HomeLyricsShankara Shashidhara Song Lyrics- ಶಂಕರ ಶಶಿಧರ|Devotional Song|Shabarimale Swamy Ayyappa

Shankara Shashidhara Song Lyrics- ಶಂಕರ ಶಶಿಧರ|Devotional Song|Shabarimale Swamy Ayyappa

Shankara Shashidhara Song Lyrics- ಶಂಕರ ಶಶಿಧರ

Shankara Shashidhara Song Lyrics- ಶಂಕರ ಶಶಿಧರ

 ಶಂಕರ ಶಶಿಧರ ಗಜ ಚರ್ಮಾಂಭರ
ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ
ಜಯ ಪರಮೇಶ್ವರನೆ
ಶಂಕರ ಶಶಿಧರ ಗಜ ಚರ್ಮಾಂಭರ
ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ
ಜಯ ಪರಮೇಶ್ವರನೆ
ಜಯಜಯ ಶಂಕರನೆ ಜಯ ವಿಶ್ವೇಶ್ವರನೆ
ಜಯಜಯ ಶಂಕರನೆ ಜಯ ವಿಶ್ವೇಶ್ವರನೆ
ಓಂ….
ಓಂ…..
ಓಂ……
ಓಂ……..
ಈಶ ಗಿರೀಶ ಮಹೇಶ ಉಮೇಶ
ಜಯ ವಿಶ್ವೇಶ್ವರನೆ
ಶೂಲಿಕಪರ್ಧಿ ತ್ರಿನೇತ್ರ ತ್ರಿಯ೦ಬಕ
ಜಯ ಮೃತ್ಯುಂಜಯನೇ…
 ಈಶ ಗಿರೀಶ ಮಹೇಶ ಉಮೇಶ
ಜಯ ವಿಶ್ವೇಶ್ವರನೆ
ಶೂಲಿಕಪರ್ಧಿ ತ್ರಿನೇತ್ರ ತ್ರಿಯ೦ಬಕ ಜಯ
ಮೃತ್ಯುಂಜಯನೇ..ಜಯ ಮೃತ್ಯುಂಜಯನೇ
ಭಕುತಿಗೆ ಬೇಗನೆ ಒಲಿಯುವ ದೇವನೆ
ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬಸದಾಶಿವನೆ
 ಭಕುತಿಗೆ ಬೇಗನೆ ಒಲಿಯುವ ದೇವನೆ
ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬಸದಾಶಿವನೆ
ಜಯ ಜಯ ಶಂಕರನೆ ಜಯ ವಿಶ್ವೇಶ್ವರನೆ
ಜಯ ಜಯ ಶಂಕರನೆ ಜಯ ವಿಶ್ವೇಶ್ವರನೆ
 ಋಷಿಗಳ ಹೃದಯದಿ ಮನೆಯನು
ಮಾಡಿದ ತ್ರಿಭುವನ ಪಾಲಕನೆ..
ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಾಸಾಗರನೆ…
 ಋಷಿಗಳ ಹೃದಯದಿ ಮನೆಯನು
ಮಾಡಿದ ತ್ರಿಭುವನ ಪಾಲಕನೆ…
ಲೋಕವ ರಕ್ಷಿಸೆ ವಿಷವನೆ ಕುಡಿದ
ಕರುಣಾಸಾಗರನೆ…ಕರುಣಾಸಾಗರನೆ
ಶಂಕರ ಶಶಿಧರ ಗಜ ಚರ್ಮಾಂಭರ
ಗಂಗಾಧರ ಹರನೇ
 ಸುಂದರ ಸ್ಮರಹರ ಗೌರಿ ಮನೋಹರ
ಜಯ ಪರಮೇಶ್ವರನೆ..
ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೆ
ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೆ
ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೆ

ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೆ

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×