HomeNewsEntertainmentRishab Shetty - ಹಂಪಿಯಲ್ಲಿ ರಿಷಬ್ ಶೆಟ್ಟಿಯ 'ಜೈ ಹನುಮಾನ್' ಮುಹೂರ್ತ |Kannada Folks

Rishab Shetty – ಹಂಪಿಯಲ್ಲಿ ರಿಷಬ್ ಶೆಟ್ಟಿಯ ‘ಜೈ ಹನುಮಾನ್’ ಮುಹೂರ್ತ |Kannada Folks

ಕಾಂತಾರ ಯಶಸ್ಸಿನ ನಂತರ ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಪ್ರಶಾಂತ್ ವರ್ಮ ನಿರ್ದೇಶನದ, ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಚಿತ್ರದ ಮುಹೂರ್ತ ಫೆಬ್ರವರಿ 22 ರಂದು ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ನೆರವೇರಲಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗಿರುವ ಈ ಪವಿತ್ರ ಸ್ಥಳದಲ್ಲಿ ರಿಷಬ್ ಶೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Rishab Shetty – ಹಂಪಿಯಲ್ಲಿ ರಿಷಬ್ ಶೆಟ್ಟಿಯ ‘ಜೈ ಹನುಮಾನ್’ ಮುಹೂರ್ತ: ಕಾಂತಾರ’ ಸ್ಟಾರ್’ನ ಮುಂದಿನ ದೊಡ್ಡ ಪಾತ್ರ

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಈ ಚಿತ್ರದ ಬಳಿಕ ಅವರು ಒಂದು ದೀರ್ಘ ಗ್ಯಾಪ್ ತೆಗೆದುಕೊಂಡರು. ಕುಟುಂಬದ ಜೊತೆ ಸಮಯ ಕಳೆದರು. ಈಗ ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ‘ಹನುಮಾನ್ 2’ ಚಿತ್ರದ ಶೂಟ್​​ನಲ್ಲಿ ಅವರು ಬ್ಯುಸಿ ಆಗಲಿದ್ದಾರೆ. ಈ ಚಿತ್ರಕ್ಕೆ ಕರ್ನಾಟಕದಲ್ಲೇ ಮುಹೂರ್ತ ನಡೆಯಲಿದೆ ಎಂಬುದು ವಿಶೇಷ.Rishab Shetty's New Movie: ಪ್ರಖ್ಯಾತ ತೆಲುಗು ನಿರ್ಮಾಣ ಸಂಸ್ಥೆ ಜೊತೆ ರಿಷಬ್‌  ಶೆಟ್ಟಿ ಸಿನಿಮಾ ಮಾಡೋದು ಫಿಕ್ಸ್! | Kannada Actor Fame Rishab Shetty New Movie  With Sithara Entertainments | Asianet Suvarna NewsRead this – Highlights news of the day-ದಿನದ ಪ್ರಮುಖ ಸುದ್ದಿಗಳು

‘ಹನುಮಾನ್’ ಸಿನಿಮಾ 2024ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಪ್ರಶಾಂತ್ ವರ್ಮ ಅವರು ಇದನ್ನು ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರದ ಸೀಕ್ವೆಲ್​​ ‘ಜೈ ಹನುಮಾನ್’ ಸಿನಿಮಾಗೆ ಅವರೇ ನಿರ್ದೇಶನ ಮಾಡಲು ರೆಡಿ ಆಗಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಗೆ ತರುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಭಾನುವಾರ (ಫೆಬ್ರವರಿ 22) ನಡೆಯಲಿದೆ.

ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಸಿನಿಮಾದ ಮುಹೂರ್ತ ನಡೆಯಲಿದೆ. ಇದು ತೆಲುಗು ಸಿನಿಮಾ ಆದರೂ, ಕರ್ನಾಟಕದಲ್ಲಿ ಮುಹೂರ್ತ ನಡೆಯಲು ಕಾರಣವೂ ಇದೆ. ಹನುಮ ಹುಟ್ಟಿದ್ದು, ಹಂಪಿಯಲ್ಲಿ ಎಂಬುದು ಪುರಾಣದಲ್ಲಿ ಇದೆ. ಈ ಕಾರಣದಿಂದ ಈ ಜಾಗವನ್ನು ಮುಹೂರ್ತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾನ ತೆಲುಗಿನಲ್ಲಿ ‘ಪುಷ್ಪ’ದಂತಹ ಚಿತ್ರಗಳನ್ನು ನೀಡಿದ ಮೈತ್ರಿ ಮೂವೀ ಮೇಕರ್ಸ್ ಚಿತ್ರವನ್ನು ನಿರ್ಮಿಸುತ್ತಿದೆ.

Read this – MLA Bairati Basavaraj Remanded in Judicial Custody-ಶಾಸಕ ಬೈರತಿ ಬಸವರಾಜ್ ಗೆ |Kannaad Folks

ರಿಷಬ್ ಶೆಟ್ಟಿ ಹಾಗೂ ತಂಡ ಈಗಾಗಲೇ ಹಂಪಿ ತಲುಪಿದೆ. ರಿಷಬ್ ಅವರನ್ನು ಹನುಮಂತನ ಲುಕ್​ನಲ್ಲಿ ನೋಡಲು ಅಭಿಮಾನಿಗಳೂ ಕಾತುರದಿಂದ ಕಾಯುತ್ತಿದ್ದಾರೆ. ‘ಕಾಂತಾರ’ ಹಿಟ್ ಆದ ಬಳಿಕ ರಿಷಬ್ ಅವರನ್ನು ಇದೇ ಮಾದರಿಯ ಪಾತ್ರಗಳು ಅರಸಿ ಬರುತ್ತಿವೆ ಅನ್ನೋದು ವಿಶೇಷ. ಅವರು ಖುಷಿ ಖುಷಿಯಿಂದಲೇ ಈ ರೀತಿಯ ಪಾತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರ ಸಿನಿಮಾ ಆಯ್ಕೆ ಬಗ್ಗೆ ಅವರ ಅಭಿಮಾನಿಗಳಿಗೂ ಖುಷಿ ಇದೆ. ‘ಜೈ ಹನುಮಾನ್’ ಮಾತ್ರವಲ್ಲದೆ, ಶಿವಾಜಿ ಕುರಿತ ಸಿನಿಮಾದಲ್ಲೂ ರಿಷಬ್ ನಟಿಸುತ್ತಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×