಗ್ ಅವರು ತಮ್ಮ ಆ್ಯಕ್ಸಿಡೆಂಟ್ ಚಿತ್ರದ ರೀಲುಗಳ ಡಬ್ಬಿಗಳನ್ನು ತೆಗೆದುಕೊಂಡು ಚೆನ್ನೈ ರೈಲು ಹತ್ತಿದ್ದರು. ಅಲ್ಲಿ ಹೋದಾಗ ತಕ್ಷಣಕ್ಕೆ ಅವರು ಸಿಗಲಿಲ್ಲ. ಎರಡು, ಮೂರು ದಿನಗಳ ಕಾಯುವಿಕೆಯ ನಂತರ ಇಳಯರಾಜಾ ಅವರ ಭೇಟಿಗೆ ಅಪಾಯಿಂಟ್ ಮೆಂಟ್ ಫಿಕ್ಸ್ ಆಯಿತು. ಅದೂ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ! ಮಾತಾಡಿದ್ದು ಕೇವಲ 5 ನಿಮಿಷರಾಷ್ಟ್ರವಾದಿ, ದೂರದೃಷ್ಟಿಯುಳ್ಳ Shankar Nag Birthday: ಆಟೋರಾಜನ ಸ್ಮರಿಸಿದ ಫ್ಯಾನ್ಸ್!

ಶಂಕರ್ ನಾಗ್ ಅವರು ತಮ್ಮ ಚಿತ್ರಕ್ಕೆ ನೀವೇ ಸಂಗೀತ ನೀಡಬೇಕು ಎಂದು ಮನವಿ ಮಾಡಿದರು. ಆಗ ಇಳಯರಾಜ, ನಮಗಿರುವ ಬ್ಯುಸಿ ಶೆಡ್ಯೂಲಿನಲ್ಲಿ ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಆದರೂ, ನಿಮಗಾಗಿ ಮಾಡಿಕೊಡುತ್ತೇನೆ. ನಿಮ್ಮ ಸಿನಿಮಾದ ಬಾಕ್ಸ್ ಗಳನ್ನು ಇಲ್ಲೇ ಸ್ಟುಡಿಯೋದಲ್ಲಿ ಇಟ್ಟು ಹೋಗಿ. ನಾನು ಪುರುಸೊತ್ತಾದಾಗ ಆ ಸಿನಿಮಾ ವೀಕ್ಷಿಸಿ ಸಂಗೀತ ಸಂಯೋಜಿಸಿ ಕೊಡುತ್ತೇನೆ ಎಂದು ಹೇಳಿದರು.

ಅವರು ಹೇಳಿದಂತೆ, ಶಂಕರ್ ನಾಗ್ ಅವರು ಆ ಸಿನಿಮಾ ರೀಲುಗಳನ್ನು ಇಳಯರಾಜಾ ಅವರ ಸ್ಟುಡಿಯೋದಲ್ಲೇ ಇಟ್ಟು ಮರಳಿ ಬೆಂಗಳೂರಿಗೆ ವಾಪಸ್ಸಾದರು. ಶಂಕರ್ ನಾಗ್ ಅಂದುಕೊಂಡಿದ್ದೇನೆಂದರೆ, ಇಳಯರಾಜಾ ಅವರ ಸಂಗೀತ ಸಿಗಲು ಕನಿಷ್ಟ ಒಂದು ತಿಂಗಳಾದರೂ ಆಗಬಹುದು ಅಂತ. ಆದರೆ, ಬೆಂಗಳೂರಿಗೆ ಬಂದ ಒಂದೆರಡು ದಿನದಲ್ಲೇ ಇಳಯರಾಜಾ ಅವರ ಅಸಿಸ್ಟಂಟ್ ಕಡೆಯಿಂದ ಫೋನ್ ಬಂತು. ನಿಮ್ಮ ಸಿನಿಮಾ ರೆಡಿ ಆಗಿದೆ. ಕೂಡಲೇ ಬಂದು ತಗೆದುಕೊಂಡು ಹೋಗಿ ಅಂತ.

