HomeNewsSanju on Sachin’s Guidance-ಸಂಜು ಸ್ಯಾಮ್‌ಸನ್ 25 ನಿಮಿಷದ ಕರೆ |Kannada Folks

Sanju on Sachin’s Guidance-ಸಂಜು ಸ್ಯಾಮ್‌ಸನ್ 25 ನಿಮಿಷದ ಕರೆ |Kannada Folks

Sanju & Sachin 25-Minute Call

Sanju on Sachin’s Guidance-ಸಂಜು ಸ್ಯಾಮ್‌ಸನ್ 25 ನಿಮಿಷದ ಕರೆ

Sanju Samson: ಟಿ20 ವಿಶ್ವಕಪ್​ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಆ ಬಳಿಕ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದರು. ಅದರಲ್ಲೂ ಕೊನೆಯ ಮೂರು ಮ್ಯಾಚ್​ಗಳಲ್ಲಿ, ಅಂದರೆ ವೆಸ್ಟ್ ಇಂಡೀಸ್ (97*), ಇಂಗ್ಲೆಂಡ್ (89) ಮತ್ತು ನ್ಯೂಝಿಲೆಂಡ್ (89) ವಿರುದ್ಧ ಅದ್ಭುತ ಬ್ಯಾಟಿಂಗ್ ನಡೆಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.Sanju Samson: Kerala to honour T20 World Cup hero Sanju..

Read this : Trump’s Hormuz Warning to Iran-ಟ್ರಂಪ್ ಎಚ್ಚರಿಕೆ ಇರಾನ್ ನಾಶದ ಹಾಸಿಗೆ |Kannada Folks

10, 6, 0, 24, ಮತ್ತು 6 ರನ್… ಇದು ಟಿ20 ವಿಶ್ವಕಪ್​ಗೂ ಮುನ್ನ ಸಂಜು ಸ್ಯಾಮ್ಸನ್ ಕಲೆಹಾಕಿದ ಸ್ಕೋರ್. ಅಂದರೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಯಾಮ್ಸನ್ 5 ಇನಿಂಗ್ಸ್​ಗಳ ಮೂಲಕ ಗಳಿಸಿದ್ದು ಕೇವಲ 46 ರನ್​ಗಳು ಮಾತ್ರ. ಈ ಹೀನಾಯ ಪ್ರದರ್ಶನದಿಂದ ಕುಗ್ಗಿದ್ದ ಸಂಜು ಸ್ಯಾಮ್ಸನ್​ ಅವರ ಫಾರ್ಮ್​ ಚಿತ್ರಣವನ್ನೇ ಬದಲಿಸಿದ್ದು ಆ ಒಂದು ಕರೆ.

ಹೌದು, ಟಿ20 ವಿಶ್ವಕಪ್​ನಲ್ಲಿನ ಅಮೋಘ ಪ್ರದರ್ಶನದ ಬಳಿಕ ಸಂಜು ಸ್ಯಾಮ್ಸನ್ ಇದರ ಶ್ರೇಯಸ್ಸು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಅವರಿಗೆ ಸಲ್ಲಬೇಕು ಎಂದಿದ್ದರು. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮಾನಸಿಕವಾಗಿ ಕುಗ್ಗಿದ್ದಾಗ ನಾನು ಸಚಿನ್ ಸರ್​ಗೆ ಕರೆ ಮಾಡಿದ್ದೆ. ಈ ವೇಳೆ ಅವರು ನೀಡಿದ ಸಲಹೆ ಹಾಗೂ ಆತ್ಮ ವಿಶ್ವಾಸವೇ ನನ್ನ ಪ್ರದರ್ಶನಕ್ಕೆ ಮುಖ್ಯ ಕಾರಣ ಎಂದಿದ್ದರು.

25 ನಿಮಿಷಗಳ ಕರೆ:

ಟಿ20 ವಿಶ್ವಕಪ್​ಗೂ ಮುನ್ನ ನಾನು ವಿಭಿನ್ನ ಯೋಜನೆಯನ್ನು ಅಳವಡಿಸಿಕೊಂಡಿದ್ದೆ. ಹೀಗಾಗಿ ಪ್ರತಿ ಚೆಂಡಿನಲ್ಲೂ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದೆ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ನಾನು ನನ್ನ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಆದರೆ ಇದಾಗ್ಯವುದೂ ಸಹ ಫಲ ನೀಡಲಿಲ್ಲ. ಅಂತಿಮವಾಗಿ, ವಿಶ್ವಕಪ್‌ಗೆ ಮೊದಲು ನಾನು ಹೊಸ ಆಟದ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಅದಕ್ಕೂ ಮುನ್ನ ನಾನು ಸಚಿನ್ ತೆಂಡೂಲ್ಕರ್ ಸರ್​ಗೆ ಕರೆ ಮಾಡಿದ್ದೆ.

ನನ್ನ ವೈಫಲ್ಯದ ಸಮದಯದಲ್ಲಿ ಸಚಿನ್ ಸರ್ ನೀಡಿದ ಬೆಂಬಲವು ತನ್ನ ಅತಿ ದೊಡ್ಡ ಬಲ. ನಾನು ಅವರೊಂದಿಗೆ ಕೆಲ ಸಮಯದಿಂದ ನಿರಂತರ ಸಂಪರ್ಕದಲ್ಲಿದ್ದೆ. ಐಪಿಎಲ್ ಸಂದರ್ಭಗಳ ಹೊರತಾಗಿ, ಅವರು ಸಂದೇಶಗಳ ಮೂಲಕವೂ ಸಂವಹನ ನಡೆಸಿದ್ದರು.

ನಾನು ಫಾರ್ಮ್ ಕಳೆದುಕೊಂಡು ಕುಗ್ಗಿದ್ದಾಗ, ನನ್ನ ಮನಸ್ಸಿಗೆ ಬಂದ ಮೊದಲ ಹೆಸರು ಸಚಿನ್ ಸರ್. ಹೀಗಾಗಿ ನಾನು ಅವರನ್ನು ಸಂಪರ್ಕಿಸಿದೆ. ಅವರು ಸುಮಾರು 25 ನಿಮಿಷಗಳ ಕಾಲ ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮ ವೃತ್ತಿಜೀವನದ ಕಷ್ಟದ ಸಮಯಗಳ ಅನುಭವಗಳನ್ನು, ಅವರ ಆಲೋಚನಾ ವಿಧಾನ, ಅಭ್ಯಾಸ ಮತ್ತು ಸಂದರ್ಭಗಳನ್ನು ನಿಭಾಯಿಸುವ ರೀತಿಯನ್ನು ಹಂಚಿಕೊಂಡರು.

ಸಚಿನ್ ಸರ್ ನೀಡಿದ ಸಲಹೆ ನನಗೆ ಹೊಸ ಶಕ್ತಿ ಮತ್ತು ಸ್ಪಷ್ಟತೆಯನ್ನು ನೀಡಿತು. ಈ ಒಂದು ಕರೆ ಫಾರ್ಮ್​ಗೆ ಮರಳುವಂತೆ ಮಾಡಿತು. ಅಷ್ಟೇ ಅಲ್ಲದೆ ಫೈನಲ್ ಪಂದ್ಯಕ್ಕೂ ಮೊದಲು ನಾನು ಮತ್ತೆ ಸಚಿನ್ ಸರ್​ಗೆ ಕರೆ ಮಾಡಿ ಮಾತನಾಡಿದೆ. ಈ ವೇಳೆಯೂ ಅವರು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಅವರ ಸಲಹೆಯಿಂದಾಗಿ ನನಗೆ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments