Ruckus in the legislative assembly over illegal liquor sales
ವಿಧಾನಸಭೆ ಕಲಾಪದಲ್ಲಿಂದು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ ವಿಚಾರ ಗದ್ದಲ, ಕೋಲಾಹಲ ಸೃಷ್ಟಿಸಿತ್ತು.ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಶಾಸಕ ಮಹಾಂತೇಶ ಕೌಜಲಗಿ ಪ್ರಶ್ನೆ ಕೇಳಿದ್ರು. ಈ ವೇಳೆ ವಿಪಕ್ಷ ಸದಸ್ಯರು ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಟಾರ್ಗೆಟ್ ಫಿಕ್ಸ್ ಮಾಡಿರೋದೇ ಕಾರಣ ಅಂತ ಆಪಾದಿಸಿದರು.
Read this – karwar labour dies by an accident ಕಾರವಾರದ ಕಾರ್ಮಿಕ ಅಪಘಾತದಿಂದ ಸಾವು
ಈ ವೇಳೆ ಎಸ್ಸಿ/ಎಸ್ಟಿ ಕಾಲೋನಿಗಳಲ್ಲೇ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗ್ತಿದೆ. ಇದರಿಂದ ತಮ್ಮ ಕ್ಷೇತ್ರದಲ್ಲಿ 35-40 ವರ್ಷದ ಒಬ್ಬೇಒಬ್ಬ ದಲಿತ ಯುವಕರೂ ಬದುಕಿಲ್ಲ ಅಂತ ಶಾಸಕ ಆರಗ ಜ್ಞಾನೇಂದ್ರ ಸದನದ ಗಮನ ಸೆಳೆದರು. ಆದ್ರೆ ಆರಗ ಜ್ಞಾನೇಂದ್ರ ಹೇಳಿಕೆಗೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ತೀವ್ರವಾಗಿ ಆಕ್ಷೇಪಿಸಿದ್ರು. ಯಾಕ್ರೀ ಆರಗ ಅವರೇ ಎಸ್ಸಿ-ಎಸ್ಟಿ ಜನ ಮಾತ್ರ ಮದ್ಯ ಕುಡೀತಾರಾ? ಬೇರೆಯವ್ರು ಯಾರೂ ಕುಡಿಯಲ್ವಾ? ನೀವು ಕುಡಿಯಲ್ವಾ? ನೀವು ಕುಡಿಯಲ್ಲ ಅಂತ ಪ್ರಮಾಣ ಮಾಡ್ತೀರ? ಅಂತ ಆರಗ ಮೇಲೆ ಗರಂ ಆದ್ರು.
Read this – Talks with US to prevent atrocities on Indians: Jaishankar
ಈ ವೇಳೆ ಡಿಸಿಎಂ ಡಿಕೆಶಿ ಮಧ್ಯಪ್ರವೇಶಿಸಿ, ರಾಜ್ಯಪಾಲರು ಭಾಷಣ ಮಾಡಿದ್ದಾರೆ, ಅದರ ಮೇಲಿನ ಚರ್ಚೆ ವೇಳೆ ಇದು ಚರ್ಚೆ ಆಗಲಿ. ಆರಗ ಜ್ಞಾನೇಂದ್ರ ಗೃಹ ಸಚಿವರು ಆಗಿದ್ದವರು, ಅವರ ಕಾಲದಲ್ಲಿ ಇಂಥ ಎಷ್ಟು ಅಕ್ರಮ ಮದ್ಯದಂಗಡಿ ನಿಲ್ಲಿಸಿದ್ದಾರೆ? ಅಂತ ಚರ್ಚೆ ಆಗಲಿ ಅಂತ ಕೋಲಾಹಕ್ಕೆ ತೆರೆ ಎಳೆದ್ರು.