ಕೂಡಲೇ ಚೆನ್ನೈನತ್ತ ಹೊರಟರು ಶಂಕರ್ ನಾಗ್. ಅಲ್ಲಿ ಇಳಯರಾಜಾರವರ ಸ್ಟುಡಿಯೋಕ್ಕೆ ಹೋದಾಗ ಅಲ್ಲಿ ಇಳಯರಾಜಾ ಸಿಕ್ಕಲಿಲ್ಲ. ಇನ್ ಫ್ಯಾಕ್ಟ್… ಅವರು ಎವಿಎಂ ಸ್ಟುಡಿಯೋದಲ್ಲಿ ಬೇರೆ ಯಾವುದೋ ಸಿನಿಮಾದ ರೆಕಾರ್ಡಿಂಗ್ ನಲ್ಲಿ ಬ್ಯುಸಿ ಇದ್ದರು. ಆದರೆ, ಇಳಯರಾಜ ಸ್ಟುಡಿಯೋದಲ್ಲಿ ಸಿಕ್ಕಿದ್ದು ಅವರ ಮ್ಯಾನೇಜರ್

ಮ್ಯಾನೇಜರ್ ಅವರಿಗೆ ಥ್ಯಾಂಕ್ಸ್ ಹೇಳಿ, ಆ್ಯಕ್ಸಿಡೆಂಟ್ ಸಿನಿಮಾದ ರೀಲ್ ಪಡೆದುಕೊಂಡರು. ಈಗ ಬಂದಿದ್ದು ಸಂಭಾವನೆಯ ಪ್ರಶ್ನೆ. ಆಗ ಸ್ವಲ್ಪ ಪೇಚಿಗೆ ಸಿಲುಕಿದರು ಶಂಕರ್ ನಾಗ್. ತುಂಬಾ ಬ್ಯುಸಿ ಇದ್ದರೂ ತಮ್ಮ ಮೇಲಿನ ಅಭಿಮಾನಕ್ಕಾಗಿ ತಮ್ಮ ಸಿನಿಮಾಕ್ಕೆ ಸಂಗೀತ ಮಾಡಿಕೊಟ್ಟ ಇಳಯರಾಜಾರಿಗೆ ಎಷ್ಟು ಸಂಭಾವನೆ ಕೊಡಬೇಕು ಅಂತ ಪೇಚಿಗೆ ಸಿಲುಕಿದರು ಅವರು.

ಆಗಿನ ಕಾಲದಲ್ಲೇ ಸಾಮಾನ್ಯ ಸಂಗೀತ ನಿರ್ದೇಶಕರಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಇಳಯರಾಜಾ ಅವರಿಗೆ ಅವರಿಗೆ ನಿಗದಿಯಾಗಿರುವ ಸಂಭಾವನೆ ಕೊಡಬೇಕಾ ಅಥವಾ ಅವಸರದಲ್ಲಿ ಕೆಲಸ ಮಾಡಿಕೊಟ್ಟಿದ್ದಕ್ಕಾಗಿ ತುಸು ಹೆಚ್ಚು ಸಂಭಾವನೆ ಕೊಡಬೇಕಾ ಅಂತ ಸ್ವಲ್ಪ ಗೊಂದಲಕ್ಕೀಡಾದರು. ಅಷ್ಟೇ ಅಲ್ಲದೆ, ತಮಗೆ ತಿಳಿದಷ್ಟು ಕೊಟ್ಟೇವೆಂದರೂ ಅವರು ನಮಗೆ ಮಾಡಿರುವ ಉಪಕಾರಕ್ಕೆ ಕಡಿಮೆ ಕೊಟ್ಟಂತಾಗುತ್ತೇನೋ ಎಂಬ ಅಳುಕು ಕೂಡ ಕಾಡತೊಡಗಿತು.

ಆಗ, ಶಂಕರ್ ನಾಗ್ ಅವರಿಗೆ ಒಂದು ಐಡಿಯಾ ಹೊಳೆಯಿತು. ಕೂಡಲೇ, ಸ್ಟುಡಿಯೋದಲ್ಲಿ ಒಂದು ಬಿಳಿ ಹಾಳೆಯನ್ನು ಪಡೆದು, ಅದರಲ್ಲಿ ಇಳಯರಾಜಾ ಅವರಿಗೆ ಧನ್ಯವಾದ ಹೇಳಿ ಒಂದು ಸಣ್ಣ ಪತ್ರ ಬರೆದರು. ಸಂಭಾವನೆ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಗೊಂದಲವನ್ನೂ ಅದರಲ್ಲಿ ಹೇಳಿಕೊಂಡರು. ಆನಂತರ, ತಮ್ಮಲ್ಲಿದ್ದ ಚೆಕ್ ಬುಕ್ ತೆಗೆದು, ಅದರಲ್ಲಿನ ಒಂದು ಚೆಕ್ ಗೆ ತಮ್ಮ ಸಹಿ ಹಾಕಿ, ಹಣವನ್ನು ಬರೆಯದೇ ಅದನ್ನು ಆ ಬಿಳಿ ಹಾಳೆಗೆ ಲಗತ್ತಿಸಿ ಅವರ ಅಸಿಸ್ಟಂಟ್ ಗೆ ಕೊಟ್ಟು ಇದನ್ನು ಇಳಯರಾಜಾ ಅವರಿಗೆ ತಲುಪಿಸಿಬಿಡಿ ಎಂದು ಹೇಳಿದರು.

ನೆನಪಿಡಿ.. ಅವರು ಕೊಟ್ಟಿದ್ದು ಅಕ್ಷರಶಃ ಬ್ಲಾಂಕ್ ಚೆಕ್. ಅದರಲ್ಲಿ ಇಳಯರಾಜಾ ಅವರು ಎಷ್ಟು ಬೇಕಾದರೂ ಹಣ ನಮೂದಿಸಿಕೊಳ್ಳಲಿ ಎಂಬುದು ಅವರ ಉದ್ದೇಶವಾಗಿತ್ತು. ಹಾಗೆ ಚೆಕ್ ಕೊಟ್ಟು ಸಿನಿಮಾ ರೀಲ್ಸ್ ಗಳೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಶಂಕರ್ ನಾಗ್, ಸಿನಿಮಾ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಆರಂಭಿಸಿದರು.

ಸುಮಾರು ಒಂದು ವಾರ ಕಳೆಯಿತು. ಶಂಕರ್ ನಾಗ್ ಅವರ ಮನೆಗೆ ಒಂದು ರಿಜಿಸ್ಟರ್ ಪೋಸ್ಟ್ ಬಂತು. ನೋಡಿದರೆ, ಅದು ಚೆನ್ನೈನಿಂದ ಇಳಯರಾಜಾ ಅವರ ಕಚೇರಿಯಿಂದ ಬಂದಿದ್ದು! ಕವರ್ ತೆಗೆದು ನೋಡಿದಾಗ ಅದರಲ್ಲಿ ಶಂಕರ್ ಅವರು ನೀಡಿದ್ದ ಬ್ಲಾಂಕ್ ಚೆಕ್ ವಾಪಸ್ ಕಳುಹಿಸಲಾಗಿತ್ತು ಅದರ ಜೊತೆಗೆ, ಇಳಯರಾಜಾ ಅವರ ಸಹಿ ಇರುವ ಒಂದು ಪುಟ್ಟ ಕಾಗದ ಇತ್ತು.

ಅದನ್ನು ನೋಡಿ, ಶಂಕರ್ ನಾಗ್ ಅವರು ಒಂದು ಕ್ಷಣ ದಿಗ್ಭ್ರಾಂತರಾದರು. ಒಂದೆರಡು ಕ್ಷಣ ಮಾತೇ ಹೊರಡಲಿಲ್ಲ. ಆನಂತರ ಅನಂತ್ ನಾಗ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಷ್ಟರ ಮಟ್ಟಿಗೆ ಶಂಕರ್ ನಾಗ್ ಅವರ ಆ್ಯಕ್ಸಿಡೆಂಟ್ ಸಿನಿಮಾ ಇಳಯರಾಜಾ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಈಗಲೂ ಆ ಸಿನಿಮಾ ಆಲ್ ಟೈಮ್ ಫೇವರಿಟ್ ಎನಿಸಿದೆ.

ಇಳಯರಾಜಾಗೆ ಆ್ಯಕ್ಸಿಡೆಂಟ್ ಸಿನಿಮಾ ಇಷ್ಟವಾಗಿದ್ದೇಕೆ?

ಶ್ರೀಮಂತರ ಮಗನೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ಬಡವರ ಮೇಲೆ ಕಾರು ಹಾರಿಸಿ ಹತ್ತಾರು ಜನರನ್ನು ಕೊಲ್ಲುತ್ತಾನೆ. ಆದರೆ, ಹಣ, ಅಂತಸ್ತು, ರಾಜಕೀಯ ಮೇಲಾಟಗಳಿಂದ ಆತನನ್ನು ಬಚಾವು ಮಾಡುವ ಕೆಲಸಗಳಾಗುತ್ತವೆ. ದೊಡ್ಡವರ

ದೊಡ್ಡಾಟಗಳಿಂದ ಪೊಲೀಸರು, ಪತ್ರಕರ್ತರು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ಎದುರಾಗುತ್ತದೆ.

ಇಂಥ ಘಟನೆಗಳು ಈಗಲೂ ನಡೆಯುತ್ತಿವೆ. ನ. 4ರಂದು ಕೆಂಗೇರಿಯಲ್ಲಿ ಸೌಮ್ಯಾ ಎಂಬುವ ಮೇರೆ ಧನಿಕರ ಪುತ್ರನೊಬ್ಬ ಕಾರು ಹರಿಸಿರುವುದು, ಕೇಸ್ ಹಿಂದಕ್ಕೆ ಪಡೆಯಲು ಆ ಹಣವಂತರು 2 ಕೋಟಿ ರೂ. ಆಫರ್ ಕೊಟ್ಟಿರುವುದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಂಥವು ಎಷ್ಟೋ ಘಟನೆಗಳಿವೆ… ಚರ್ಚೆ ಮಾಡಲು. ಅವೆಲ್ಲವನ್ನೂ ನೋಡಿದಾಗ ‘ಆ್ಯಕ್ಸಿಡೆಂಟ್’ ಸಿನಿಮಾ ಸರ್ವಕಾಲಿಕ ಸತ್ಯವೊಂದನ್ನು ಸಾರುವ ಸಿನಿಮಾ ಎಂದೆನಿಸುತ್ತದೆ. ಬಹುಶಃ ಅದೇ ಕಾರಣಕ್ಕೆ ಇರಬೇಕು.. ಇಳಯರಾಜಾ ಅವರು ಆ ಸಿನಿಮಾಕ್ಕೆ ಸಂಭಾವನೆ ಪಡೆಯದೇ ಇದ್ದಿದ್ದು. 30 ವರ್ಷಗಳ ಹಿಂದೆಯೇ ಅಂಥದ್ದೊಂದು ಸಿನಿಮಾ ಕೊಟ್ಟಿದ್ದ ಶಂಕರ್ ನಾಗ್ ಅವರಿಗೆ ಹ್ಯಾಟ್ಸ್ ಆಫ್ ಎನ್ನದೇ ಬೇರೆ ದಾರಿಯಿಲ್ಲ… ಅಲ್ಲವೇ?

What is Raksha Bandhan  Kannada

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!